ಹತ್ಯೆಗೆ ಹತ್ಯೆಯೇ ಉತ್ತರ – ಮಾಜಿ ಸಚಿವರು ಕೆಎಸ್ ಈಶ್ವರಪ್ಪ

ರಾಜಸ್ಥಾನದ ಕನ್ಹೈಯ್ಯಾಲಾಲ ಇವರ ಹತ್ಯೆಯ ಪ್ರಕರಣ

ಬೆಂಗಳೂರು – ಕನ್ಹೈಯ್ಯಾಲಾಲ ಇವರ ಹತ್ಯೆ ಮಾಡಿದವರ ಹತ್ಯೆ ಮಾಡಬೇಕು ಅಥವಾ ಅವರಿಗೆ ಯೋಗ್ಯವಾದ ಶಿಕ್ಷೆ ನೀಡಿ ಪಾಠ ಕಲಿಸಬೇಕು, ಎಂಬ ಹೇಳಿಕೆ ಮಾಜಿ ಸಚಿವ ಮತ್ತು ಭಾಜಪಾ ನೇತಾರ ಕೆಎಸ್ ಈಶ್ವರಪ್ಪನವರು ನೀಡಿದ್ದಾರೆ.

ಹತ್ಯೆಯ ನಂತರ ಇಬ್ಬರೂ ಜಿಹಾದಿಗಳು ಪ್ರಸಾರ ಮಾಡಿರುವ ವಿಡಿಯೋದ ಮೂಲಕ ಪ್ರಧಾನಿಯವರಿಗೂ ಪಾಠ ಕಲಿಸುವ ಬೆದರಿಕೆ ನೀಡಿದ್ದಾರೆ. ಅದರ ನಂತರ ಈಶ್ವರಪ್ಪನವರು, ಪ್ರಧಾನಿ ಮೋದಿ ಇವರ ಹತ್ಯೆಯ ಬಗ್ಗೆ ನೀಡಿರುವ ಹೇಳಿಕೆ ನಂತರವೂ ಆ ವ್ಯಕ್ತಿ ಈಗಲೂ ದೇಶದಲ್ಲೇ ಇದ್ದಾನೆ, ಇದನ್ನು ಯಾವುದೇ ರಾಷ್ಟ್ರಭಕ್ತ ಸಹಿಸುವುದಿಲ್ಲ. ಪ್ರಧಾನಿ ಮೋದಿ ‘ದೇಶದಲ್ಲಿ ಶಾಂತತೆ ಇರಬೇಕು’ ಎಂದು ಹೇಳುವರು, ಆದರೆ ಇದರ ಅರ್ಥ ಹತ್ಯೆ ಮಾಡುವವರಿಗೆ ರಕ್ಷಣೆ ನೀಡಿ ಎಂದು ಆಗುವುದಿಲ್ಲ!

ಸಂಪಾದಕೀಯ ನಿಲುವು

ಈ ರೀತಿ ಕಾನೂನು ಕೈಗೆತ್ತಿಕೊಳ್ಳಲು ಹೇಳದೆ ಕಾನೂನುರೀತಿಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜನರಿಗೆ ಅನಿಸುತ್ತದೆ.