`ಪಂಜಾಬಿನ ಘಟನೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ! (ಅಂತೆ) – ಕೆನಡಾ ವಿದೇಶಾಂಗ ಸಚಿವ

ಕೆನಡಾ ವಿದೇಶಾಂಗ ಸಚಿವ ಮೆಲಾನಿ ಜೊಲಿಯ

ಟೊರೆಂಟೊ(ಕೆನಡಾ)- ನಮಗೆ ಪಂಜಾಬಿನ ಘಟನಾವಳಿಗಳ ಬಗ್ಗೆ ತಿಳಿದಿದೆ. ನಾವು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಸಿಕ್ಖ್ ಸಮಾಜದ ಜನರ ಚಿಂತೆಯನ್ನು ದೂರ ಮಾಡುವ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದು ಕೆನಡಾ ವಿದೇಶಾಂಗ ಸಚಿವ ಮೆಲಾನಿ ಜೊಲಿಯವರು ಕೆನಡಾ ಸದನದಲ್ಲಿ ಉತ್ತರಿಸಿದರು. ಸಿಕ್ಖ ಶಾಸಕ ಇಕವಿಂದರ ಗಹೀರ ಇವರು `ಭಾರತದ ಪಂಜಾಬನಲ್ಲಿ ಇಂಟರನೆಟ ಸ್ಥಗಿತಗೊಳಿಸಲಾಗಿದೆ. ಪಂಜಾಬಿನಲ್ಲಿರುವ ಕೆನಡಾದ ಜನರಿಗೆ ಸಂಬಂಧಿಕರು, ಮಿತ್ರರೊಂದಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

ಶಾಸಕ ಸೋನಿಯಾ ಸಿದ್ಧೂ ಇವರು ಟ್ವೀಟ ಮಾಡಿ, `ನನಗೆ ಪಂಜಾಬಿನಿಂದ ದೂರವಾಣಿ ಕರೆಗಳು ಬರುತ್ತಿವೆ,ನಾನು ಇದರಿಂದ ಬಹಳ ಚಿಂತೆಗೊಳಗಾಗಿದ್ದೇನೆ. ಈ ಸ್ಥಿತಿ ಬೇಗನೆ ತಿಳಿಗೊಳ್ಳುವುದು ಮತ್ತು ಕೆನಡಾ ಜನರು ತಮ್ಮಕುಟುಂಬದವರೊಂದಿಗೆ ಪುನಃ ಸಂಪರ್ಕ ಸಾಧಿಸಬಹುದು’ಎಂದು ಆಶಿಸುತ್ತೇನೆಂದು ಹೇಳಿದರು.  2021 ರ ಜನಗಣತಿಯನುಸಾರ ಕೆನಡಾದಲ್ಲಿ 9 ಲಕ್ಷ 50 ಸಾವಿರ ಸಿಕ್ಖ್ ಜನಸಂಖ್ಯೆಯಿದೆ. ಇದು ದೇಶದ ಜನಸಂಖ್ಯೆಯ ಶೇ. 2.6 ರಷ್ಟು ಇದೆ.

ಕೆನಡಾದಲ್ಲಿರುವ ಓಂಟಾರಿಯೋದಲ್ಲಿ ಖಲಿಸ್ತಾನಿಗಳು ಮಾರ್ಚ 24 ರಂದು ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಅಪಮಾನಿಸಿ ಅದಕ್ಕೆ ಹಾನಿ ಮಾಡಿದ್ದರು.

ಸಂಪಾದಕೀಯ ನಿಲುವು

ಕೆನಡಾ ವಿದೇಶಾಂಗ ಸಚಿವರು ಭಾರತದ ಬದಲಾಗಿ ಕೆನಡಾದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನವಾದಿಗಳಿಂದ ನಡೆಯುವ ಆಕ್ರಮಣದ ಕಡೆಗೆ ಗಮನಹರಿಸುವ ಆವಶ್ಯಕತೆಯಿದೆ.