ನಕಲಿ ಮತ್ತು ಕಳಪೆ ಔಷಧ ಉತ್ಪಾದನೆಯಿಂದಾಗಿ ೧೮ ಕಂಪನಿಗಳ ಲೈಸೆನ್ಸ್ ರದ್ದು !
ಕೇಂದ್ರ ಸರಕಾರವು ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿ ಉತ್ಪಾದಿಸುವ ೧೮ ಕಂಪನಿಗಳ ಲೈಸೆನ್ಸ್ ರದ್ದುಪಡಿಸಿದ್ದಾರೆ. ಹಾಗೂ ಅವರಿಗೆ ಉತ್ಪಾದನೆಯನ್ನು ನಿಲ್ಲಿಸಲು ಹೇಳಿದ್ದಾರೆ. ‘ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ’ ದ ತಂಡದಿಂದ ೨೦ ರಾಜ್ಯಗಳಲ್ಲಿ ಅನಿರೀಕ್ಷಿತ ಪರಿಶೀಲನೆ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ೧೫ ದಿನಗಳಿಂದ ಈ ಪರಿಶೀಲನೆ ನಡೆಯುತ್ತಿದೆ.