ವಾಷಿಂಗ್ಟನ್ (ಅಮೆರಿಕಾ) ದ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಲಿಸ್ತಾನಿಗಳಿಂದ ಪ್ರತಿಭಟನೆ
ವಾಷಿಂಗ್ಟನ್ ಡಿಸಿ (ಅಮೇರಿಕ) – ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಳಿಸ್ತಾನಿಗಳಿಂದ ನಡೆಯುತ್ತಿರುವ ಪ್ರತಿಭಟನೆಯ ವಾರ್ತೆ ಮಾಡುತ್ತಿರುವ, ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ (ಪಿ.ಟಿ.ಐ.ನ) ಪತ್ರಕರ್ತ ಲಲಿತ ಝಾ ಇವರಿಗೆ ಖಲಿಸ್ತಾನಿಗಳು ಥಳಿಸಿರುವ ಬಗ್ಗೆ ಝಾ ಇವರು ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ. ಅವರು ಒಂದು ವಿಡಿಯೋ ಪ್ರಸಾರ ಮಾಡಿದ್ದು ಅದರಲ್ಲಿ ೨ ಖಳಿಸ್ತಾನಿಗಳ ಬೆಂಬಲಿಗರು ಅವರಿಗೆ ಬೈಯುತ್ತಿರುವುದು ಕಾಣುತ್ತಿದೆ.
ಅಮೆರಿಕಾದಲ್ಲಿ ಮುಂದುವರೆದ ಖಾಲಿಸ್ತಾನಿಗಳ ಉಪಟಳ: ಭಾರತೀಯ ಪತ್ರಕರ್ತನ ಮೇಲೆ ಹಲ್ಲೆ#Journalist #Attacked #Khalistan #Embassy #protest #Washington#Indianembassy #Khalistansupporters, #journalistLalitJha #USSecretService #KhalistaniMilitantshttps://t.co/aZJZDOFnB9
— Asianet Suvarna News (@AsianetNewsSN) March 26, 2023
ಝಾ ಇವರು, ಖಲಿಸ್ತಾನಿ ಬೆಂಬಲಿಗರು ನನ್ನ ಎಡಕಿವಿಯ ಮೇಲೆ ಎರಡು ಬಾರಿ ಲಾಠಿಯಿಂದ ಹೊಡೆದರು. ಈ ಘಟನೆಯಿಂದ ನನಗೆ ಅಮೇರಿಕಾದಲ್ಲಿನ ಸಪ್ಟೆಂಬರ್ ೧೧, ೨೦೦೧ ರ ಭಯೋತ್ಪಾದಕ ದಾಳಿಯ ನೆನಪಾಯಿತು. ನಾನು ಭಯಪಟ್ಟು ಪೊಲೀಸರ ವಾಹನದ ಕಡೆಗೆ ಓಡಿದೆ.’ ಟ್ವಿಟಿನಲ್ಲಿ ಅವರು ಪೊಲೀಸರಿಗೆ ಧನ್ಯವಾದಗಳು ಹೇಳಿದ್ದಾರೆ ಮತ್ತು ‘ನೀವು ನನ್ನನ್ನು ಕಾಪಾಡಿದ್ದೀರಿ, ಇಲ್ಲವಾದರೆ ನಾನು ಆಸ್ಪತ್ರೆಯಿಂದ ಈ ಸಂದೇಶ ಬರೆಯುತ್ತಿದ್ದೆ, ಎಂದು ಅವರು ಹೇಳಿದರು. ಝಾ ಇವರ ಮೇಲೆ ದಾಳಿ ಮಾಡಿರುವವರ ವಿರುದ್ಧ ದೂರು ನೀಡದಿರುವ ನಿರ್ಣಯ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಾಷಿಂಗ್ಟನ್ ನ ಭಾರತೀಯ ರಾಯಭಾರಿ ಕಚೇರಿಯಿಂದ, ವಾಷಿಂಗ್ಟನ್ ಡಿಸಿಯಲ್ಲಿ ಖಲಿಸ್ತಾನಿ ಪ್ರತಿಭಟನೆಯ ವಾರ್ತೆಯನ್ನು ಕಲೆ ಹಾಕಲು ಹೋಗಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಹಿರಿಯರ ಜೊತೆಗೆ ನಡೆದಿರುವ ದೂರವರ್ತನೆಯ ವಿಡಿಯೋ ನಾವು ನೋಡಿದ್ದೇವೆ. ಪತ್ರಕರ್ತನನ್ನು ಮೊದಲು ನಿಂದಿಸಿ ನಂತರ ಥಳಸಿರುವುದು ನಮಗೆ ತಿಳಿಯಿತು. ಅವರ ಭದ್ರತೆಗಾಗಿ ಕಾನೂನು ಕ್ರಮ ಕೈಗೊಳ್ಳಲು ಇಲಾಖೆಗೆ ಕರೆ ಮಾಡಿ ತಿಳಿಸಬೇಕಾಯಿತು. ಪತ್ರಕರ್ತರ ಮೇಲೆ ನಡೆದಿರುವ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಚಟುವಟಿಕೆಯು ಈ ತಥಾಕಥಿತ ಖಲಿಸ್ತಾನಿ ಬೆಂಬಲಿಗರ ಹಿಂಸಾತ್ಮಕ ಮತ್ತು ಸಮಾಜ ವಿರೋಧಿ ಮಾನಸಿಕತೆ ತೋರಿಸುತ್ತದೆ, ಅದು ಸತತವಾಗಿ ಹಿಂಸಾಚಾರ ಮತ್ತು ವಿದ್ವಾಂಸಕೃತ್ಯ ಮಾಡುತ್ತಿರುತ್ತಾರೆ.
Thank you @SecretService 4 my protection 2day 4 helping do my job, otherwise I would have been writing this from hospital. The gentleman below hit my left ear with these 2 sticks & earlier I had to call 9/11 & rushed 2 police van 4 safety fearing physical assault👇. pic.twitter.com/IVcCeP5BPG
— Lalit K Jha ललित के झा (@lalitkjha) March 25, 2023
ಸಂಪಾದಕೀಯ ನಿಲುವುತನ್ನನ್ನು ಮಹಾಶಕ್ತಿ ಎಂದು ತಿಳಿಯುವ ಅಮೆರಿಕದಲ್ಲಿ ಮುಷ್ಟಿಯಷ್ಟು ಖಳಿಸ್ತಾನಿಗಳು ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಾರೆ, ಪತ್ರಕರ್ತರನ್ನು ಥಳಿಸುತ್ತಾರೆ, ಇದು ಅಮೆರಿಕಾಗೆ ನಾಚಿಕೆಗೇಡು ! ಅಮೇರಿಕಾದ ಪತ್ರಕರ್ತನಿಗೆ ಭಾರತದಲ್ಲಿ ಯಾರೇ ಥಳಿಸಿದರೂ, ಅಮೆರಿಕ ಆಕಾಶ ಪಾತಾಳ ಒಂದು ಮಾಡುತ್ತಿತ್ತು ! |
‘ನೀವು ಅಲ್ಪಸಂಖ್ಯಾತರನ್ನು ಥಳಿಸುತ್ತಿರಿ !’ (ಅಂತೆ) ಖಲಿಸ್ತಾನಿ
ಖಲಿಸ್ತಾನಿ ಪ್ರತಿಭಟನಾಕಾರರು ಭಾರತೀಯ ರಾಯಭಾರಿ ತರಣಜಿತ ಸಿಂಹ ಸಂಧೂ ಇವರ ಬಗ್ಗೆ ಟೀಕಿಸಿದ್ದಾರೆ. ಖಲಿಸ್ತಾನಿಗಳು, ”ಈ ಸಂದೇಶ ಭಾರತ ಸರಕಾರ ಮತ್ತು ಅವರ ರಾಯಭಾರಿ ತರಣಜಿತ ಸಿಂಹ ಸಂಧೂ ಇವರಿಗಾಗಿ ಇದೆ. ಯಾರು ಮುಕ್ತ ಜಗತ್ತಿನಲ್ಲಿ ಭಯೋತ್ಪಾದಕ ಮುತ್ಸದ್ದಿತನದ ಮುಖವಾಡಗಳಿದೆ. ನಾವು ಅವರಿಗೆ ನೆನಪು ಮಾಡಿಕೊಡಲು ಇಚ್ಚಿಸುತ್ತೇವೆ ನೀವು ಅಲ್ಪಸಂಖ್ಯಾತರನ್ನು ಹೊಡೆಯುತ್ತೀರಿ, ಕ್ರೈಸ್ತ ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತೀರಿ ಮತ್ತು ನಿರಪರಾಧಿ ಸಿಖ್, ಮುಸಲ್ಮಾನ್ ಹಾಗೂ ನಾಗಾಲ್ಯಾಂಡಿನ ಜನರಿಗೆ ಹೊಡೆಯುತ್ತೀರಿ ಮತ್ತು ಇಲ್ಲಿ ಬಂದು ನೀವು ‘ನಮ್ಮದು ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವವಾಗಿದೆ, ಎಂದು ಹೇಳುತ್ತೀರಿ. ಇದು ಸ್ವೀಕರಿಸಲಾಗುವುದಿಲ್ಲ. ಈ ಕಪಟಿತನವನ್ನು ಮುಗಿಸುವ ಸಮಯ ಬಂದಿದೆ ಎಂದು ಹೇಳಿದರು.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ರಾಯಭಾರಿ ಕಚೇರಿಯ ಹೊರಗೆ ಭಾರತೀಯ ನಾಗರೀಕರಿಂದ ಶಾಂತಿಯುತ ಮೆರವಣಿಗೆ !
ಸ್ಯಾನ್ ಫ್ರಾನ್ಸಿಸ್ಕೋ (ಅಮೇರಿಕಾ) – ಕಳೆದ ವಾರದಲ್ಲಿ ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಳಿಸ್ತಾನಿಗಳು ನಡೆಸಿರುವ ದಾಳಿಯ ಘಟನೆಯ ನಂತರ ಮಾರ್ಚ್ ೨೬ ರಂದು ಇಲ್ಲಿಯ ಭಾರತೀಯ ನಾಗರಿಕರು ರಾಯಭಾರಿ ಕಚೇರಿಯ ಎದುರು ಒಟ್ಟಾಗಿ ಸೇರಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ಈ ಸಮಯದಲ್ಲಿ ಅವರು ಭಾರತೀಯ ರಾಷ್ಟ್ರಧ್ವಜ ಕೂಡ ಹಾರಿಸಿದರು.
#WATCH | United States: Indians gather outside the Indian consulate in San Francisco in support of India’s unity pic.twitter.com/tuLxMBV3q0
— ANI (@ANI) March 25, 2023
ಸಂಪಾದಕರ ನಿಲುವುಇದಕ್ಕೇ ಹೇಳುವುದು ‘ಕಳ್ಳನಿಗೊಂದು ಪಿಳ್ಳೆ ನೆವ !’ ಭಾರತದಲ್ಲಿನ ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಥಳಿಸಿದ್ದರೆ, ಆಗ ಭಾರತದಲ್ಲಿ ಅಲ್ಪಸಂಖ್ಯಾತರು ಇರುತ್ತಿರಲಿಲ್ಲ; ಆದರೆ ದೇಶದಲ್ಲಿನ ೯ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿದ್ದೂ ಅಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತದೆ. ಅಷ್ಟೇ ಅಲ್ಲದೆ ಎಲ್ಲಿ ಹಿಂದೂ ಬಹುಸಂಖ್ಯಾತರಿದ್ದಾರೆ ಅಲ್ಲಿ ಕೂಡ ಹಿಂದೂಗಳಿಗೆ ಪೆಟ್ಟು ಬೀಳುತ್ತದೆ ! |