ಕಾಶಿ ಯಾತ್ರೆ ಮಾಡಲು ಇಚ್ಚಿಸುವ ಪ್ರತಿಯೊಬ್ಬರಿಗೆ ೫ ಸಾವಿರ ರೂಪಾಯಿ ನೀಡಲಿರುವ ರಾಜ್ಯ ಸರಕಾರ !

ಭಾಜಪ ಸರಕಾರಕ್ಕೆ ಅಭಿನಂದನೆ !

ಬೆಂಗಳೂರು – ಭಾಜಪದ ರಾಜ್ಯ ಸರಕಾರ ‘ಕಾಶಿ ಯಾತ್ರೆ’ ಎಂಬ ಯೋಜನೆಗೆ ಸ್ವೀಕೃತಿ ನೀಡಿದೆ. ಇದರಡಿಯಲ್ಲಿ ಕಾಶಿಯ ಕಾಶಿ ವಿಶ್ವನಾಥ ದೇವಸ್ಥಾನ ನೋಡಲು ಇಚ್ಚಿಸುವ ೩೦ ಸಾವಿರ ಭಕ್ತರಿಗೆ ತಲಾ ೫ ಸಾವಿರ ರೂಪಾಯಿ ಅನುದಾನ ನೀಡಲಾಗುವುದು. ಅದಕ್ಕಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ೭ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

ರಾಜ್ಯದ ಧಾರ್ಮಿಕ ದತ್ತಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಪ್ರಕಾರ, ಈ ಯೋಜನೆಯ ಲಾಭ ಕೇವಲ ಕರ್ನಾಟಕ ಮೂಲದ ಜನರ ಪಡೆಯಬಹುದು. ಜೀವನದಲ್ಲಿ ಒಂದು ಸಾರಿ ಯೋಜನೆಯ ಲಾಭ ಪಡೆಯಬಹುದು.

ಸಂಪಾದಕೀಯ ನಿಲುವು

ಈ ರೀತಿಯ ಯೋಜನೆ ಭಾಜಪದ ಸರಕಾರ ಇರುವ ಇತರ ರಾಜ್ಯಗಳೂ ಜಾರಿ ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಇದರಲ್ಲಿ ಈಗ ಜಾತ್ಯತೀತರು ಅಥವಾ ಪ್ರಗತಿಪರರು ಕೇಸರೀಕರಣದ ಆರೋಪ ಮಾಡಿದರೆ ಆಶ್ಚರ್ಯ ಅನಿಸಬಾರದು !