ಕುತುಬಮಿನಾರ ಪ್ರಾಚೀನ ವಿಷ್ಣು ದೇವಸ್ಥಾನದ ‘ಗರುಡ ಸ್ಥಂಭ’ವಾಗಿದ್ದರಿಂದ ಅದನ್ನು ಹಿಂದೂಗಳಿಗೆ ಒಪ್ಪಿಸಬೇಕು !- ವಿಶ್ವ ಹಿಂದೂ ಪರಿಷತ್ತು

ಮೂಲತಃ ಈ ರೀತಿಯಲ್ಲಿ ಮನವಿ ಮಾಡುವ ಪ್ರಮೇಯ ಬರಬಾರದು, ಕೇಂದ್ರ ಸರಕಾರವು ಸ್ವತಃ ಇದರ ನಿಜವಾದ ಇತಿಹಾಸವನ್ನು ದೇಶದ ಎದುರಿಗಿಟ್ಟು ಈ ‘ಗರುಡ ಸ್ಥಂಭ’ವನ್ನು ಹಿಂದೂಗಳ ನಿಯಂತ್ರಣಕ್ಕೆ ಒಪ್ಪಿಸಬೇಕು !

ನವದೆಹಲಿ – ಇಲ್ಲಿನ ಕುತುಬಮಿನಾರಿನ ಪರಿಸರದಲ್ಲಿರುವ ಶ್ರೀ ಗಣೇಶನ ಮೂರ್ತಿಯನ್ನು ಸ್ಥಳಾಂತರಿಸಿ ಅಲ್ಲಿ ಸಂಗ್ರಹಾಲಯವನ್ನು ಇಡುವ ಬಗ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿದರು. ಅವರು ಕುತುಬಮಿನಾರನ್ನು ಹಿಂದೂಗಳ ವಶಕ್ಕೆ ಒಪ್ಪಿಸುವ ಹಾಗೂ ಅಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಮನವಿಯನ್ನು ಸ್ವೀಕರಿಸದಿದ್ದರೆ ನ್ಯಾಯಾಲಯದಲ್ಲಿ ಹೋರಾಡುವುದಾಗಿಯೂ ಅವರು ಹೇಳಿದರು.

ವಿಹಿಂಪದ ವಕ್ತಾರರಾದ ವಿನೋದ ಬಂಸಲರವರು ಮಾತನಾಡುತ್ತ ‘ಕುತುಬಮಿನಾರನ್ನು ಯಾವುದೇ ವಿದೇಶಿ ವ್ಯಕ್ತಿ ನಿರ್ಮಿಸಿಲ್ಲ, ಅದು ಹಿಂದೂಗಳ ವಿಷ್ಣು ದೇವಸ್ಥಾನದ ‘ಗರುಡ ಸ್ಥಂಭ’ವಾಗಿದೆ, ಇದಕ್ಕೆ ‘ವಿಷ್ಣು ಸ್ಥಂಬ’ ಎಂದೂ ಹೇಳಲಾಗುತ್ತದೆ. ಈ ವಿಷ್ಣು ದೇವಸ್ಥಾನದೊಂದಿಗೆ ಇಲ್ಲಿನ ೨೭ ಇತರ ದೇವಸ್ಥಾನಗಳು, ಹಾಗೆಯೇ ಜೈನ ದೇವಸ್ಥಾನಗಳನ್ನು ಕೆಡವಿ ಈ ಪರಿಸರದಲ್ಲಿ ಮಿನಾರ ಮತ್ತು ಮಸೀದಿಗಳನ್ನು ಕಟ್ಟಲಾಗಿದೆ, ಏಕೆಂದರೆ ಈ ಸ್ಥಂಬದ ಮೇಲಿನ ಹಾಗೂ ಇಲ್ಲಿನ ಗೋಡೆಗಳ ಮೇಲಿನ ದೇವತೆಗಳ ಮೂರ್ತಿಗಳು ಇದರ ಸಾಕ್ಷಿ ನೀಡುತ್ತಿವೆ’ ಎಂದು ಹೇಳಿದರು.