ಕುತುಬಮಿನಾರ ಪ್ರಾಚೀನ ವಿಷ್ಣು ದೇವಸ್ಥಾನದ ‘ಗರುಡ ಸ್ಥಂಭ’ವಾಗಿದ್ದರಿಂದ ಅದನ್ನು ಹಿಂದೂಗಳಿಗೆ ಒಪ್ಪಿಸಬೇಕು !- ವಿಶ್ವ ಹಿಂದೂ ಪರಿಷತ್ತು

ಇಲ್ಲಿನ ಕುತುಬಮಿನಾರಿನ ಪರಿಸರದಲ್ಲಿರುವ ಶ್ರೀ ಗಣೇಶನ ಮೂರ್ತಿಯನ್ನು ಸ್ಥಳಾಂತರಿಸಿ ಅಲ್ಲಿ ಸಂಗ್ರಹಾಲಯವನ್ನು ಇಡುವ ಬಗ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿದರು.

ಗುರುಗ್ರಾಮ್ (ಹರಿಯಾಣ)ದಲ್ಲಿ ೨೨ ಕಿಮೀ ಬೆನ್ನಟ್ಟಿದ ನಂತರ ಗೋಕಳ್ಳರ ಬಂಧನ

ಗೋರಕ್ಷಕರು ಮತ್ತು ಪೊಲೀಸರು ೨೨ ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ ಟ್ರಕ್‌ನಿಂದ ಅಕ್ರಮವಾಗಿ ಜಾವುವಾರುಗಳನ್ನು ಸಾಗಿಸುತ್ತಿದ್ದ ೬ ಗೋಕಳ್ಳರನ್ನು ಬಂಧಿಸಿದ್ದಾರೆ. ಬೆನ್ನಟ್ಟಿದ ಸಂದರ್ಭದಲ್ಲಿ ಗೋಕಳ್ಳರು ಚಲಿಸುತ್ತಿದ್ದ ಲಾರಿಯಿಂದ ೭ ಹಸುಗಳನ್ನು ಎಸೆದರು.

ಕಟನಿ (ಮಧ್ಯಪ್ರದೇಶ) ಇಲ್ಲಿ ರೈಲು ನಿಲ್ದಾಣ ಪ್ರದೇಶದಲ್ಲಿನ ಹಳೆಯ ಶ್ರೀರಾಮ ಮಂದಿರದ ಮುಂಭಾಗದ ಗೋಡೆಯನ್ನು ಹಿಂದೂ ಸಂಘಟನೆಗಳು ಕೆಡವಿದವು !

ಕೆಲವು ವರ್ಷಗಳ ಹಿಂದೆ ರೈಲ್ವೇ ಆಡಳಿತವು ಕಟನಿಯ ರೈಲು ನಿಲ್ದಾಣದ ಪ್ರದೇಶದ ಹಳೆಯ ಶ್ರೀ ರಾಮ ಮಂದಿರದ ಮುಂಭಾಗದಲ್ಲಿ ಗೋಡೆಯೊಂದನ್ನು ನಿರ್ಮಿಸಿತ್ತು. ಇದರಿಂದ ದೇವಸ್ಥಾನಕ್ಕೆ ತೆರಳಲು ಭಕ್ತರು ಪರದಾಡುವಂತಾಗಿತ್ತು. ರೈಲ್ವೇ ಆಡಳಿತದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗಾಗ್ಗೆ ವಿರೋಧ ವ್ಯಕ್ತಪಡಿಸಿದ್ದವು.

ದೇಶದ ೭೭೫ ಜಿಲ್ಲೆಗಳ ಪೈಕಿ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರು !

ಎಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಅಲ್ಲಿ ರಾಜ್ಯ ಸರಕಾರ ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಬಹುದು ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಲ್ಲಾವಾರು ಜನಸಂಖ್ಯೆಯನ್ನು ಗಮನಿಸಿದರೆ ದೇಶದ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರಿದ್ದಾರೆ.

ಬಿಹಾರದಲ್ಲಿ ಒಟ್ಟು ೫೦೦ ಟನ್ ತೂಕದ ಉಕ್ಕಿನ ಸೇತುವೆಯನ್ನು ಕೆಡವಿ ವಸ್ತುಗಳನ್ನು ಕದ್ದರು !

ಹೀಗಿದ್ದರೆ ಸರಕಾರಿ ಇಲಾಖೆಗಳಲ್ಲಿರುವ ಭ್ರಷ್ಟಾಚಾರವು ಯಾವ ಮಟ್ಟಕ್ಕೆ ತಲುಪಿದೆ ಎಂಬುದರ ಕಲ್ಪನೆ ಬಂದಿರಬಹುದು. ಇಂತಹ ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ಏಕೆ ನೀಡಬಾರದು ?

….ಹಾಗಾದರೆ ಶ್ರೀರಾಮ ಶ್ರೀಕೃಷ್ಣರ ಜನ್ಮದಿನದಂದು ಏಕೆ ರಜೆಯಿಲ್ಲ ?

ಇಂತಹ ಪ್ರಶ್ನೆಗಳು ಹುಟ್ಟುವ ಮೊದಲೇ ಕೇಂದ್ರದ ಭಾಜಪ ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಈಗಲಾದರೂ ಪ್ರಯತ್ನಗಳಾಗಬೇಕು, ಎಂಬ ಅಪೇಕ್ಷೆ !

ಕೋಡಿಮಠದ ಶ್ರೀಗಳಿಂದ ಹೊಸ ವರ್ಷದ ಭವಿಷ್ಯವಾಣಿ

ಹೊಸ ವರ್ಷದಲ್ಲಿ ಧಾರ್ಮಿಕ ಗಲಭೆ, ಅಶಾಂತಿ ಹೆಚ್ಚಾಗಲಿದೆ. ಜಗತ್ತು ಇನ್ನಷ್ಟು ಗೊಂದಲಮಯವಾಗಲಿದೆ ಎಂದು ಕೋಡಿ ಮಠದಿಂದ ಭವಿಷ್ಯ ನುಡಿದರು. ‘ಹೊಸ ವರ್ಷ ಹೇಗಿರುತ್ತೆ ?’, ‘ಮಳೆ-ಬೆಳೆ ಹೇಗಿರುತ್ತೆ?’, ಎಂದು ಹಲವು ವರ್ಷಗಳಿಂದ ಕೋಡಿಮಠ ಭವಿಷ್ಯ ನುಡಿಯುತ್ತಿದೆ.

ಹಿಂದೂ ತೀರ್ಥಯಾತ್ರೆಗೆ ಹೋಗಲು ಮುಸಲ್ಮಾನ ಚಾಲಕರಿರುವ ವಾಹನದಲ್ಲಿ ಕೂರಬಾರದು !

ಇಂತಹ ಮನವಿ ಮಾಡುವ ಹಿಂದೂ ಸಂಘಟನೆಗಳನ್ನು ‘ಮತಾಂಧ’ ಎಂದು ಕರೆದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ, ಆದರೆ ‘ಇಂತಹ ಮನವಿಯನ್ನು ಮಾಡುವ ಸಮಯ ಏಕೆ ಬಂತು ?’, ಮತ್ತು ‘ಅವರಿಗೆ ಅಭದ್ರತೆಯ ಭಾವನೆ ಏಕೆ ಬರುತ್ತಿದೆ ?’, ಎಂಬುದರ ತನಿಖೆ ನಡೆಸುವುದು ಅಗತ್ಯವಿದೆ ! – ಸಂಪಾದಕರು

ಶ್ರೀನಗರದ ಮಸೀದಿಯ ಹೊರಗೆ ಮತಾಂಧರಿಂದ ಭಾರತ ವಿರೋಧಿ ಘೋಷಣೆ

ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಧರ್ಮವಿರುತ್ತದೆ ಮತ್ತು ಅವರು ಅವರ ಧಾರ್ಮಿಕ ಸ್ಥಳಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಅದರದೊಂದು ಉದಾಹರಣೆ ! ಈ ಕುರಿತು ದೇಶದ ಕಪಟ ಜಾತ್ಯತೀತವಾದಿಗಳು ಎಂದಿಗೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವೀಟರ ಖಾತೆ ಹ್ಯಾಕ್ !

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ ಖಾತೆಯನ್ನು ಹ್ಯಾಕ್ ಮಾಡಬಹುದಾದರೆ ಸಾಮಾನ್ಯ ನಾಗರಿಕರ ಸಾಮಾಜಿಕ ಮಾಧ್ಯಮ ಖಾತೆಗಳು ಎಷ್ಟರ ಮಟ್ಟಿಗೆ ಭದ್ರತೆ ಇದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ !