ಭಾರತವು ಭವಿಷ್ಯದಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸಲಿದೆ !

ವಿಶ್ವಸಂಸ್ಥೆಯ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

* ಗಂಗಾ, ಬ್ರಹ್ಮಪುತ್ರ ಮತ್ತು ಸಿಂಧು ನದಿಗಳ ನೀರಿನ ಮಟ್ಟ ಕುಸಿಯಲಿದೆ !

ನ್ಯೂಯಾರ್ಕ್ – ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ವಿಶ್ವದ ನೀರಿನ ಸ್ಥಿತಿಯ ಕುರಿತು ಬಿಡುಗಡೆ ಮಾಡಿದ ವರದಿಯಲ್ಲಿ, 2050 ರ ವೇಳೆಗೆ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾದ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಲಿದೆ. ಮುಂಬರುವ ದಶಕಗಳಲ್ಲಿ, ಹಿಮನದಿಗಳು ಮತ್ತು ಮಂಜುಗಡ್ಡೆಯ ಕರಗುವಿಕೆಯಿಂದ ಭಾರತದ ಜೀವನಾಡಿಗಳೆಂದು ಪರಿಗಣಿಸಲ್ಪಟ್ಟಿರುವ ಗಂಗಾ, ಬ್ರಹ್ಮಪುತ್ರ ಮತ್ತು ಸಿಂಧೂ ನದಿಗಳ ನೀರಿನ ಮಟ್ಟವು ಕಡಿಮೆಯಾಗುತ್ತದೆ. ಏಷ್ಯಾದ 10 ಪ್ರಮುಖ ನದಿಗಳು ಹಿಮಾಲಯದಿಂದ ಹುಟ್ಟುತ್ತವೆ. ಆದ್ದರಿಂದ, ನೀರಿನ ಕೊರತೆಯು ಉಲ್ಬಣಗೊಂಡರೆ, ಅದು ಭಾರತ, ಪಾಕಿಸ್ತಾನ ಮತ್ತು ಚೀನಾ ದೇಶಗಳ ಮೇಲೆ ಪರಿಣಾಮ ಬೀರಲಿದೆ. ಹಿಮನದಿಗಳ ಶೀಘ್ರ ಕರಗುವಿಕೆಯು ಭಾರತದೊಂದಿಗೆ ಪಾಕಿಸ್ತಾನ ಮತ್ತು ಚೀನಾದಲ್ಲಿ ಪ್ರವಾಹಸದೃಶ್ಯ ಸ್ಥಿತಿ ಉಂಟಾಗಬಹುದು.

1. ಪ್ರಪಂಚದ 2-3 ಅಬ್ಜದಷ್ಟು ಜನರು ಕನಿಷ್ಠ ವರ್ಷಕ್ಕೊಮ್ಮೆ 1 ತಿಂಗಳ ಕಾಲವಾದರೂ ನೀರಿನ ಕೊರತೆಯ ಬಿಕ್ಕಟ್ಟನ್ನು ಎದುರಿಸುತ್ತಾರೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ, 2050 ರ ವರೆಗೆ ವಿಶ್ವದ ಅರ್ಧದಷ್ಟು ಜನಸಂಖ್ಯೆ ಅಂದಾಜು 1.7 ಅಬ್ಜದಿಂದ 2.4 ಅಬ್ಜದಷ್ಟು ಜನರು ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗಲಿದೆ.

2. 2 ಸಾವಿರದ 500 ಕಿಮೀ ಉದ್ದವಿರುವ ಗಂಗಾ ನದಿಯನ್ನೇ ವಿವಿಧ ರಾಜ್ಯಗಳಲ್ಲಿ ಅಂದಾಜು 40 ಕೋಟಿ ಜನರು ಅವಲಂಬಿಸಿದ್ದಾರೆ. ಈ ನದಿಯ ನೀರು ಬತ್ತಿದರೆ ಹಲವು ರಾಜ್ಯಗಳ ಜನರ ಮೇಲೆ ಪರಿಣಾಮ ಬೀರಲಿದೆ.