ಖಲಿಸ್ತಾನಿಗಳಿಂದ ಕೆನಡಾದ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಪ್ರಕರಣ

ಭಾರತದಿಂದ ಕೆನಡಾದ ರಾಯಭಾರಿಗೆ ಸ್ಪಷ್ಟೀಕರಣ ಕೇಳಿದೆ !

ನವದೆಹಲಿ – ಕೆನಡಾದ ಟೋರೆಂಟೋದಲ್ಲಿ ಭಾರತೀಯ ಹೈಕಮಿಶನರ್ ಕಚೇರಿಯ ಹೊರಗೆ ಖಲಿಸ್ತಾನಿಗಳು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಭಾರತೀಯ ಹೈಕಮಿಶನರ್ ಗೆ ಒಂದು ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದಿಂದ ಭಾರತದಲ್ಲಿನ ಕೆನಡಾದ ಹೈಕಮಿಶನರ್ ಗೆ ನೋಟಿಸ್ ಜಾರಿ ಮಾಡಿ ಭದ್ರತೆಯ ವಿಷಯದಲ್ಲಿ ದುರ್ಲಕ್ಷತನ ತೋರಿದ ಬಗ್ಗೆ ಸ್ಪಷ್ಟೀಕರಣ ಕೇಳಿದೆ.


ವಿದೇಶಾಂಗ ಸಚಿವಾಲಯದಿಂದ ಜಾರಿ ಮಾಡಿರುವ ನೋಟಿಸನಲ್ಲಿ, ಕೆನಡಾದ ವಿಯೆನ್ನ ಒಪ್ಪಂದದ ನಿಬಂಧನೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೂ ಪ್ರತಿಭಟನೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮಗೆ, ಕೆನಡಾ ಸರಕಾರ ನಮ್ಮ ಹೈಕಮಿಶನರ್ ಕಚೇರಿಯಲ್ಲಿನ ಅಧಿಕಾರಿಗಳ ಭದ್ರತೆಯ ಬಗ್ಗೆ ಯೋಗ್ಯ ನಿರ್ಣಯ ತೆಗೆದುಕೊಳ್ಳುವರು ಎಂಬ ನಂಬಿಕೆ ಇದೆ. ಆದ್ದರಿಂದ ಅವರಿಗೆ ಒತ್ತಡರಹಿತ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದು. ಎಂದು ಹೇಳಿದರು.

ಸಂಪಾದಕರ ನಿಲುವು

ಕಳೆದ ಕೆಲವು ದಶಕಗಳಿಂದ ಕೆನಡಾವು ಖಲಿಸ್ತಾನಿಗಳ ಚಟುವಟಿಕೆಯ ತಾಣವಾಗಿದೆ. ಇದನ್ನು ತಿಳಿದು ಭಾರತವು ಕೇವಲ ಸ್ಪಷ್ಟೀಕರಣ ಕೇಳಿ ನಿಲ್ಲದೆ ಬೇರುಬಿಟ್ಟಿರುವ ಖಲಿಸ್ತಾನವಾದ ನಾಶಗೊಳಿಸುವ ಪ್ರಯತ್ನ ಮಾಡುವುದು ಅವಶ್ಯಕ !