ಕನ್ಹೈಯ್ಯಲಾಲ ಕೊಲೆಯನ್ನು ನಿಷೇಧಿಸಿ ಉದಯಪುರದಲ್ಲಿ ಸಾವಿರಾರು ಹಿಂದೂಗಳ ಪ್ರತಿಭಟನೆ !

ರಾಜಸ್ಥಾನದ ಅನೇಕ ಜಿಲ್ಲೆಗಳಲ್ಲಿ ಬಂದ ಕರೆಗೆ ಸ್ಪಂದಿಸಿದ ಜನಸಾಮಾನ್ಯರು !

ಉದಯಪುರ (ರಾಜಸ್ಥಾನ) – ಇಲ್ಲಿ ಕನ್ಹೈಯ್ಯಲಾಲರವರ ಕ್ರೂರ ಕೊಲೆ ಪ್ರಕರಣದ ವಿರುದ್ಧ ಹಿಂದೂಗಳು ಟೌನ್ ಹಾಲ್ ನಿಂದ ಜಿಲ್ಹಾಧಿಕಾರಿ ಕಛೇರಿಯ ವರೆಗೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು. ಪ್ರತಿಭಟನೆ ಮುಗಿದ ನಂತರ ಕೆಲವು ಯುವಕರು ದೆಹಲಿ ಗೇಟ್ ಚೌಕಿನಲ್ಲಿ ಕಲ್ಲುತೂರಾಟ ನಡೆಸಿದರು. ಪೊಲೀಸರು ಅವರ ಮೇಲೆ ಲಾಠಿಚಾರ್ಜ್ ಮಾಡುತ್ತಾ ಗುಂಪನ್ನು ಚದುರಿಸಿದರು. ಈ ಹತ್ಯೆಯನ್ನು ನಿಷೇಧಿಸಿ ರಾಜ್ಯದ ಜಯಪುರ, ಉದಯಪುರ, ಪಾಲಿ, ಕೋಟ, ಜಾಲೋರ, ಜೈಸಲ್ಮೇರ ಮುಂತಾದ ಅನೇಕ ಜಿಲ್ಲೆಗಳ ಹಿಂದೂಗಳಿಗೆ ಬಂದ್ ಆಚರಿಸಲು ಕರೆ ನೀಡಲಾಗಿತ್ತು. ಇದನ್ನು ಸಾಮಾನ್ಯರು ಹಾಗೂ ವ್ಯಾಪಾರಿಗಳು ಬೆಂಬಲಿಸಿದರು. ಬಂದ್ ಯಶಸ್ವಿಯಾಯಿತು ಎಂದು ತಿಳಿದುಬಂದಿದೆ.

ರಾಜ್ಯದ ಮುಖ್ಯಮಂತ್ರಿ ಅಶೋಕ ಗಹಲೋತ್ ಇವರು ಕನ್ಹೈಯ್ಯಲಾಲ ಇವರ ಕುಟುಂಬದವರಿಗೆ ೫೦ ಲಕ್ಷ ರೂಪಾಯಿ ಆರ್ಥಿಕ ಸಹಾಯ, ಹಾಗೂ ಅವರ ಎರಡು ಮಕ್ಕಳಿಗೆ ಸರಕಾರಿ ನೌಕರಿ ನೀಡುವ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಗಹಲೋತ್ ಇವರು ಕನ್ಹೈಯ್ಯಲಾಲ ಇವರ ಕುಟುಂಬದವರನ್ನು ಭೇಟಿ ಕೂಡ ಮಾಡಿದರು.