ಗುರುಗ್ರಾಮ್ (ಹರಿಯಾಣ)ದಲ್ಲಿ ೨೨ ಕಿಮೀ ಬೆನ್ನಟ್ಟಿದ ನಂತರ ಗೋಕಳ್ಳರ ಬಂಧನ

ಗೋಕಳ್ಳರು ಪರಾರಿಯಾಗುತ್ತಿರುವಾಗ ಚಲಿಸುತ್ತಿದ್ದ ಲಾರಿಯಿಂದ ೭ ಹಸುಗಳನ್ನು ಎಸೆದರು !

ಹರಿಯಾಣದ ಭಾಜಪ ಸರಕಾರವು ಇಂತಹ ಅಮಾನವೀಯ ಮತ್ತು ನಿರ್ದಯ ಗೋಕಳ್ಳರಿಗೆ ಮರಣದಂಡನೆ ವಿಧಿಸಲು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಗುರುಗ್ರಾಮ (ಹರಿಯಾಣ) – ಇಲ್ಲಿ, ಗೋರಕ್ಷಕರು ಮತ್ತು ಪೊಲೀಸರು ೨೨ ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ ಟ್ರಕ್‌ನಿಂದ ಅಕ್ರಮವಾಗಿ ಜಾವುವಾರುಗಳನ್ನು ಸಾಗಿಸುತ್ತಿದ್ದ ೬ ಗೋಕಳ್ಳರನ್ನು ಬಂಧಿಸಿದ್ದಾರೆ. ಬೆನ್ನಟ್ಟಿದ ಸಂದರ್ಭದಲ್ಲಿ ಗೋಕಳ್ಳರು ಚಲಿಸುತ್ತಿದ್ದ ಲಾರಿಯಿಂದ ೭ ಹಸುಗಳನ್ನು ಎಸೆದರು. ಆ ಸಮಯದಲ್ಲಿ ಪೊಲೀಸರು ಗುಂಡು ಹಾರಿಸಿ ಲಾರಿಯ ಟೈರ್ ಪಂಕ್ಚರ್ ಮಾಡಿದರು. ಹಾಗೆಯೇ ಟೈರ್ ಕಿತ್ತು ಹೋಯಿತು; ಆದರೂ ಲಾರಿಯನ್ನು ಚಲಾಯಿಸುತ್ತಲೇ ಇದ್ದರು. ಬಂಧಿತರನ್ನು ಯಹಯಾ, ಬಲ್ಲು, ತಸ್ಲೀಂ, ಖಾಲಿದ್ ಅಲಿಯಾಸ್ ಭೈನ್ಸಾ, ಶಾಹಿದ್ ಮತ್ತು ಸೋಕಿನ್ ಅಲಿಯಾಸ್ ಸುಂಡಾ ಎಂದು ಗುರುತಿಸಲಾಗಿದೆ.

ಲಾರಿಯಿಂದ ಗೋಕಳ್ಳಸಾಗಣೆ ಮಾಡುತ್ತಿರುವುದಾಗಿ ಬಜರಂಗದಳದ ಕಾರ್ಯಕರ್ತ ಮೋಹನ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ದಿಗ್ಬಂಧನ ಹಾಕಿದ್ದರು. ಸಂಬಂಧ ಪಟ್ಟ ಲಾರಿ ಬಂದ ನಂತರ, ಪೊಲೀಸರು ಅವನನ್ನು ನಿಲ್ಲಿಸಲು ಸೂಚಿಸಿದರು; ಆದರೆ ಚಾಲಕ ವೇಗವಾಗಿ ಓಡಿದ್ದಾನೆ. ಆದ್ದರಿಂದ ಪೊಲೀಸರು ಮತ್ತು ಗೋರಕ್ಷಕರು ಆತನನ್ನು ಬೆನ್ನಟ್ಟಿದ್ದರು. ಈ ವೇಳೆ ಕೆಲ ಗೋಳ್ಳರು ವಾಹನದಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದಾರೆ.