ಕಟ್ಟುನಿಟ್ಟಾದ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ರಚಿಸಿದರೆ ದೇಶದ ಶೇಕಡಾ ೫೦ ರಷ್ಟು ಸಮಸ್ಯೆ ಕಡಿಮೆಯಾಗುತ್ತದೆ ! – ಅಶ್ವಿನಿ ಉಪಾಧ್ಯಾಯ, ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯ

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು ಹೇಳಲಾಗುತ್ತದೆ; ಆದರೆ ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಈಗಾಗಲೇ ಹತ್ತು ಪಟ್ಟು ಹೆಚ್ಚು ಕಾಲು ಚಾಚಿದೆ. ಭಾರತವು ವಿಶ್ವದ ಶೇಕಡಾ ೨ ರಷ್ಟು ಭೂಮಿಯನ್ನು ಮತ್ತು ಶೇಕಡಾ ೪ ರಷ್ಟು ಕುಡಿಯುವ ನೀರನ್ನು ಹೊಂದಿದೆ; ಆದರೆ ಜನಸಂಖ್ಯೆ ಮಾತ್ರ ಶೇ. ೨೦ ರಷ್ಟಿದೆ. ಭಾರತದಲ್ಲಿ ನೀರು, ಅರಣ್ಯ, ಭೂ ಸಮಸ್ಯೆಗಳು; ಆಹಾರ, ಬಟ್ಟೆ, ನಿವಾಸದ ಸಮಸ್ಯೆಗಳು; ಬಡತನ, ಹಸಿವು, ನಿರುದ್ಯೋಗ ಇತ್ಯಾದಿ ಸಮಸ್ಯೆಗಳು ಹೆಚ್ಚು ಇವೆ. ಅದೇರೀತಿ ಮುಖ್ಯವಾಗಿ ಅಪರಾಧಗಳಂತಹವುಗಳು ಹೆಚ್ಚಾಗಲು ಜನಸಂಖ್ಯೆಯ ಸ್ಫೋಟವೇ ಮೂಲ ಕಾರಣವಾಗಿದೆ. ಆದ್ದರಿಂದ ಯಾವುದೇ ಸರಕಾರವು ಎಷ್ಟೇ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೂ ಅದು ಕೆಲವೇ ವರ್ಷಗಳಲ್ಲಿ ಕಡಿಮೆಯಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಾದ ‘ಜನಸಂಖ್ಯಾ ನಿಯಂತ್ರಣ ಕಾನೂನು’ ಜಾರಿಗೆ ಬಂದರೆ, ದೇಶದ ಶೇಕಡಾ ೫೦ ರಷ್ಟು ಸಮಸ್ಯೆಗಳು ತಕ್ಷಣವೇ ಕೊನೆಗೊಳ್ಳುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಪ್ರತಿಪಾದಿಸಿದರು. ‘ವಿಶ್ವ ಜನಸಂಖ್ಯಾ ದಿನಾಚರಣೆ’ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಜನಸಂಖ್ಯಾ ನಿಯಂತ್ರಣದ ಅವಶ್ಯಕತೆ’ ಕುರಿತು ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ Hindujagruti.org ಜಾಲತಾಣದ ಮೂಲಕ ಮತ್ತು ಯೂಟ್ಯೂಬ್ ಮತ್ತು ಟ್ವಿಟರ್‌ನ ಮೂಲಕ ೨,೯೩೯ ಜನರು ನೇರಪ್ರಸಾರ ವೀಕ್ಷಿಸಿದ್ದಾರೆ.

ನ್ಯಾಯವಾದಿ ಉಪಾಧ್ಯಾಯರು ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ರಚಿಸಿದ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ ೨೦೨೧’ ಅನ್ನು ಬಿಜೆಪಿ ಸಂಸದ ಸುಬ್ರಮಣ್ಯಂ ಸ್ವಾಮಿ ಅವರು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರವು ತಕ್ಷಣವೇ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಕಠಿಣ ಶಿಕ್ಷೆ ವಿಧಿಸದಿದ್ದರೆ, ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಮಯದಲ್ಲಿ ಹಿಂದುತ್ವನಿಷ್ಠ ನಾಯಕಿ ಸಾಧ್ವಿ ಡಾ. ಪ್ರಾಚಿಯವರು ಮಾತನಾಡುತ್ತಾ, ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ಸಾರಿಗೆ-ಸೌಲಭ್ಯಗಳು ಕಡಿಮೆ ಬೀಳುತ್ತಿವೆ, ಇದನ್ನು ನಾವು ಕೊರೊನಾ ಅವಧಿಯಲ್ಲಿ ಅನುಭವಿಸಿದ್ದೇವೆ ಈ ಕಾನೂನನ್ನು ಬಹಳ ಹಿಂದೆಯೇ ಅಂಗೀಕರಿಸಬೇಕಾಗಿತ್ತು. ಇಂದು, ರೋಹಿಂಗ್ಯಾಗಳನ್ನು ಹೊರಹಾಕಿದರೆ, ‘ಜಾತ್ಯತೀತ’ ಮತ್ತು ಎಡಪಂಥೀಯ ವಿಚಾರವಾದಿಗಳು ಎದೆ ಬಡಿದುಕೊಳ್ಳಲು ಪ್ರಾರಂಭಿಸುತ್ತಾರೆ; ಆದರೆ ಲಕ್ಷಾಂತರ ಕಾಶ್ಮೀರಿ ಹಿಂದೂಗಳು ಸ್ಥಳಾಂತರಗೊಂಡು ತಮ್ಮ ದೇಶದಲ್ಲಿ ಡೇರೆಗಳಲ್ಲಿ ವಾಸವಾಗಿದ್ದಾಗ, ಈ ‘ಜಾತ್ಯತೀತ’ ಮತ್ತು ಎಡಪಂಥೀಯ ಜನರು ಎಲ್ಲಿಗೆ ಹೋಗಿದ್ದರು ? ಕಳೆದ ೭೦ ವರ್ಷಗಳಲ್ಲಿ ನುಸುಳುಕೋರರನ್ನು ವಾಸಿಸಲು ಬಿಟ್ಟ ಕಾರಣ ದೇಶಕ್ಕೆ ‘ಕ್ಯಾನ್ಸರ್’ ಆಗಿರುವಂತಹ ಸ್ಥಿತಿ ಉದ್ಭವಿಸಿದೆ. ಜನಸಂಖ್ಯಾ ನಿಯಂತ್ರಣ ಕಾನೂನಿನ ಮೂಲಕ ಈ ರೋಗದ ಮೇಲೆ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕು. ಇದಕ್ಕಾಗಿ ಮಾ. ಮೋದಿಜಿ ಮತ್ತು ಮಾ. ಅಮಿತ ಶಾಹ ಅವರು ಆದಷ್ಟು ಬೇಗ ದೇಶಾದ್ಯಂತ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಈ ಸಮಯದಲ್ಲಿ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ ಅವರು, ಕಳೆದ ಹಲವಾರು ವರ್ಷಗಳಿಂದ ಹಿಂದೂಗಳು ‘ಹಮ್ ದೋ-ಹಮರೆ ದೋ’ ಅನ್ನು ಅನುಸರಿಸುತ್ತಿದ್ದಾರೆ; ಆದರೆ, ಅಲ್ಪಸಂಖ್ಯಾತ ಸಮುದಾಯವು ‘ಹಮ್ ಪಾಚ್-ಹಮಾರೆ ಪಾಚ್ಚಿಸ್’ ನೀತಿಯನ್ನು ಅಳವಡಿಸಿಕೊಂಡ ಕಾರಣ ಅವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಇದರ ದುಷ್ಪರಿಣಾಮವನ್ನು ಇಡೀ ದೇಶವು ಅನುಭವಿಸುತ್ತಿದೆ. ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ಬೇಕು, ಅದಕ್ಕಾಗಿ ೨೨೫ ಸಂಸದರು, ೧,೦೦೦ ಕ್ಕೂ ಹೆಚ್ಚು ಶಾಸಕರು, ೫,೦೦೦ ಗ್ರಾಮ ಪಂಚಾಯಿತಿಗಳು ಮತ್ತು ೨.೫ ಕೋಟಿ ನಾಗರಿಕರು ಇದನ್ನು ಬೆಂಬಲಿಸುತ್ತಾ ಈ ಕಾನೂನನ್ನು ತರುವಂತೆ ಒತ್ತಾಯಿಸಿದ್ದಾರೆ, ಆದರೂ ಇನ್ನೂ ಈ ಕಾನೂನು ಅಂಗೀಕಾರಗೊಂಡಿಲ್ಲ. ಕಾನೂನು ಜಾರಿಗೆ ಬಂದರೂ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾನೂನು ಪಾಲಿಸದ ಜನರಿದ್ದಾರೆ, ಆದ್ದರಿಂದ ಇದನ್ನು ಸರಕಾರವು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು.