ಇಸ್ಲಾಮಿಕ್ ಧಾರ್ಮಿಕ ಸ್ಥಳಗಳ ಬಗ್ಗೆ ಭಾರತವನ್ನು ಟೀಕಿಸಿದ ಪಾಕ್; ಭಾರತದ ಪ್ರತ್ಯುತ್ತರ !

ನವ ದೆಹಲಿ – ಭಾರತದಲ್ಲಿನ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳ ಬಗ್ಗೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮಾಡಿರುವ ಹೇಳಿಕೆಯನ್ನು ಭಾರತವು ಸಂಪೂರ್ಣವಾಗಿ ತಳ್ಳಿಹಾಕಿದೆ. ಜರ್ದಾರಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯವು, ಜರ್ದಾರಿ ಅವರ ಹೇಳಿಕೆಗಳು ಅತ್ಯಂತ ಅರ್ಥಹೀನ, ದ್ವೇಷದಿಂದ ಕೂಡಿದ ಮತ್ತು ಉದ್ದೇಶಪೂರ್ವಕವಾಗಿ ಮಾಡಿದ ರಾಜಕೀಯ ದಾಳಿಯಾಗಿದೆ. ಅವರಿಗೆ ನೆರೆಹೊರೆಯ ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಅಥವಾ ಮಾತನಾಡಲು ಯಾವುದೇ ನೈತಿಕ ಅಥವಾ ಕಾನೂನುಬದ್ಧ ಹಕ್ಕಿಲ್ಲ. ಸ್ವತಃ ಮಾನವ ಹಕ್ಕುಗಳ ಉಲ್ಲಂಘನೆಯ ಭದ್ರಕೋಟೆಯಾಗಿ ಮಾರ್ಪಟ್ಟಿರುವ ದೇಶವೊಂದು ಭಾರತಕ್ಕೆ ಪಾಠ ಹೇಳಿಕೊಡುತ್ತಿದೆ ಎಂದು ತಿರುಗೇಟು ನೀಡಿದೆ.
ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವವರು ನಮಗೆ ಪಾಠ ಕಲಿಸುವುದು ಬೇಡ ! – ಭಾರತ
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಈ ಬಗ್ಗೆ ಮಾತನಾಡಿ, ಇಡೀ ಜಗತ್ತಿಗೆ ಪಾಕಿಸ್ತಾನದ ನೈಜತೆ ತಿಳಿದಿದೆ. ಜರ್ದಾರಿ ಅವರ ಹೇಳಿಕೆಗಳು ವಿಶೇಷವಾಗಿ ಹಾಸ್ಯಾಸ್ಪದ ಮತ್ತು ನಿರರ್ಥಕವಾಗಿವೆ; ಏಕೆಂದರೆ ಮಾನವ ಹಕ್ಕುಗಳ ವಿಷಯದಲ್ಲಿ ಪಾಕಿಸ್ತಾನ ಅತ್ಯಂತ ಕಳಪೆ ದಾಖಲೆ ಹೊಂದಿದೆ ಎಂಬುದು ಜಗಜ್ಜಾಹೀರಾಗಿದೆ. ಪಾಕ್ ನಲ್ಲಿ ವಿವಿಧ ಧರ್ಮಗಳ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ಪೀಡಿಸುವ ದೊಡ್ಡ ಕುಖ್ಯಾತ ಇತಿಹಾಸವೇ ಇದೆ. ಜರ್ದಾರಿ ಅವರ ಹೇಳಿಕೆಗಳು ಕೇವಲ ಅವರ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ದ್ವೇಷ ಹರಡಲು ಹೂಡಿರುವ ರಾಜಕೀಯ ತಂತ್ರವಾಗಿದೆ. ಜರ್ದಾರಿ ಅವರ ಮಾತುಗಳು ಕಟ್ಟರವಾದಿ ಮತ್ತು ದ್ವೇಷದ ಆಧಾರದ ಮೇಲೆ ನಿಂತಿರುವ ಪಾಕಿಸ್ತಾನದ ರಾಷ್ಟ್ರೀಯ ನೀತಿಯಿಂದ ಪ್ರೇರಿತವಾದಂತೆ ಕಾಣುತ್ತವೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಅನ್ಯ ಧರ್ಮೀಯರ ಮೇಲೆ ದೌರ್ಜನ್ಯ ನಡೆಯುತ್ತಿದೆ !
ಕಳೆದ ಕೆಲವು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಇತರ ಸಂಘಟನೆಗಳು ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿಷಯವನ್ನು ಬಲವಾಗಿ ಎತ್ತಿ ತೋರಿಸಿವೆ. ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಹಿಂದೂ, ಸಿಖ್, ಕ್ರಿಶ್ಚಿಯನ್ ಮತ್ತು ಅಹಮದಿಯಾ ಸಮುದಾಯಗಳ ವಿರುದ್ಧ ಧರ್ಮದ ಆಧಾರದ ಮೇಲೆ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಧರ್ಮ ನಿಂದನೆಯಂತಹ ತಾರತಮ್ಯದ ಕಾನೂನುಗಳಿಂದಾಗಿ ಮತ್ತು ಸರಕಾರದ ಉದಾಸೀನತೆಯಿಂದಾಗಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವು ಅವಿರತವಾಗಿ ಮುಂದುವರಿದಿದೆ.
ಜರ್ದಾರಿ ಹೇಳಿದ್ದೇನು?
ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಭಾರತದಲ್ಲಿನ ಐತಿಹಾಸಿಕ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳ ಧ್ವಂಸ ಮತ್ತು ಅವುಗಳಿಗಿರುವ ಭೀತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ವಾರಾಣಸಿಯ 1,೦೦೦ ವರ್ಷ ಹಳೆಯದಾದ ಮಸೀದಿ ಗಂಜ್ ಶಹೀದಾ ಕೂಡ ಧ್ವಂಸವಾಗುವ ಭೀತಿಯಲ್ಲಿದೆ ಎಂದು ಅವರು ಉಲ್ಲೇಖಿಸಿದ್ದರು. ಇಂತಹ ಕ್ರಮಗಳನ್ನು ತಕ್ಷಣವೇ ನಿಲ್ಲಿಸುವಂತೆ ಭಾರತಕ್ಕೆ ತಿಳಿಸಿದ್ದ ಅವರು, ಇದರಿಂದ ಭಾರತದ ವಿಘಟನೆ ಮತ್ತು ಶಾಶ್ವತ ಅರಾಜಕತೆ ಸೃಷ್ಟಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದರು. ಇಂತಹ ಕ್ರಮವನ್ನು ತಕ್ಷಣ ನಿಲ್ಲಿಸಬೇಕೆಂದು ಕರೆ ನೀಡಿದ ಜರ್ದಾರಿ ಅವರು, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಂಚಿಕೆಯ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಂತೆ ಒತ್ತಾಯಿಸಿದ್ದರು.
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !
ಅಮೆರಿಕ ಎಷ್ಟೇ ಒತ್ತಡ ಹೇರಿದರೂ ಲೆಬನಾನ್ನಿಂದ ಹಿಂದೆ ಸರಿಯುವುದಿಲ್ಲ! – ಇಸ್ರೇಲ್
ಮಾಲ್ಡಾ (ಬಂಗಾಲ) ಗಡಿ: ವಲಸಿಗರನ್ನು ವಾಪಸ್ ಕಳುಹಿಸುವಾಗ ಬಾಂಗ್ಲಾದೇಶೀಯರಿಂದ ವಿರೋಧ
ದೆಹಲಿಯಲ್ಲಿ ರೈಲು ಹತ್ತುವ ವಿಷಯದ ಜಗಳ: ಪ್ರಯಾಣಿಕನ ಕೊಲೆ
ಒಪ್ಪಂದ ಮಾಡಿಕೊಳ್ಳಲು ಇರಾನ್ ಹೆಚ್ಚು ಆತುರಪಟ್ಟಿತ್ತು! – ಟ್ರಂಪ್
ಢಾಕಾದಲ್ಲಿ (ಬಾಂಗ್ಲಾದೇಶ) ಭಾರತೀಯ ರಾಯಭಾರ ಕಚೇರಿಯ ಮೇಲೆ ‘ಜಮಾತ್-ಎ-ಇಸ್ಲಾಮಿ’ಯಿಂದ ಮೆರವಣಿಗೆ ನಡೆಸಿ ದಾಳಿ ಮಾಡಲು ಯತ್ನ