ಅಮೆರಿಕಾದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಯು ವೇಗವಾಗಿ ರೂಢಿಯಾಗುತ್ತಿದೆ !

* ಶೇ. 23 ರಷ್ಟು ಪ್ರೌಢರು ತಮ್ಮ ಪೋಷಕರು ಮತ್ತು ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿದ್ದಾರೆ

ನ್ಯೂಯಾರ್ಕ್ – ಅಮೆರಿಕಾದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ವೇಗವಾಗಿ ಹೆಚ್ಚುತ್ತಿದೆ ಎಂಬ ವರದಿ ಬೆಳಕಿಗೆ ಬಂದಿದೆ. ದೇಶದಲ್ಲಿ 23 ಶೇ. ಪ್ರೌಢರು ಈಗ ತಮ್ಮ ಪೋಷಕರು ಮತ್ತು ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿದ್ದಾರೆ. ‘ಎ.ಆರ್‌.ಪಿ.’ ಈ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ 2015 ರಿಂದ 2020 ರ ಅವಧಿಯಲ್ಲಿ ಒಟ್ಟಿಗೆ ವಾಸಿಸುವ ಕುಟುಂಬಗಳ ಸಂಖ್ಯೆ ಶೇ.28 ರಿಂದ ಶೇ.30 ಕ್ಕೆ ಏರಿಕೆಯಾಗಿದೆ. ಅಮೆರಿಕಾದಲ್ಲಿ, ವಯಸ್ಸಾದ ಪೋಷಕರು ಮತ್ತು ಪ್ರೌಢರ ಕಾಳಜಿ ವಹಿಸುವ ಪೀಳಿಗೆಯನ್ನು ‘ಸ್ಯಾಂಡ್ವಿಚ್’ ಪೀಳಿಗೆ ಎಂದು ಕರೆಯಲಾಗುತ್ತದೆ. “ಒಂದೇ ಸಮಯದಲ್ಲಿ ವಯಸ್ಸಾದ ಪೋಷಕರು ಮತ್ತು ಮಕ್ಕಳ ಜವಾಬ್ದಾರಿಗಳಿಂದಾಗಿ ಅಂತಹ ಕುಟುಂಬಗಳ ಮೇಲೆ ಒತ್ತಡ ಬರುತ್ತವೆ”, ಎಂದು ನಂಬಲಾಗಿದೆ; ಆದರೆ ‘ಕಾಲಾನಂತರದಲ್ಲಿ, ಈ ಕುಟುಂಬಗಳು ಪೋಷಕರು ಮತ್ತು ಮಕ್ಕಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಕಲಿಯುತ್ತವೆ’, ಇದು ಸಹ ಬೆಳಕಿಗೆ ಬಂದಿದೆ.

1. ಅವಿಭಕ್ತ ಕುಟುಂಬಗಳ ಮಕ್ಕಳು ವಿಭಕ್ತ ಕುಟುಂಬಗಳಿಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ ಎಂದು ‘ಪ್ಯೂ ರಿಸರ್ಚ್’ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಸಮೀಕ್ಷೆಯ ಪ್ರಕಾರ ಮಕ್ಕಳ ಶೈಕ್ಷಣಿಕ ಮಟ್ಟವು ವಿಭಕ್ತ ಕುಟುಂಬಕ್ಕಿಂತ ಉತ್ತಮವಾಗಿದೆ. ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಯುವಕರಲ್ಲಿ ಕನಿಷ್ಠ 30 ಶೇ. ಪದವೀಧರರಾಗಿದ್ದರೆ, ವಿಭಕ್ತ ಕುಟುಂಬಗಳಲ್ಲಿ 20 ಶೇ. ದಷ್ಟಿದ್ದಾರೆ.

2. ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಶೇಕಡಾ 48 ರಷ್ಟು ಯುವಕರು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷವಾಗಿದ್ದರೆ, ಪ್ರತ್ಯೇಕ ಕುಟುಂಬಗಳಲ್ಲಿ ವಾಸಿಸುವ ಶೇಕಡಾ 44 ರಷ್ಟು ಯುವಕರು ತಮ್ಮ ಕುಟುಂಬ ಜೀವನದಲ್ಲಿ ಸಂತೋಷವಾಗಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

ಸಂಪಾದಕರ ನಿಲುವು

* ಭಾರತದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಒಡೆಯುತ್ತಿರುವಾಗ, ಅಮೆರಿಕಾದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಹೆಚ್ಚುತ್ತಿದೆ ! ಭಾರತೀಯರು ಇದರ ಬಗ್ಗೆ ಯೋಚಿಸಬೇಕು !