ಅಂತರಾಷ್ಟ್ರೀಯ ಯೋಗ ದಿನ

ಕೋಲಕಾತಾ (ಬಂಗಾಳ) – ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಮತ್ತು ಅದು ಯಾವುದೇ ಒಂದು ವಯೋಮಾನಕ್ಕೆ ಸೀಮಿತವಾಗಿಲ್ಲ. ಅದು ಮಾನವ ಆತ್ಮದ ಅಭಿವ್ಯಕ್ತಿಯಾಗಿದೆ. ಯೋಗವು ನಮಗೆ ಸಮತೋಲಿತ ಜೀವನವನ್ನು ನಡೆಸಲು ಕಲಿಸುತ್ತದೆ, ಜೊತೆಗೆ ಏನು ಮಾಡಬೇಕು? ಮತ್ತು ಏನು ಮಾಡಬಾರದು? ಎಂಬುದರ ಅರಿವು ಮೂಡಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಇಲ್ಲಿ ಮಾರ್ಗದರ್ಶನ ನೀಡಿದರು. ಇಲ್ಲಿನ ‘ರೆಡ್ ರೋಡ್’ನಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ ನೆರೆದಿದ್ದ ಸಾವಿರಾರು ಯೋಗ ಸಾಧಕರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿಯವರು ಈ ಹೇಳಿಕೆ ನೀಡಿದ್ದಾರೆ.
ವಯಸ್ಸಿನ ಉಲ್ಲೇಖವನ್ನು ನೀಡುತ್ತಾ ಪ್ರಧಾನಿಯವರು, “ನಮ್ಮ ಗುರಿ ಹೇಗಿರಬೇಕೆಂದರೆ, ನಮ್ಮ ದೇಹವು 40 ನೇ ವಯಸ್ಸಿನಲ್ಲಿ 20 ನೇ ವಯಸ್ಸಿಗಿಂತ ಹೆಚ್ಚು ಮೃದುವಾಗಿರಬೇಕು (flexible) ಮತ್ತು 60 ನೇ ವಯಸ್ಸಿನಲ್ಲಿ 30 ನೇ ವಯಸ್ಸಿಗಿಂತ ಹೆಚ್ಚು ಶಕ್ತಿಯುತವಾಗಿರಬೇಕು (energetic). ನಾವು ಯೋಗವನ್ನು ಕೇವಲ ಕೆಲವು ನಿರ್ದಿಷ್ಟ ಸಂದರ್ಭಗಳಿಗೆ ಸೀಮಿತಗೊಳಿಸಬಾರದು. ಅದನ್ನು ನಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು. ಇದೇ ಉದ್ದೇಶದಿಂದ ಸರಕಾರವು ಈ ವರ್ಷ ‘ಯೋಗ 365’ ಎಂಬ ಪರಿಕಲ್ಪನೆಯನ್ನು ತಂದಿದ್ದು, ಅದರ ಅಡಿಯಲ್ಲಿ 100 ದಿನಗಳ ಆನ್‌ಲೈನ್ ಯೋಗ ತರಗತಿಗಳನ್ನು ಸಹ ಪ್ರಾರಂಭಿಸಲಾಗಿದೆ” ಎಂದರು.
ವಿಶ್ವಾದ್ಯಂತ 2 ಸಾವಿರದ 500 ಸ್ಥಳಗಳಲ್ಲಿ ಕಾರ್ಯಕ್ರಮಗಳ ಆಯೋಜನೆ!
ಅಂತರರಾಷ್ಟ್ರೀಯ ಯೋಗದಿನದ ನಿಮಿತ್ತ ವಿಶ್ವಾದ್ಯಂತ ಭಾರಿ ಉತ್ಸಾಹ ಕಂಡುಬಂದಿತು. ವಿಶ್ವದಾದ್ಯಂತ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ 210 ಕ್ಕೂ ಹೆಚ್ಚು ಭಾರತೀಯ ರಾಯಭಾರ ಕಚೇರಿಗಳು ಮತ್ತು ಕೇಂದ್ರಗಳು ಭಾಗವಹಿಸಿವೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ