ಇಸ್ರೇಲ್‌ನಿಂದ ಲೆಬನಾನ್ ಮೇಲೆ ನಡೆಯುತ್ತಿರುವ ದಾಳಿಗಳಿಂದಾಗಿ ಈ ನಿರ್ಧಾರ

ಟೆಹ್ರಾನ್ (ಇರಾನ್) – ಇರಾನ್ ಮತ್ತೊಮ್ಮೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಘೋಷಿಸಿದೆ. ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿ ನಡೆಸುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇರಾನ್ ತಿಳಿಸಿದೆ. ದಾಳಿಗಳು ಹೀಗೆಯೇ ಮುಂದುವರಿದರೆ, ಮುಂದಿನ ರಣತಂತ್ರ ಸಿದ್ಧವಾಗಿದೆ ಎಂದೂ ಇರಾನ್ ಹೇಳಿದೆ. ಇದರಿಂದ ಜಾಗತಿಕ ಇಂಧನ ಪೂರೈಕೆಯ ಮೇಲೆ ಮತ್ತೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ನೌಕೆಗಳು ಹಾರ್ಮುಜ್ ಜಲಸಂಧಿಯ ಹತ್ತಿರ ಹೋಗದಂತೆ ಎಚ್ಚರಿಕೆ ನೀಡಿದ್ದು, ಅವುಗಳ ಸುರಕ್ಷತೆಗೆ ಅಪಾಯವಾಗಬಹುದು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ-ಇರಾನ್ ನಡುವಿನ ಶಾಂತಿ ಒಪ್ಪಂದದ ನಂತರ, ಈ ವಾರದ ಆರಂಭದಲ್ಲಿಯೇ ಈ ಜಲಮಾರ್ಗವನ್ನು ಮತ್ತೆ ತೆರೆಯಲಾಗಿತ್ತು. ಇದರಿಂದ ಹಲವು ತಿಂಗಳ ಅಡೆತಡೆಯ ನಂತರ ತೈಲ ಮತ್ತು ಇತರ ಸಾಗಾಣಿಕೆ ಪುನರಾರಂಭಗೊಂಡಿತ್ತು.
ಅಮೆರಿಕದ ಇರಾನ್ ಹಾರ್ಮುಜ್ ಬಂದ್ ಮಾಡಿದೆ ಎಂಬ ದಾವೆಯನ್ನು ನಿರಾಕರಿಸಿದೆ!
ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ ಎಂಬ ವಾದವನ್ನು ಅಮೆರಿಕದ ಸೇನೆ ತಳ್ಳಿಹಾಕಿದೆ. ಈ ಪ್ರಮುಖ ಜಲಮಾರ್ಗವು ತೆರೆದಿದೆ ಮತ್ತು ಅದು ಹಾಗೆಯೇ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಸೇನೆಯು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’