….ಹಾಗಾದರೆ ಶ್ರೀರಾಮ ಶ್ರೀಕೃಷ್ಣರ ಜನ್ಮದಿನದಂದು ಏಕೆ ರಜೆಯಿಲ್ಲ ?

‘ಸುದರ್ಶನ’ ವಾರ್ತಾವಾಹಿನಿಯ ಸಂಪಾದಕ ಸುರೇಶ ಚವ್ಹಾಣಕೆ ಅವರ ಪ್ರಶ್ನೆ !

ಕೇಂದ್ರ ಸರಕಾರದ ವಾರ್ಷಿಕ ರಜಾದಿನಗಳ ಪಟ್ಟಿಯಲ್ಲಿ ಪ್ರವಾದಿ ಮುಹಮ್ಮದ ಮತ್ತು ಏಸುಕ್ರಿಸ್ತರ ಜನ್ಮ ದಿನಗಳಂದ ಕಡ್ಡಾಯ ರಜೆ ಆದರೆ ಹಿಂದೂ ದೇವತೆಗಳ ಜನ್ಮದಿನಗಳು ಪ್ರಾಸಂಗಿಕವೇ ? – ಚವ್ಹಾಣಕೆ

ಇಂತಹ ಪ್ರಶ್ನೆಗಳು ಹುಟ್ಟುವ ಮೊದಲೇ ಕೇಂದ್ರದ ಭಾಜಪ ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಈಗಲಾದರೂ ಪ್ರಯತ್ನಗಳಾಗಬೇಕು, ಎಂಬ ಅಪೇಕ್ಷೆ !

ನವದೆಹಲಿ : ಪ್ರವಾದಿ ಮುಹಮ್ಮದ ಮತ್ತು ಏಸು ಕ್ರಿಸ್ತನ ಜನ್ಮ ದಿನಗಳು ಅನುಕ್ರಮವಾಗಿ ಈದ ಎ ಮಿಲಾದ ಮತ್ತು ಕ್ರಿಸ್ಮಸಗಳಲ್ಲಿ ಕೇಂದ್ರದಿಂದ ಕಡ್ಡಾಯ ರಜಾದಿನಗಳಾದರೆ ಶ್ರೀರಾಮನ, ಶ್ರೀಕೃಷ್ಣನ ಮತ್ತು ಭಗವಾನ ಶಿವನ ಜಯಂತಿ ದಿನದಂದು ಪ್ರಾಸಂಗಿಕ ರಜೆಗಳನ್ನು ಏಕೆ ಕೊಡಲಾಗುವದಿಲ್ಲ ? ವೆಂಬ ಪ್ರಶ್ನೆಯನ್ನು ಸುದರ್ಶನ ವಾರ್ತಾ ವಾಹಿನಿಯ ಸಂಪಾದಕ ಸುರೇಶ ಚವ್ಹಾಣಕೆ ಇವರು ಟ್ವಿಟ ಮಾಡಿ ತಿಳಿಸಿದ್ದಾರೆ. ಟ್ವಿಟ ಜೊತೆಗೆ ಅವರು ಕೇಂದ್ರ ಸರಕಾರದ ವಾರ್ಷಿಕ ರಜೆಗಳುಳ್ಳ ಸುತ್ತೊಲೆಯನ್ನು ಲಗತ್ತಿಸಿದ್ದಾರೆ. ಈ ಟ್ವಿಟಗೆ ಭಾರತದಾದ್ಯಂತ ಇರುವ ಹಿಂದೂಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಟ್ವಿಟ ವ್ಯಾಪಕವಾಗಿ ಹರಿದಾಡುತ್ತಿದೆ.