ಜಗನ್ನಾಥಪುರಿಯ ಜಗತ್ಪ್ರಸಿದ್ಧ ಭಗವಾನ್ ಜಗನ್ನಾಥನ ರಥಯಾತ್ರೆ ಇಂದಿನಿಂದ ಆರಂಭ !

ಜಗನ್ನಾಥ ಪುರಿ (ಒಡಿಶಾ) : ಇಲ್ಲಿಯ ಜಗತ್ಪ್ರಸಿದ್ಧ ಜಗನ್ನಾಥ ದೇವಸ್ಥಾನದ ವಾರ್ಷಿಕ ರಥಯಾತ್ರೆ ಜುಲೈ ೧ ರಿಂದ ಆರಂಭವಾಗಿ, ಅಂದರೆ ಆಷಾಢ ಶುಕ್ಲ ದ್ವಿತೀಯಾದಿಂದ ಆರಂಭವಾಗಲಿದೆ. ಜಗನ್ನಾಥ ಪುರಿ ದೇವಸ್ಥಾನ ಭಾರತದ ಪ್ರಾಚೀನ ಮತ್ತು ಪವಿತ್ರ ಚಾರಧಾಮ ದೇವಸ್ಥಾನಗಳ ಪೈಕಿ ಒಂದಾಗಿದೆ. ಅದು ೮೦೦ ವರ್ಷಗಳಕ್ಕಿಂತ ಹಳೆಯದಾಗಿದೆ. ಇಲ್ಲಿ ಭಗವಾನ ಶ್ರೀಕೃಷ್ಣ ಶ್ರೀ ಜಗನ್ನಾಥನ ರೂಪದಲ್ಲಿ ವಿರಾಜಮಾನರಾಗಿದ್ದಾರೆ. ಅವರ ಜೊತೆಗೆ ಅವರ ಹಿರಿಯ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾ ಇವರ ಪೂಜೆ ಸಹ ಇಲ್ಲ ಮಾಡಲಾಗುತ್ತದೆ.

(ಸೌಜನ್ಯ : Doordarshan National)

೧. ರಥಯಾತ್ರೆಗಾಗಿ ಭಗವಾನ ಶ್ರೀಕೃಷ್ಣ, ಬಲರಾಮ ಮತ್ತು ದೇವಿ ಸುಭದ್ರಾ ಇವರಿಗಾಗಿ ಮೂರು ಸ್ವತಂತ್ರ ರಥಗಳು ಸಿದ್ಧ ಪಡಿಸಲಾಗಿದೆ. ಯಾವಾಗ ರಥಯಾತ್ರೆ ಆರಂಭವಾಗುತ್ತದೆಯೋ, ಆಗ ಬಲರಾಮನ ರಥ ಮುಂದೆ, ದೇವಿ ಸುಭದ್ರೆಯ ರಥ ಮಧ್ಯದಲ್ಲಿ ಮತ್ತು ಭಗವಾನ ಶ್ರೀ ಜಗನ್ನಾಥನ ರಥ ಹಿಂದೆ ಇರುತ್ತದೆ.

೨. ಬಲರಾಮನ ರಥಕ್ಕೆ ತಲಧ್ವಜ ಎನ್ನುತ್ತಾರೆ. ಅದು ಬಣ್ಣ ಕೆಂಪು ಮತ್ತು ಹಸಿರು ಬಣ್ಣ ಹೊಂದಿದೆ . ದೇವಿ ಸುಭದ್ರೆಯ ರಥಕ್ಕೆ ದರ್ಪದಾಲನ ಅಥವಾ ಪದ್ಮರಥ ಎನ್ನುತ್ತಾರೆ. ಅದರ ಬಣ್ಣ ಕಪ್ಪು ಅಥವಾ ನೀಲಿ ಆಗಿರುತ್ತದೆ. ಭಗವಾನ ಶ್ರೀ ಜಗನ್ನಾಥನ ರಥಕ್ಕೆ ನಂದಿಘೋಷ ಅಥವಾ ಗರುಡ ಧ್ವಜ ಎನ್ನುತ್ತಾರೆ, ಅದರ ಬಣ್ಣ ಕೆಂಪು ಅಥವಾ ಹಳದಿಯಾಗಿರುತ್ತದೆ.

೩. ಯಾವಾಗ ಮೂರು ರಥಗಳು ಸಿದ್ಧವಾಗುತ್ತವೆ ಆಗ ‘ಛರ ಪಹಾನರಾ’ ಹೆಸರಿನ ವಿಧಿ ಮಾಡಲಾಗುತ್ತದೆ. ಜಗನ್ನಾಥಪುರಿಯ ಗಜಪತಿ ರಾಜ ಪಲ್ಲಕ್ಕಿಯಲ್ಲಿ ಇಲ್ಲಿಗೆ ಬರುತ್ತಾರೆ ಮತ್ತು ಈ ಮೂರು ರಥಗಳಿಗೆ ಪೂಜೆ ಸಲ್ಲಿಸಿ ನಂತರ ಬಂಗಾರದ ಪೊರಕೆಯಿಂದ ರಥದ ಮಂಟಪ ಮತ್ತು ಮಾರ್ಗ ಸ್ವಚ್ಛ ಮಾಡುತ್ತಾರೆ.

೪. ಡೋಲು-ಜಾಗಟೆಯ ನಾದ ಮೊಳಗಿಸಿ ಭಕ್ತರು ಈ ರಥವನ್ನು ಎಳೆಯುತ್ತಾರೆ. ಯಾರಿಗೆ ರಥ ಎಳೆಯುವ ಅವಕಾಶ ಸಿಗುತ್ತದೆಯೋ ಅವರು ಬಹಳ ಭಾಗ್ಯಶಾಲಿಗಳು ಎಂಬ ನಂಬಿಕೆಯೊಂದಿದೆ. ಪೌರಾಣಿಕ ಮಾನ್ಯತೆಗಳ ಪ್ರಕಾರ ಯಾರು ರಥ ಎಳೆಯುತ್ತಾರೆ, ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.

೫. ರಥಯಾತ್ರೆ ಜಗನ್ನಾಥ ಮಂದಿರದಿಂದ ಪ್ರಾರಂಭವಾಗಿ ಗುಂಡಿಚಾ ಮಂದಿರದವರೆಗೆ ಬರುತ್ತದೆ. ಇಲ್ಲಿ ತಲುಪಿದ ನಂತರ ಭಗವಾನ ಶ್ರೀ ಜಗನ್ನಾಥ, ಬಲರಾಮ ಮತ್ತು ದೇವಿ ಸುಭದ್ರಾ ೭ ದಿನ ವಿಶ್ರಾಂತಿ ಪಡೆಯುತ್ತಾರೆ. ಗುಂಡಿಚಾ ಮಂದಿರದಲ್ಲಿ ಯಾವಾಗ ಭಗವಾನ ಶ್ರೀ ಜಗನ್ನಾಥನ ದರ್ಶನ ಆಗುತ್ತದೆ ಆಗ ಅದಕ್ಕೆ ಆಡಪ ದರ್ಶನ ಎನ್ನುತ್ತಾರೆ.

೬. ಗುಂಡಿಯ ಮಂದಿರ ಇದು ಭಗವಂತ ಶ್ರೀ ಜಗನ್ನಾಥನ ಚಿಕ್ಕಮ್ಮನ ಮನೆಯಾಗಿದೆ. ಇದಕ್ಕೆ ಗುಂಡಿಯ ಬಾಡಿ ಎಂದು ಸಹ ಹೇಳುತ್ತಾರೆ. ಶುಕ್ಲ ಪಕ್ಷ ಏಕಾದಶಿಗೆ ಭಗವಂತ ಶ್ರೀ ಜಗನ್ನಾಥ ಮತ್ತೆ ಮಂದಿರಕ್ಕೆ ಹಿಂತಿರುಗುತ್ತಾರೆ. ಇದರ ಜೊತೆಗೆ ಯಾತ್ರೆಯ ಪ್ರವಾಸ ಮೂವಿಯುತ್ತದೆ. ಹಿಂತಿರುಗಿ ಬಂದ ನಂತರ ಎಲ್ಲಾ ಮೂರ್ತಿ ರಥದಲ್ಲೇ ಇರುತ್ತವೆ. ಏಕಾದಶಿಯ ಮರುದಿನ ದೇವತೆಗಳಿಗಾಗಿ ಮಂದಿರದ ಬಾಗಿಲಗಳು ತೆರೆಯುತ್ತವೆ. ಅದರ ನಂತರ ವಿಧಿವತ್ತಾಗಿ ಸ್ನಾನ ಮಾಡಿ ನಾಮಜಪದ ಸಮಯದಲ್ಲಿ ದೇವತೆಗಳ ಪುನರ್ ಸ್ಥಾಪನೆ ಮಾಡಲಾಗುತ್ತದೆ.