ಜಗನ್ನಾಥಪುರಿಯ ಜಗತ್ಪ್ರಸಿದ್ಧ ಭಗವಾನ್ ಜಗನ್ನಾಥನ ರಥಯಾತ್ರೆ ಇಂದಿನಿಂದ ಆರಂಭ !

ಇಲ್ಲಿಯ ಜಗತ್ಪ್ರಸಿದ್ಧ ಜಗನ್ನಾಥ ದೇವಸ್ಥಾನದ ವಾರ್ಷಿಕ ರಥಯಾತ್ರೆ ಜುಲೈ ೧ ರಿಂದ ಆರಂಭವಾಗಿ, ಅಂದರೆ ಆಷಾಢ ಶುಕ್ಲ ದ್ವಿತೀಯಾದಿಂದ ಆರಂಭವಾಗಲಿದೆ. ಜಗನ್ನಾಥ ಪುರಿ ದೇವಸ್ಥಾನ ಭಾರತದ ಪ್ರಾಚೀನ ಮತ್ತು ಪವಿತ್ರ ಚಾರಧಾಮ ದೇವಸ್ಥಾನಗಳ ಪೈಕಿ ಒಂದಾಗಿದೆ.

ಕನ್ಹೈಯ್ಯಲಾಲ ಕೊಲೆಯನ್ನು ನಿಷೇಧಿಸಿ ಉದಯಪುರದಲ್ಲಿ ಸಾವಿರಾರು ಹಿಂದೂಗಳ ಪ್ರತಿಭಟನೆ !

ಇಲ್ಲಿ ಕನ್ಹೈಯ್ಯಲಾಲರವರ ಕ್ರೂರ ಕೊಲೆ ಪ್ರಕರಣದ ವಿರುದ್ಧ ಹಿಂದೂಗಳು ಟೌನ್ ಹಾಲ್ ನಿಂದ ಜಿಲ್ಹಾಧಿಕಾರಿ ಕಛೇರಿಯ ವರೆಗೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು. ಪ್ರತಿಭಟನೆ ಮುಗಿದ ನಂತರ ಕೆಲವು ಯುವಕರು ದೆಹಲಿ ಗೇಟ್ ಚೌಕಿನಲ್ಲಿ ಕಲ್ಲುತೂರಾಟ ನಡೆಸಿದರು.

ಕರ್ನಲ್ ಪುರೋಹಿತ್ ವಿರುದ್ಧದ ಸಾಕ್ಷ್ಯ ಬದಲಾಯಿಸಿದ ಮಾಲೆಗಾವ್ ಸ್ಫೋಟ ಪ್ರಕರಣದ ಸಾಕ್ಷಿದಾರ !

೨೦೦೮ ರಲ್ಲಿ ಮಹಾರಾಷ್ಟ್ರದ ಮಾಲೆಗಾವನಲ್ಲಿ ನಡೆದಿರುವ ಬಾಂಬು ಸ್ಫೋಟ ಪ್ರಕರಣದ ಸಾಕ್ಷಿದಾರನು ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಇವರನ್ನು ಗುರುತಿಸಲಿಲ್ಲ. ಈ ಸಾಕ್ಷಿದಾರ ಕಥಿತವಾಗಿ ಗುಂಡು ಮದ್ದು ಮಾರುವ ಪರವಾನಗಿ ಇರುವ ಶಸ್ತ್ರ ವಿತರಕ ಆಗಿದ್ದಾನೆ.

ಏಕನಾಥ ಶಿಂದೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ !

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಶಿವಸೇನೆಯಿಂದ ಬೇರ್ಪಟ್ಟ ನಾಯಕ ಏಕನಾಥ ಶಿಂದೆ ಅವರು ಜೂನ್ ೩೦ ರಂದು ಮಹಾರಾಷ್ಟ್ರದ ೩೦ ನೇ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ ಉಪಮುಖ್ಯಮಂತ್ರಿ ಎಂದು ದೇವೇಂದ್ರ ಫಡಣವಿಸ ಇವರು ಪ್ರಮಾಣವಚನ ಸ್ವೀಕರಿಸಿದರು.

ಹತ್ಯೆಗೆ ಹತ್ಯೆಯೇ ಉತ್ತರ – ಮಾಜಿ ಸಚಿವರು ಕೆಎಸ್ ಈಶ್ವರಪ್ಪ

ಕನ್ಹೈಯ್ಯಾಲಾಲ ಇವರ ಹತ್ಯೆ ಮಾಡಿದವರ ಹತ್ಯೆ ಮಾಡಬೇಕು ಅಥವಾ ಅವರಿಗೆ ಯೋಗ್ಯವಾದ ಶಿಕ್ಷೆ ನೀಡಿ ಪಾಠ ಕಲಿಸಬೇಕು, ಎಂಬ ಹೇಳಿಕೆ ಮಾಜಿ ಸಚಿವ ಮತ್ತು ಭಾಜಪಾ ನೇತಾರ ಕೆಎಸ್ ಈಶ್ವರಪ್ಪನವರು ನೀಡಿದ್ದಾರೆ.

ಕಾಶಿ ಯಾತ್ರೆ ಮಾಡಲು ಇಚ್ಚಿಸುವ ಪ್ರತಿಯೊಬ್ಬರಿಗೆ ೫ ಸಾವಿರ ರೂಪಾಯಿ ನೀಡಲಿರುವ ರಾಜ್ಯ ಸರಕಾರ !

ಭಾಜಪದ ರಾಜ್ಯ ಸರಕಾರ ‘ಕಾಶಿ ಯಾತ್ರೆ’ ಎಂಬ ಯೋಜನೆಗೆ ಸ್ವೀಕೃತಿ ನೀಡಿದೆ. ಇದರಡಿಯಲ್ಲಿ ಕಾಶಿಯ ಕಾಶಿ ವಿಶ್ವನಾಥ ದೇವಸ್ಥಾನ ನೋಡಲು ಇಚ್ಚಿಸುವ ೩೦ ಸಾವಿರ ಭಕ್ತರಿಗೆ ತಲಾ ೫ ಸಾವಿರ ರೂಪಾಯಿ ಅನುದಾನ ನೀಡಲಾಗುವುದು. ಅದಕ್ಕಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ೭ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

ಕೇರಳದ ಮೊಪಲಾ ಮುಸಲ್ಮಾನರು ಮಾಡಿರುವ ಹಿಂದೂಗಳ ನರಸಂಹಾರದ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಕೇರಳ ಸರಕಾರದ ನಕಾರ

ಹಿಂದೂ ಧರ್ಮದಲ್ಲಿ ಪ್ರವೇಶಿಸಿರುವ ಚಲನಚಿತ್ರ ನಿರ್ದೇಶಕ ರಾಮ ಸಿಂಹನ್ (ಪೂರ್ವಾಶ್ರಮದ ಅಲಿ ಅಕಬರ) ಅವರ `ಪುಝಾ ಮುಟ್ಟುಅಲ ಪುಝಾ ವರಿ’(ನದಿಯಿಂದ ನದಿಯವರೆಗೆ) ಮಲಯಾಳಂ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಕೇರಳ ಸರಕಾರವು ನಿರಾಕರಿಸಿದೆ.

ಹಿಂದೂದ್ವೇಷಿ ಮಹಮ್ಮದ ಜುಬೇರನ ಸಮರ್ಥನೆಯಲ್ಲಿ ‘ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ದಿಂದ ಮನವಿ!

ಹಿಂದೂಗಳ ದೇವತೆಗಳಿಗೆ ಅವಮಾನ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ `ಅಲ್ಟ್ ನ್ಯೂಜ’ನ ಸಹ ಸಂಸ್ಥಾಪಕ ಮಹಮ್ಮದ ಜುಬೇರ ಎಂಬವನ ಸಮರ್ಥನೆಗೆ ಸಂಪಾದಕರ ಸಂಘಟನೆಯಾದ `ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ ಮುಂದಾಗಿದೆ.

ಭಾರತದ ಮುಸಲ್ಮಾನರಿಗೆ ತಾಲಿಬಾನಿ ಮಾನಸಿಕತೆ ಒಪ್ಪಿಗೆ ಇಲ್ಲ ! – ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ ಅಬೆದಿನ ಅಲಿ ಖಾನ

ನಾನು ಕನ್ಹೈಯಾಲಾಲ ಇವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಸರಕಾರಕ್ಕೆ ಮನವಿ ಮಾಡುತ್ತೇನೆ. ಭಾರತದ ಮುಸಲ್ಮಾನ ದೇಶದಲ್ಲಿ ತಾಲಿಬಾನಿ ಮಾನಸಿಕತೆಗೆ ಬೆಂಬಲ ನೀಡುವುದಿಲ್ಲ.

ಸಂಭಲ (ಉತ್ತರಪ್ರದೇಶ) ಇಲ್ಲಿಯ ಪೊಲೀಸ್ ಪೇದೆ ಸರ್ವಸ್ವವನ್ನು ತ್ಯಾಗ ಮಾಡಿ ಈಶ್ವರ ಭಕ್ತಿ ಮಾಡುವುದನ್ನು ರ್ನಿಧರಿಸಿದ್ದಾರೆ !

ಜಿಲ್ಲೆಯ ಗುನ್ನೌರ ಗ್ರಾಮದಿಂದ ೩ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಶಕ್ತಿಸಿಂಹ ಇವರನ್ನು ಪೊಲೀಸರು ಹುಡುಕುತ್ತಿದ್ದರು. ಕೊನೆಗೆ ಅವರು ಹರಿದ್ವಾರದ ಒಂದು ದೇವಸ್ಥಾನದಲ್ಲಿ ಸಾಧನೆ ಮಾಡುತ್ತಿರುವುದು ಪೊಲೀಸರಿಗೆ ತಿಳಿಯಿತು.