ಬಿಹಾರದಲ್ಲಿ ಒಟ್ಟು ೫೦೦ ಟನ್ ತೂಕದ ಉಕ್ಕಿನ ಸೇತುವೆಯನ್ನು ಕೆಡವಿ ವಸ್ತುಗಳನ್ನು ಕದ್ದರು !

ನೀರಾವರಿ ಇಲಾಖೆಯ ಅಧಿಕಾರಿಗಳೇ ಕಳ್ಳರಿಗೆ ಸಹಾಯ ಮಾಡಿರುವ ಬಗ್ಗೆ ಪೊಲೀಸರಿಗೆ ಸಂದೇಹ !

ಹೀಗಿದ್ದರೆ ಸರಕಾರಿ ಇಲಾಖೆಗಳಲ್ಲಿರುವ ಭ್ರಷ್ಟಾಚಾರವು ಯಾವ ಮಟ್ಟಕ್ಕೆ ತಲುಪಿದೆ ಎಂಬುದರ ಕಲ್ಪನೆ ಬಂದಿರಬಹುದು. ಇಂತಹ ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ಏಕೆ ನೀಡಬಾರದು ?

ಸಾಸಾರಾಮ (ಬಿಹಾರ) – ಇಲ್ಲಿನ ಸರಕಾರಿ ಅಧಿಕಾರಿಯಾಗಿರುವುದಾಗಿ ಹೇಳಿ ಕೆಲವು ಜನರು ೬೦ ಅಡಿ ಉದ್ದವಿರುವ ಉಕ್ಕಿನ ಸೇತುವೆಯನ್ನು ಜೋಡಿಸಿರುವ ಭಾಗಗಳನ್ನು ಬೇರ್ಪಡಿಸಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಅನುಸಾರ ೫೦೦ ಟನ್ ಭಾರದ ಈ ಸೇತುವೆಯನ್ನು ನಾಸೀರಗಂಜ ಪೊಲೀಸ ಠಾಣೆಯ ಸರಹದ್ದಿನಲ್ಲಿರುವ ಅಮಿಯಾವರ ಹಳ್ಳಿಯಲ್ಲಿನ ಆರಾ ಕಾಲುವೆಯ ಮೇಲೆ ೧೯೭೨ರಲ್ಲಿ ಕಟ್ಟಲಾಗಿತ್ತು. ನೀರಾವರಿ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡ ಕೆಲವು ಜನರ ಗುಂಪು ಈ ಬಳಸದಿರುವ ಸೇತುವೆಯನ್ನು ‘ಗ್ಯಾಸ್ ಕಟರ್’ ಮತ್ತು ‘ಅರ್ಥಮೂವರ್ಸ’ (ಮಣ್ಣು ಮತ್ತು ಇತರ ವಸ್ತುಗಳನ್ನು ಸಾಗಿಸುವ ಯಂತ್ರ)ಗಳ ಸಹಾಯದಿಂದ ೩ ದಿನಗಳಲ್ಲಿ ಬಿಡಿಸಿದರು ಮತ್ತು ಸೇತುವೆಯನ್ನು ಕಟ್ಟಲು ಬಳಸಲಾದ ವಸ್ತುಗಳನ್ನು ಕಳ್ಳತನ ಮಾಡಿದರು.

ಸ್ಥಳೀಯರಿಗೆ ಇದರ ಅರಿವಾಗುವ ಮತ್ತು ಅವರು ಪೊಲೀಸರಿಗೆ ತಿಳಿಸುವ ವರೆಗೆ ಈ ಕಳ್ಳರು ವಸ್ತುಗಳೊಂದಿಗೆ ಪರಾರಿಯಾಗಿದ್ದರು. ‘ನೀರಾವರಿ ಇಲಾಖೆಯ ಸ್ಥಳಿಯ ಅಧಿಕಾರಿಗಳ ಸಹಾಯದಿಂದಲೇ ಈ ಸಂಪೂರ್ಣ ಕಾರ್ಯಾಚರಣೆ ನಡೆದಿರುವುದು ಕಂಡುಬರುತ್ತಿದೆ’ ಎಂದು ನಾಸೀರಗಂಜ ಪೊಲೀಸ ಠಾಣೆಯ ನಿರೀಕ್ಷಕರಾದ ಸುಭಾಷ ಕುಮಾರರವರು ಹೇಳಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿದ್ದಾರೆ.