ಮಹಾರಾಷ್ಟ್ರದ ಸಹಕಾರ ಕ್ಷೇತ್ರಕ್ಕೆ 3,೦೦೦ ಕೋಟಿ ರೂಪಾಯಿ

ಇಚಲಕರಂಜಿ (ಜಿಲ್ಲೆ ಕೊಲ್ಹಾಪುರ) – ಪಶ್ಚಿಮ ಮಹಾಷ್ಟ್ರದ ಸಹಕಾರ ಮತ್ತು ಸಕ್ಕರೆ ಉದ್ಯಮಕ್ಕೆ ಬಲ ನೀಡುವ ಮಹತ್ವದ ಘೋಷಣೆಯನ್ನು ಮಾಡಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ಮಹಾರಾಷ್ಟ್ರದ ಸಹಕಾರ ಕ್ಷೇತ್ರಕ್ಕಾಗಿ 3,೦೦೦ ಕೋಟಿ ರೂಪಾಯಿಗಳ ಎರಡು ದೊಡ್ಡ ಯೋಜನೆಗಳನ್ನು ಘೋಷಿಸಿದ್ದಾರೆ. ‘ಕೊಲ್ಹಾಪುರ ಜಿಲ್ಲೆಯಲ್ಲಿ ಸುಮಾರು 1,500 ಕೋಟಿ ರೂಪಾಯಿಗಳ ಸಹಕಾರಿ ಸಂಸ್ಕರಣಾ ಸಾಮೂಹಿಕ ಯೋಜನೆ, ಹಾಗೂ ಪುಣೆಯಲ್ಲಿ ಮುಚ್ಚಿಹೋಗಿರುವ ನ್ಯಾಷನಲ್ ಹೆವಿ ಇಂಜಿನಿಯರಿಂಗ್ ಕೋ-ಆಪರೇಟಿವ್ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಲು ಮತ್ತೊಂದು 1,500 ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಲಾಗುವುದು’, ಎಂದು ಅವರು ತಿಳಿಸಿದರು. ಇಚಲಕರಂಜಿಯ ‘ಕಲ್ಲಪ್ಪಣ್ಣ ಆವಾಡೆ ಟೆಸ್ಟ್ ಟೈಲ್ಸ್ ಪಾರ್ಕ್’ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ ಶಿಂದೆ, ಉಸ್ತುವಾರಿ ಸಚಿವ ಪ್ರಕಾಶ ಆಬಿಟಕರ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್, ಶಿವಸೇನೆಯ ಸಂಸದ ಧೈರ್ಯಶೀಲ ಮಾನೆ, ಭಾಜಪ ಸಂಸದ ಧನಂಜಯ ಮಹಾಡಿಕ್, ಶಾಸಕರುಗಳಾದ ರಾಹುಲ್ ಆವಾಡೆ, ಶಿವಾಜಿ ಪಾಟೀಲ್, ಅಶೋಕ ಮಾನೆ, ರವೀಂದ್ರ ಚೌಹಾಣ್ ಮತ್ತು ರಾಜೇಂದ್ರ ಪಾಟೀಲ್-ಯಡ್ರಾವಕರ, ಮಹಾಪೌರ ಉದಯ ಧಾತುಂಡ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಸಚಿವ ಅಮಿತ್ ಶಾ ಅವರು ಮುಂದುವರಿದು ಮಾತನಾಡಿ, ಸಹಕಾರ ಸಚಿವಾಲಯದ ಸ್ಥಾಪನೆಯ ನಂತರ ಸಕ್ಕರೆ ಉದ್ಯಮಕ್ಕೆ ಸ್ಥಿರತೆ ನೀಡಲು ಕೇಂದ್ರ ಸರಕಾರವು ಅನೇಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಕ್ಕರೆ ಕಾರ್ಖಾನೆಗಳ ಮೇಲಿದ್ದ ಅಂದಾಜು 46,000 ಕೋಟಿ ರೂಪಾಯಿಗಳ ಆದಾಯ ತೆರಿಗೆಯನ್ನು ಮನ್ನಾ ಮಾಡಲಾಗಿದ್ದು, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ವತಿಯಿಂದ 10,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಾಲವನ್ನು ಒದಗಿಸಲಾಗಿದೆ. ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಎಥೆನಾಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇಕಡಾ 28% ರಿಂದ ಶೇಕಡಾ 5% ಕ್ಕೆ ಇಳಿಸುವಂತಹ ನಿರ್ಧಾರಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ನವಚೈತನ್ಯ ಸಿಕ್ಕಿದೆ. ಎಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಗಳ ಉಪ-ಉತ್ಪನ್ನಗಳನ್ನು ಸಂಸ್ಕರಿಸಲು ಕೊಲ್ಹಾಪುರ ಜಿಲ್ಲೆಯಲ್ಲಿ ಸುಮಾರು 1,500 ಕೋಟಿ ರೂಪಾಯಿಗಳ ಸಹಕಾರಿ ಸಂಸ್ಕರಣಾ ಯೋಜನೆಯನ್ನು ಸ್ಥಾಪಿಸಲಾಗುವುದು. ಈ ಯೋಜನೆಯಿಂದ ಬರುವ ಲಾಭವನ್ನು ಮರಳಿ ಪಾಲುದಾರ ಸಕ್ಕರೆ ಕಾರ್ಖಾನೆಗಳಿಗೆ ವಿತರಿಸಲಾಗುವುದರಿಂದ ರೈತರು, ಸಹಕಾರ ಸಂಸ್ಥೆಗಳು ಮತ್ತು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಲಾಭವಾಗಲಿದೆ ಎಂದು ಹೇಳಿದರು.
ಇಚಲಕರಂಜಿಗೆ ಹಳೆಯ ದಾನವಾಡ ಯೋಜನೆಯಿಂದ ನೀರು ಪೂರೈಕೆ ಮಾಡಲಾಗುವುದು! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿ, 2051 ರ ವರ್ಷದವರೆಗೆ ಇಚಲಕರಂಜಿ ನಗರಕ್ಕೆ ಶಿರೋಳ ತಾಲೂಕಿನ ಹಳೆಯ ದಾನವಾಡನಿಂದ ಕುಡಿಯುವ ನೀರು ಒದಗಿಸಲಾಗುವುದು ಮತ್ತು ಅದಕ್ಕೆ ಅಗತ್ಯವಿರುವ ಧನಸಹಾಯವನ್ನು ರಾಜ್ಯ ಸರಕಾರ ನೀಡಲಿದೆ. ‘ಪವರ್‌ಲೂಮ್’ (ವಿದ್ಯುತ್ ಚಾಲಿತ ಮಗ್ಗ) ಉದ್ಯಮಕ್ಕಾಗಿ ‘ಸೋಲಾರ್ ಪಾರ್ಕ್’ (ಸೌರ ಉದ್ಯಾನ) ಸ್ಥಾಪಿಸಿ ಅಗ್ಗದ ಮತ್ತು ಸ್ವಚ್ಛ ವಿದ್ಯುತ್ ಲಭ್ಯವಾಗುವಂತೆ ಮಾಡಲಾಗುವುದು’’ ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”