ನಾವು ನಿರ್ಮಾಪಕರಾಗುವ ದಿನವೇ ನಾವು ನಿರ್ಣಾಯಕರೂ ಆಗುತ್ತೇವೆ! - ಪ್ರಧಾನಮಂತ್ರಿ

ಕೊಲಕಾತಾ (ಬಂಗಾಳ) – ಇಲ್ಲಿನ ಶ್ಯಾಮಪ್ರಸಾದ್ ಮುಖರ್ಜಿ ಬಂದರಿನಲ್ಲಿ 3 ಸ್ವದೇಶಿ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾದವು. ದೇಶದಲ್ಲಿಯೇ ವಿನ್ಯಾಸಗೊಳಿಸಿ ಮತ್ತು ಉತ್ಪಾದಿಸಲಾದ ಈ ಯುದ್ಧನೌಕೆಗಳ ಸೇರ್ಪಡೆಯಿಂದ ದೇಶದ ಸಾಮರ್ಥ್ಯ ಹೆಚ್ಚಾಗಲಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಈ ಯುದ್ಧನೌಕೆಗಳನ್ನು ಭಾರತದಲ್ಲಿಯೇ ನಿರ್ಮಿಸಲಾಗಿದೆ. ಇದಕ್ಕಾಗಿ ಭಾರತೀಯ ಇಂಜಿನಿಯರ್‌ಗಳು ತಮ್ಮ ಕೌಶಲ್ಯ ಮತ್ತು ಪರಿಶ್ರಮವನ್ನು ಹಾಕಿದ್ದಾರೆ. ಇದು ಹೊಸ ಭಾರತದ ಅತಿದೊಡ್ಡ ಶಕ್ತಿಯಾಗಿದೆ. ನನ್ನ ಶಕ್ತಿಯ ಗುರುತು ಜಗತ್ತಿನ ಮಾರುಕಟ್ಟೆಯಾಗುವುದರಲ್ಲಿ ಇಲ್ಲ, ನನ್ನ ಆತ್ಮನಿರ್ಭರತೆಯಲ್ಲಿ (ಸ್ವಾವಲಂಬನೆ) ಇದೆ. ಭಾರತವು ನಿರ್ಮಾಪಕವಾಗಬೇಕು. ನಾವು ನಿರ್ಮಾಪಕರಾಗುವ ದಿನವೇ ನಾವು ನಿರ್ಣಾಯಕರೂ ಆಗುತ್ತೇವೆ.

ಈ ಯುದ್ಧನೌಕೆಗಳ ಹೆಸರುಗಳು ಅಡ್ವಾನ್ಸ್ಡ್ ಸ್ಟೆಲ್ತ್ ಫ್ರಿಗೇಟ್ ಐ.ಎನ್.ಎಸ್. ದೂನಗಿರಿ, ಸರ್ವೇ ವೆಸೆಲ್ ಐ.ಎನ್.ಎಸ್. ಸಂಶೋಧಕ್ ಮತ್ತು ಆ್ಯಂಟಿ-ಸಬ್‌ಮರೀನ್ ವಾರ್‌ಫೇರ್ ಶಾಲ್ಲೋ ವಾಟರ್ ಕ್ರಾಫ್ಟ್ ಐ.ಎನ್.ಎಸ್. ಅಗ್ರಯ್ ಎಂದಾಗಿದೆ. ಈ ನೌಕೆಗಳ ವಿನ್ಯಾಸವನ್ನು ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋ ಮಾಡಿದ್ದು, ಕೊಲಕಾತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಅವುಗಳನ್ನು ನಿರ್ಮಿಸಿದೆ.
1. ಐ.ಎನ್.ಎಸ್. ದೂನಗಿರಿ : ಬ್ರಹ್ಮೋಸ್ ನಂತಹ ಕ್ಷಿಪಣಿಗಳಿಂದ ಸಜ್ಜುಗೊಂಡಿದೆ
ಈ ಯುದ್ಧನೌಕೆಯು ಮೇಲ್ಮೈಯಿಂದ ಮೇಲ್ಮೈಗೆ ದಾಳಿ ಮಾಡುವ ಸೂಪರ್‌ಸಾನಿಕ್ ಕ್ಷಿಪಣಿ ಬ್ರಹ್ಮೋಸ್‌ನಿಂದ ಸಜ್ಜುಗೊಂಡಿದೆ. ಇದರಲ್ಲಿ ಹೆಲಿಕಾಪ್ಟರ್ ಹಾರಿಸುವ ಸಾಮರ್ಥ್ಯವಿದೆ. ಇದರ ಸ್ಟೆಲ್ತ್ (ಗುಪ್ತ) ತಂತ್ರಜ್ಞಾನವು ಶತ್ರುಗಳ ರೇಡಾರ್‌ನಿಂದ ಪಾರಾಗಲು ಸಹಾಯ ಮಾಡುತ್ತದೆ.
2. ಐ.ಎನ್.ಎಸ್. ಸಂಶೋಧಕ್ : ಸಮುದ್ರದ ನಕ್ಷೆ ಮತ್ತು ಸಮೀಕ್ಷೆ ನಡೆಸಲಿದೆ
ಐ.ಎನ್.ಎಸ್. ಸಂಶೋಧಕ್ ಯುದ್ಧನೌಕೆಯ ಕೆಲಸ ಯುದ್ಧ ಮಾಡುವುದಲ್ಲ, ಬದಲಾಗಿ ಸಮುದ್ರದ ಸಮೀಕ್ಷೆ ಮಾಡುವುದಾಗಿದೆ. ಕರಾವಳಿ ಮತ್ತು ಆಳ ಸಮುದ್ರದಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆ, ಸಮುದ್ರದ ದತ್ತಾಂಶ ಸಂಗ್ರಹಣೆ ಮತ್ತು ರಕ್ಷಣಾ-ನಾಗರಿಕ ಬಳಕೆಗೆ ಇದನ್ನು ಸಿದ್ಧಗೊಳಿಸಲಾಗಿದೆ. ಇದು ಸಮುದ್ರದ ಆಳವನ್ನು ಅಳೆಯಬಲ್ಲದು. ನಕ್ಷೆಗಳನ್ನೇ ಅಂದರೆ ನಾಟಿಕಲ್ ಚಾರ್ಟ್ ಅನ್ನು ತಯಾರಿಸಬಲ್ಲದು.
3. ಐ.ಎನ್.ಎಸ್. ಅಗ್ರಯ್ : ಶತ್ರುಗಳ ಜಲಾಂತರ್ಗಾಮಿಗಳನ್ನು ಹುಡುಕಿ ನಾಶಪಡಿಸುವ ಸಾಮರ್ಥ್ಯ
ಐ.ಎನ್.ಎಸ್. ಅಗ್ರಯ್ ಜಲಾಂತರ್ಗಾಮಿ ನಿರೋಧಕ ಉಥಳ ನೀರಿನ ಯುದ್ಧನೌಕೆಯಾಗಿದೆ. ಇದನ್ನು ಹಗುರವಾದ ಟಾರ್ಪಿಡೊ, ಸ್ವದೇಶಿ ರಾಕೆಟ್ ಲಾಂಚರ್ ಮತ್ತು ಸುಧಾರಿತ ಸೋನಾರ್ ವ್ಯವಸ್ಥೆಯಿಂದ ಸಜ್ಜುಗೊಳಿಸಲಾಗಿದೆ. ಇದರಿಂದಾಗಿ ಇದು ಕರಾವಳಿಯಲ್ಲಿ ನಿಯೋಜಿತವಾಗಿರುವ ಶತ್ರುಗಳ ಜಲಾಂತರ್ಗಾಮಿಗಳನ್ನು ಹುಡುಕಿ ಅವುಗಳನ್ನು ಗುರಿಯಾಗಿಸಬಲ್ಲದು. ಇದನ್ನು ಕರಾವಳಿಯ ರಕ್ಷಣೆಗಾಗಿ ನಿಯೋಜಿಸಲಾಗುತ್ತದೆ. ಸಮುದ್ರದಲ್ಲಿ ಸಂಚರಿಸುವ ನೌಕೆಗಳ ಮೇಲೆ ಇದು ನಿಗಾ ಇಡುತ್ತದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”