ಏಕನಾಥ ಶಿಂದೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ !

ದೇವೇಂದ್ರ ಫಡಣವಿಸ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ !

ಮುಂಬಯಿ : ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಶಿವಸೇನೆಯಿಂದ ಬೇರ್ಪಟ್ಟ ನಾಯಕ ಏಕನಾಥ ಶಿಂದೆ ಅವರು ಜೂನ್ ೩೦ ರಂದು ಮಹಾರಾಷ್ಟ್ರದ ೩೦ ನೇ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ ಉಪಮುಖ್ಯಮಂತ್ರಿ ಎಂದು ದೇವೇಂದ್ರ ಫಡಣವಿಸ ಇವರು ಪ್ರಮಾಣವಚನ ಸ್ವೀಕರಿಸಿದರು. ರಾತ್ರಿ ೭.೩೦ ಕ್ಕೆ ಪ್ರಮಾಣ ವಚನ ನೆರವೇರಿತು.

(ಸೌಜನ್ಯ : ND TV)

ದೇವೇಂದ್ರ ಫಡಣವಿಸ ಇವರಿಂದ ಏಕನಾಥ ಶಿಂದೆ ಇವರು ಮುಖ್ಯಮಂತ್ರಿ ಎಂದು ಘೋಷಣೆ !

ಜೂನ್ ೨೯ ರಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ, ರಾಜ್ಯಕ್ಕೆ ಪರ್ಯಾಯ ಸರಕಾರದ ಅಗತ್ಯವಿತ್ತು, ಅದನ್ನು ನಾವು ನೀಡುತ್ತಿದ್ದೇವೆ. ಏಕನಾಥ ಶಿಂದೆ ಇವರೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ನಾನು ಈ ಸರಕಾರವನ್ನು ಬೆಂಬಲಿಸುತ್ತೇನೆ’, ಎಂದು ಭಾಜಪದ ನಾಯಕ ದೇವೇಂದ್ರ ಫಡಣವೀಸ ಇವರು ಜೂನ್ ೩೦ ರಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಈ ಅನಿರೀಕ್ಷಿತ ಘೋಷಣೆ ಎಲ್ಲರಿಗೂ ಆಶ್ಚರ್ಯಕರ ಆಘಾತ ತಂದಿದೆ.

ಇದು ತತ್ತ್ವ, ಹಿಂದುತ್ವ ಮತ್ತು ವಿಚಾರಗಳ ಸಮರ !

ಫಡಣವಿಸ ತಮ್ಮ ಮಾತನ್ನು ಮುಂದುವರೆಸುತ್ತಾ, “ಸರಕಾರ ಪತನವಾದರೆ ನಾವು ಪರ್ಯಾಯ ಸರಕಾರ ನೀಡುತ್ತೇವೆ ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದೇವೆ. ಚುನಾವಣೆಯನ್ನು ಜನರ ಮೇಲೆ ಹೇರುವುದಿಲ್ಲ. ಭಾಜಪ-ಶಿಂದೆ ಗುಂಪಿನ ಶಾಸಕರು ನಮ್ಮೊಂದಿಗೆ ಬರುತ್ತಿದ್ದಾರೆ. ಇದು ತತ್ತ್ವ, ಹಿಂದುತ್ವ ಮತ್ತು ವಿಚಾರಗಳ ಹೋರಾಟವಾಗಿದೆ. ಹೀಗಾಗಿ ಏಕನಾಥ ಶಿಂದೆ ಅವರಿಗೆ ಭಾಜಪ ಬೆಂಬಲವಿದೆ” ಎಂದು ಹೇಳಿದರು.

ದಿವಂಗತ ಬಾಳಾಸಾಹೇಬ ಠಾಕ್ರೆಯವರ ಶಿವಸೈನಿಕರಿಗೆ ಮುಖ್ಯಮಂತ್ರಿಯಾಗುವ ಅವಕಾಶ ! – ಏಕನಾಥ ಶಿಂದೆ

ಮುಖ್ಯಮಂತ್ರಿ ಸ್ಥಾನದ ಘೋಷಣೆಯ ನಂತರ ಪ್ರತಿಕ್ರಿಯಿಸಿದ ಏಕನಾಖಿ ಶಿಂದೆಯವರು, “ದೇವೇಂದ್ರ ಫಡಣವೀಸ ಇವರಲ್ಲಿ ಸಂಖ್ಯಾಬಲ ಇದ್ದರೂ ಹೃದಯವೈಶಾಲ್ಯವನ್ನು ತೋರಿಸಿದರು ಮತ್ತು ದಿವಂಗತ ಬಾಳಾಸಾಹೇಬ ಠಾಕ್ರೆ ಅವರ ಶಿವಸೈನಿಕನಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದರು. ಫಡಣವೀಸ ಅವರ ನಂಬಿಕೆಗೆ ಎಂದಿಗೂ ದ್ರೋಹವಾಗುವುದಿಲ್ಲ” ಎಂದು ಹೇಳಿದರು.