ಪ್ಯಾರಸಿಟಮಾಲ್, ಅಮೋಕ್ಸಿಸಿಲಿನ್ ಮತ್ತು ಚರ್ಮಕ್ಕೆ ಸಂಬಂಧಿಸಿದ ಔಷಧಗಳು ಇದರಲ್ಲಿ ಸೇರಿವೆ
ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಕೈಗೊಳ್ಳಲಾದ ನಿರ್ಧಾರ

ನವದೆಹಲಿ – ಕೇಂದ್ರ ಸರಕಾರವು 16 ರೀತಿಯ ‘ಫಿಕ್ಸ್ಡ್-ಡೋಸ್ ಕಾಂಬಿನೇಷನ್’ (ಮಿಶ್ರ ಔಷಧಗಳು) ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯವು ‘ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ’ಯ ಸೆಕ್ಷನ್ 26ಎ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಔಷಧಗಳು ಕಾಯಿಲೆಗಳನ್ನು ಗುಣಪಡಿಸಲು ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ, ಬದಲಿಗೆ ಇವುಗಳ ಬಳಕೆಯಿಂದ ಜನರ ಆರೋಗ್ಯಕ್ಕೆ ದೊಡ್ಡ ಅಪಾಯ ಉಂಟಾಗಬಹುದು ಎಂಬ ಕಾರಣದಿಂದಾಗಿ ಈ ನಿಷೇಧ ಹೇರಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ‘ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್’ ಒಂದು ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ‘ಕ್ಲಿನಿಕಲ್ ಡೇಟಾ’ ಮತ್ತು ಔಷಧಗಳ ಪರಿಣಾಮಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿತು. ತದನಂತರ, ಈ 16 ಮಿಶ್ರ ಔಷಧಗಳು ರೋಗಿಗಳಿಗೆ ನಿರುಪಯುಕ್ತ ಮತ್ತು ಹಾನಿಕಾರಕ ಎಂದು ತಿಳಿಸಿ, ಇವುಗಳನ್ನು ಮಾರುಕಟ್ಟೆಯಿಂದ ತಕ್ಷಣವೇ ಹಿಂಪಡೆಯುವಂತೆ ಶಿಫಾರಸು ಮಾಡಿದೆ.
ನಿಷೇಧಿಸಲಾದ 16 ಔಷಧಗಳ ಹೆಸರುಗಳು:
1. ಅಸಿಟೈಲ್ ಸ್ಯಾಲಿಸಿಲಿಕ್ ಆಸಿಡ್ + ಇಥೋಹೆಪ್ಟಾಜಿನ್
2. ಅಲೋವೆರಾ ಸಾರ (ಲೋಳೆಸರ) + ಅಲಂಟೊಯಿನ್ + ಆಲ್ಫಾ ಟೊಕೊಫೆರಾಲ್ ಅಸಿಟೇಟ್ + ಡಿ-ಪ್ಯಾಂಥೆನಾಲ್ + ವಿಟಮಿನ್ ಎ
3. ಅಲೋವೆರಾ ಸಾರ + ವಿಟಮಿನ್ ಇ + ಡೈಮೆಥಿಕೋನ್ + ಗ್ಲಿಸರಿನ್
4. ಅಲೋವೆರಾ + ಜೊಜೊಬಾ ಆಯಿಲ್ + ವಿಟಮಿನ್ ಇ
5. ಅಲೋವೆರಾ + ಆರೆಂಜ್ ಆಯಿಲ್
6. ಅಲೋವೆರಾ + ಜೊಜೊಬಾ ಆಯಿಲ್ + ಗೋಧಿ ಎಣ್ಣೆ (ವ್ಹೀಟ್ ಜರ್ಮ್ ಆಯಿಲ್) + ಟೀ ಟ್ರೀ ಆಯಿಲ್
7. ಅಲೋವೆರಾ + ವಿಟಮಿನ್ ಇ + ಹರ್ಬಲ್ ಮಿಶ್ರಣ
8. ಡೈಸೈಕ್ಲೋಮೈನ್ + ಪ್ಯಾರಸಿಟಮಾಲ್ + ಕ್ಲಿಡಿನಿಯಮ್ ಬ್ರೋಮೈಡ್
9. ಡೈಸೈಕ್ಲೋಮೈನ್ + ಪ್ಯಾರಸಿಟಮಾಲ್ + ಕ್ಲಿಡಿನಿಯಮ್ ಬ್ರೋಮೈಡ್ + ಕ್ಲೋರ್ಡಿಯಾಜೆಪಾಕ್ಸೈಡ್
10. ಗ್ಲೈಕ್ಲಾಜೈಡ್ + ಕ್ರೋಮಿಯಂ ಪಿಕೋಲಿನೇಟ್
11. ಪ್ಯಾರಸಿಟಮಾಲ್ + ಲಿಗ್ನೋಕೇನ್
12. ಅಮೋಕ್ಸಿಸಿಲಿನ್ + ಸೆರಾಟಿಯೋಪೆಪ್ಟಿಡೇಸ್ + ಲ್ಯಾಕ್ಟೋಬಾಸಿಲಸ್ ಸ್ಪೊರೊಜೆನ್ಸ್
13. ಅಮೋಕ್ಸಿಸಿಲಿನ್+ಕ್ಲೋಕ್ಸಾಸಿಲಿನ್+ಲ್ಯಾಕ್ಟಿಕ್ ಆಸಿಡ್ ಬ್ಯಾಸಿಲಸ್+ಸೆರಾಟಿಯೋಪೆಪ್ಟಿಡೇಸ್
14. ಅಮೋಕ್ಸಿಸಿಲಿನ್+ಸೆರಾಟಿಯೋಪೆಪ್ಟಿಡೇಸ್
15. ಸೆಫಾಡ್ರಾಕ್ಸಿಲ್+ಪ್ರೊಬೆನೆಸಿಡ್
16. ಸೆಫ್ಯುರಾಕ್ಸಿಮ್+ಸೆರಾಟಿಯೋಪೆಪ್ಟಿಡೇಸ್
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ