
ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ಸೈನ್ಯವು ಮುಂದಿನ ಹಲವು ವರ್ಷಗಳಲ್ಲಿ ದಕ್ಷಿಣ ಲೆಬನಾನ್‌ನ ಭದ್ರತಾ ವಲಯದಲ್ಲಿ ನೇಮಕಗೊಳ್ಳುತ್ತದೆ. ಅಮೆರಿಕ ಎಷ್ಟೇ ಒತ್ತಡ ಹೇರಿದರೂ ನಾವು ಹಿಂದೆ ಸರಿಯುವುದಿಲ್ಲ ಎಂಬ ನಿಲುವನ್ನು ಇಸ್ರೇಲ್ ತಳೆದಿದೆ.
ಇಸ್ರೇಲ್‌ನ ಹಣಕಾಸು ಸಚಿವ ಬೆಜಾಲೆಲ್ ಸ್ಮೋಟ್ರಿಚ್ ಅವರ ಹೇಳಿಕೆ,
1. ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ತನ್ನ ಆಯುಧಗಳನ್ನು ಸಂಪೂರ್ಣವಾಗಿ ಕೆಳಗಿಟ್ಟು ಶರಣಾಗದ ಹೊರತು ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸುವುದಿಲ್ಲ. ‘ಇಸ್ರೇಲ್ ಸೈನ್ಯವು ಲೆಬನಾನ್‌ನಿಂದ ಹಿಂದೆ ಸರಿಯಬೇಕು’ ಎಂದು ಅಮೆರಿಕ ಯಾವುದೇ ಔಪಚಾರಿಕ ಬೇಡಿಕೆ ಮಾಡುತ್ತದೆ ಎಂಬ ನಿರೀಕ್ಷೆಯಿಲ್ಲ. ಇಸ್ರೇಲ್ ಭದ್ರತಾ ವಲಯದಲ್ಲಿ ಕೇವಲ ತಾತ್ಕಾಲಿಕ ತಪಾಸಣಾ ಠಾಣೆಗಳ ಬದಲಿಗೆ ಕಾಯಂ ಮಿಲಿಟರಿ ಮೂಲಸೌಕರ್ಯ ಮತ್ತು ನೆಲೆಗಳನ್ನು ಅಭಿವೃದ್ಧಿಪಡಿಸಬಹುದು.
2. ಪ್ರಸ್ತುತ ಇರುವ ಗಡಿ ವ್ಯವಸ್ಥೆಯು ಇಸ್ರೇಲ್‌ನ ಭದ್ರತಾ ಅಗತ್ಯತೆಗಳನ್ನು ಪೂರೈಸುತ್ತಿಲ್ಲ. ದೇಶಕ್ಕೆ ರಕ್ಷಣಾತ್ಮಕವಾಗಿ ಸುರಕ್ಷಿತವಾಗಿರುವ ಗಡಿಗಳ ಅವಶ್ಯಕತೆಯಿದೆ. ಹಿಜ್ಬುಲ್ಲಾ ಹಿಂದೆ ಸರಿಯದ ಹೊರತು ನಾವು ಒಂದು ಮಿಲಿಮೀಟರ್ ಕೂಡ ಹಿಂದೆ ಸರಿಯುವುದಿಲ್ಲ. ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಕ್ಷಣಾ ಸಚಿವರು ಮತ್ತು ನನ್ನ ನಿಲುವು ಒಂದೇ ಆಗಿದೆ.
ಇರಾನ್ ಮತ್ತು ಅಮೆರಿಕ ನಡುವೆ ಸ್ವಿಟ್ಜರ್ಲೆಂಡ್‌ನಲ್ಲಿ ಚರ್ಚೆ
ಇರಾನ್-ಅಮೆರಿಕ ಒಪ್ಪಂದದ ಅನುಷ್ಠಾನಕ್ಕಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಈ ಚರ್ಚೆಯಲ್ಲಿ ಭಾಗವಹಿಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸ್ವಿಟ್ಜರ್ಲೆಂಡ್‌ಗೆ ತಲುಪಿದ್ದಾರೆ. ಮುಂಬರುವ ದಿನಗಳಲ್ಲಿ ಉಭಯ ದೇಶಗಳು ಕದನ ವಿರಾಮ ಒಪ್ಪಂದದ ವಿವಿಧ ಆಯಾಮಗಳ ಕುರಿತು ಚರ್ಚಿಸಲಿವೆ ಎಂದು ನಿರೀಕ್ಷಿಸಲಾಗಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman