ಕರ್ನಲ್ ಪುರೋಹಿತ್ ವಿರುದ್ಧದ ಸಾಕ್ಷ್ಯ ಬದಲಾಯಿಸಿದ ಮಾಲೆಗಾವ್ ಸ್ಫೋಟ ಪ್ರಕರಣದ ಸಾಕ್ಷಿದಾರ !

ಮುಂಬಯಿ – ೨೦೦೮ ರಲ್ಲಿ ಮಹಾರಾಷ್ಟ್ರದ ಮಾಲೆಗಾವನಲ್ಲಿ ನಡೆದಿರುವ ಬಾಂಬು ಸ್ಫೋಟ ಪ್ರಕರಣದ ಸಾಕ್ಷಿದಾರನು ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಇವರನ್ನು ಗುರುತಿಸಲಿಲ್ಲ. ಈ ಸಾಕ್ಷಿದಾರ ಕಥಿತವಾಗಿ ಗುಂಡು ಮದ್ದು ಮಾರುವ ಪರವಾನಗಿ ಇರುವ ಶಸ್ತ್ರ ವಿತರಕ ಆಗಿದ್ದಾನೆ. ಇದೇ ಸಾಕ್ಷಿದಾರನು ಮೊದಲು ನೀಡಿರುವ ಸಾಕ್ಷಿಯಲ್ಲಿ ೨೦೦೬ರಲ್ಲಿ ಕರ್ನಲ್ ಪುರೋಹಿತ ನನ್ನ ಶಸ್ತ್ರ ಮಾರಾಟ ಮಳಿಗೆಗೆ ಬಂದಿದ್ದರು. ಆ ಸಮಯದಲ್ಲಿ ಅವರು ಒಂದು ಪರವಾನಗಿ ಇರುವ ಶಸ್ತ್ರ ತಂದಿದ್ದರು, ಹಾಗೂ ಒಂದು ಬಾರಿ ಪುರೋಹಿತರಿಗೆ ಸ್ಪೋಟಕ ವಸ್ತುಗಳು ಮಾರಿದ್ದೆ ಎಂದು ಹೇಳಿದ್ದನು.