ಭಾರತದ ಮುಸಲ್ಮಾನರಿಗೆ ತಾಲಿಬಾನಿ ಮಾನಸಿಕತೆ ಒಪ್ಪಿಗೆ ಇಲ್ಲ ! – ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ ಅಬೆದಿನ ಅಲಿ ಖಾನ

ಅಜ್ಮೇರ್ (ರಾಜಸ್ಥಾನ) – ನಾನು ಕನ್ಹೈಯಾಲಾಲ ಇವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಸರಕಾರಕ್ಕೆ ಮನವಿ ಮಾಡುತ್ತೇನೆ. ಭಾರತದ ಮುಸಲ್ಮಾನ ದೇಶದಲ್ಲಿ ತಾಲಿಬಾನಿ ಮಾನಸಿಕತೆಗೆ ಬೆಂಬಲ ನೀಡುವುದಿಲ್ಲ. ಯಾವುದೇ ಧರ್ಮ ಮಾನವಿಯತೆಯ ವಿರುದ್ಧ ಹಿಂಸೆಗೆ ಪ್ರೋತ್ಸಾಹ ನೀಡುವುದಿಲ್ಲ.

ವಿಶೇಷವಾಗಿ ಇಸ್ಲಾಂ ಶಾಂತತೆಯನ್ನು ಪೋಷಿಸುತ್ತದೆ. ಬಡವರ ಹತ್ಯೆ ಮಾಡುವುದು, ಇದು ಇಸ್ಲಾಂನಲ್ಲಿ ಅಪರಾಧವಾಗಿದೆ, ಎಂದು ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೇದುನ ಅಲಿ ಖಾನ ಇವರು ಪ್ರತಿಕ್ರಿಯೆ ನೀಡಿದರು. ಈ ರೀತಿಯ ಕೃತ್ಯ ಯಾವ ಜನರು ಮಾಡುತ್ತಿದ್ದಾರೆ, ಅದರಿಂದ ಇಸ್ಲಾಂ ಮತ್ತು ದೇಶಕ್ಕೆ ಅಪಕೀರ್ತಿ ಆಗುತ್ತಿದೆ. ಇದು ತಪ್ಪಾಗಿದೆ ಎಂದು ಸಹ ಅವರು ಹೇಳಿದರು.

ಸಂಪಾದಕೀಯ ನಿಲುವು

ಹೀಗಿದ್ದರೆ, ತಾಲಿಬಾನಿ ಮಾನಸಿಕತೆ ಇರುವವರ ವಿರುದ್ಧ ಎಂದಿಗೂ ಏಕೆ ಫತ್ವಾ ಹೊರಡಿಸಲಿಲ್ಲ ?