ಕೋಡಿಮಠದ ಶ್ರೀಗಳಿಂದ ಹೊಸ ವರ್ಷದ ಭವಿಷ್ಯವಾಣಿ

ಇವತ್ತಿಗೂ ಕಾಣದ, ಕೇಳದಂತಹ ಆಘಾತ ಭಾರತದ ಮೇಲೆ ಆಗಲಿದೆ !

ಕೋಡಿಮಠ – ಹೊಸ ವರ್ಷದಲ್ಲಿ ಧಾರ್ಮಿಕ ಗಲಭೆ, ಅಶಾಂತಿ ಹೆಚ್ಚಾಗಲಿದೆ. ಜಗತ್ತು ಇನ್ನಷ್ಟು ಗೊಂದಲಮಯವಾಗಲಿದೆ ಎಂದು ಕೋಡಿ ಮಠದಿಂದ ಭವಿಷ್ಯ ನುಡಿದರು. ‘ಹೊಸ ವರ್ಷ ಹೇಗಿರುತ್ತೆ ?’, ‘ಮಳೆ-ಬೆಳೆ ಹೇಗಿರುತ್ತೆ?’, ಎಂದು ಹಲವು ವರ್ಷಗಳಿಂದ ಕೋಡಿಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಈ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯ ನುಡಿಯುತ್ತಾರೆ. ಈ ಭವಿಷ್ಯವಾಣಿಯಲ್ಲಿ ಅನೇಕರಿಗೆ ಅಪಾರ ನಂಬಿಕೆ ಇದೆ. ಈ ವರ್ಷದ ಭವಿಷ್ಯವಾಣಿಯಲ್ಲಿ ‘ಭಾರತಕ್ಕೆ ಹಿಂದೆಂದೂ ಕಂಡರಿಯದ ದುರಂತಗಳು ನಡೆಯಲಿವೆ’, ಹೀಗೆ ಭವಿಷ್ಯವಾಣಿಯಿಂದ ಮುನ್ಸೂಚನೆ ಮತ್ತು ಜನರನ್ನು ಎಚ್ಚರಿಸುತ್ತಾರೆ.

(ಸೌಜನ್ಯ : TV 9 Kannada)

ಕೋಡಿಮಠದ ಭವಿಷ್ಯದಲ್ಲಿ,

೧. ರಾಜಕೀಯ ವಿಫಲ, ಹಲವೆಡೆ ಗೊಂದಲ, ರಾಜಕೀಯ ಬಣಗಳು ಬೀಳುತ್ತವೆ, ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ.

೨. ಅಶಾಂತಿ, ಮತೀಯ ಗಲಭೆ, ಸಾವುನೋವುಗಳುಗಳು ನಡೆಯುತ್ತವೆ. ವಿಶೇಷವೆಂದರೆ ವಿದ್ಯುತ್‌ನಿಂದ ಬಹಳಷ್ಟು ಹಾನಿಯಾಗುತ್ತದೆ.

೩. ಬೆಂಕಿಯಿಂದ ಸಾಕಷ್ಟು ಹಾನಿಯಾಗುತ್ತದೆ, ಗಾಳಿ, ಗುಡುಗು, ಸಿಡಿಲು ಪಿಪರಿತವಾಗುತ್ತದೆ.

೪. ಮಲೆನಾಡು ಬಯಲು ಆಗುತ್ತದೆ ಬಯಲು ಮಲೆನಾಡು ಆಗುವಂತಹ ಮಳೆಯಾಗುತ್ತದೆ.

೫. ಈ ವರ್ಷ ಉತ್ತಮ ಮಳೆಯಾಗಲಿದೆ. ಅನೇಕ ಸ್ಥಳಗಳಲ್ಲಿ ಪ್ರವಾಹ ಉಂಟಾಗುತ್ತದೆ; ಆದರೆ ಹಲವೆಡೆ ಬರಗಾಲವೂ ಇರುತ್ತದೆ.

೬. ಜಗತ್ತು ವಾಯು ಮಾಲಿನ್ಯದಿಂದ ನರಳಲಿದೆ. ಭಾರತದ ರಾಜಧಾನಿ ದೆಹಲಿ ಸೇರಿದಂತೆ ವಿಶ್ವದ ಹಲವು ದೇಶಗಳು ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ.

೭. ಸುಂದರ ಹೆಣ್ಣುಮಕ್ಕಳ ಅಂಗಾಂಗಗಳು ಕಿತ್ತು ತಿನ್ನುತ್ತಾರೆ.