ಹೆಚ್ಚುತ್ತಿರುವ ಜನಸಂಖ್ಯೆಯು ವಿಕಾಸಕ್ಕೆ ಮಾರಕ ! – ಯೋಗಿ ಆದಿತ್ಯನಾಥ

ಸ್ವಾತಂತ್ರ್ಯನಂತರದ ೭೪ ವರ್ಷಗಳಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದ ಕಾರಣ ಇಂದು ದೇಶವು ಜನಸಂಖ್ಯಾಸ್ಫೋಟದ ತುತ್ತತುದಿಯಲ್ಲಿ ನಿಂತಿದೆ. ಈಗ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಸ್ವಲ್ಪವಾದರೂ ಪರಿಣಾಮವಾಗಬಹುದೆಂದು ಅಪೇಕ್ಷಿಸಬಹುದು !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹೆಚ್ಚುತ್ತಿರುವ ಜನಸಂಖ್ಯೆಯು ವಿಕಾಸಕ್ಕೆ ಮಾರಕವಾಗುತ್ತದೆ. ಜನಸಂಖ್ಯಾ ನಿಯಂತ್ರಣಕ್ಕಾಗಿ ಇನ್ನಷ್ಟು ಪ್ರಯತ್ನಿಸುವ ಅವಶ್ಯಕತೆಯಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ರಾಜ್ಯದಲ್ಲಿ ಪ್ರಸ್ತಾಪಿಸಲಾದ ಜನಸಂಖ್ಯಾ ನಿಯಂತ್ರಣ ಕಾನೂನಿನ ಬಗ್ಗೆ ಮಾತನಾಡುತ್ತಿರುವಾಗ ಹೇಳಿದರು.

ಯೋಗಿ ಆದಿತ್ಯನಾಥರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಈ ಬಗ್ಗೆ ಜಾಗರೂಕತೆಯ ನಿಲುವು ಇಟ್ಟುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ನಾಗರಿಕನಿಗೆ ಜನಸಂಖ್ಯಾ ನೀತಿಯೊಂದಿಗೆ ಸಂಬಂಧವಿದೆ. ಹೆಚ್ಚಾಗುತ್ತಿರುವ ಜನಸಂಖ್ಯೆಯು ಬಡತನಕ್ಕೆ ಕಾರಣವಾಗಬಹುದು. ೨ ಮಕ್ಕಳ ನಡುವೆಯೂ ಸೂಕ್ತವಾದ ಅಂತರವಿರಬೇಕು. ಒಂದುವೇಳೆ ಸೂಕ್ತವಾದ ಅಂತರವಿರದೇ ಇದ್ದಲ್ಲಿ ಅವರ ಪೋಷಣೆಯೂ ಸರಿಯಾಗಿ ಆಗುವುದಿಲ್ಲ. ಅದರ ಮೇಲೆಯೂ ಪರಿಣಾಮ ಆಗುತ್ತದೆ. ಬಡತನ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಪರಸ್ಪರ ಸಂಬಂಧವಿದೆ.

೨. ಸಮಾಜದಲ್ಲಿನ ವಿವಿಧ ಘಟಕಗಳ ವಿಚಾರ ಮಾಡಿ ಸರಕಾರವು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದು ಕೇವಲ ಜನಸಂಖ್ಯಾ ನಿಯಂತ್ರಣದೊಂದಿಗೆ ಸಂಬಂಧಿಸಿಲ್ಲ; ಬದಲಾಗಿ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿನ ಸುಖ ಮತ್ತು ಸಮೃದ್ಧಿಯ ಮಾರ್ಗವನ್ನು ಸುಗಮ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶ ಸರಕಾರದ ‘ಜನಸಂಖ್ಯಾ ನೀತಿ’ಯ ಅಡಿಯಲ್ಲಿ ಏನೆಲ್ಲಾ ಇರಲಿದೆ ?

೨೦೨೧ ರಿಂದ ೨೦೩೦ ತನಕದ ಪ್ರಸ್ತಾಪಿತ ‘ಜನಸಂಖ್ಯಾ ನಿಯಂತ್ರಣ ನೀತಿ’ಯಲ್ಲಿ ಒಳಪಡುವ ಕುಟುಂಬ ಯೋಜನೆಯ ಕಾರ್ಯಕ್ರಮದ ಮೂಲಕ ಗರ್ಭನಿರೋಧಕ ಉಪಾಯಗಳ ಸೌಲಭ್ಯವನ್ನು ಹೆಚ್ಚಿಸಲಾಗುವುದು. ಅದೇರೀತಿ ಸುರಕ್ಷಿತ ಗರ್ಭಪಾತದ ವ್ಯವಸ್ಥೆಗಳನ್ನು ನಿರ್ಮಿಸಲಾಗುವುದು. ೧೧ ರಿಂದ ೧೯ ವರ್ಷದ ಯುವಕರಿಗೆ ಪೋಷಣೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ನೀಡುವುದರೊಂದಿಗೆ ಹಿರಿಯರ ಆರೈಕೆಗಾಗಿ ವ್ಯಾಪಕವಾದ ವ್ಯವಸೆಯೂ ಇದರಲ್ಲಿ ಒಳಗೊಂಡಿದೆ.