ಅಮೇರಿಕಾದ `ಟೈಮ್ಸ ಸ್ಕ್ವೇರ್’ನಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಪ್ರತಿಭಟನೆ !

ಭಾರತ ವಿರೋಧಿ, ಪಾಕಿಸ್ತಾನ ಬೆಂಬಲಿಸಿ ಘೋಷಣೆ !

ಅಮೆರಿಕದ ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಖಲಿಸ್ತಾನ್ ಬೆಂಬಲಿಗರ ಪ್ರತಿಭಟನೆ

ನ್ಯೂಯಾರ್ಕ (ಅಮೇರಿಕಾ) – ಇಲ್ಲಿಯ ಪ್ರಸಿದ್ಧ `ಟೈಮ್ಸ ಸ್ಕ್ವೇರ್’ ಪ್ರದೇಶದಲ್ಲಿ ಖಲಿಸ್ತಾನಿ ಬೆಂಬಲಿಗರು ಖಲಿಸ್ತಾನಿ ಅಮೃತಪಾಲ ಸಿಂಹನ ಬಂಧನದ ಪ್ರಯತ್ನದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಪುರುಷರೊಂದಿಗೆ ಮಹಿಳೆಯರು ಮತ್ತು ಚಿಕ್ಕ ಮಕ್ಕಳೂ ಭಾಗವಹಿಸಿದ್ದರು. ಖಲಿಸ್ತಾನಿ ಧ್ವಜವನ್ನು ಹಾರಿಸುತ್ತಾ ಭಾರತ ವಿರೋಧಿ ಘೋಷಣೆಗಳನ್ನು ಕೂಗುವುದರ ಜೊತೆಗೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ನ್ಯೂಯಾರ್ಕ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

1. ಲಂಡನ ಮತ್ತು ಸ್ಯಾನಫ್ರಾನ್ಸಿಸ್ಕೊ ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೇಲಿ ನಡೆದ ದಾಳಿಯಿಂದಾಗಿ ನ್ಯೂಯಾರ್ಕ ಪೊಲೀಸರು ಜಾಗರೂಕರಾಗಿದ್ದಾರೆ.

2. ಮಾರ್ಚ 18 ರಂದು ಪಂಜಾಬ ಪೊಲೀಸರು ಅಮೃತಪಾಲ ಸಿಂಹನನ್ನು ಬಂಧಿಸಲು ಅವನನ್ನು ಘೇರಾವ ಹಾಕಿದ್ದರು. ಆ ಸಮಯದಲ್ಲಿ ಅವನ ಬೆಂಬಲಿಗರ ಸಹಾಯದಿಂದ ಅಲ್ಲಿಂದ ಪರಾರಿಯಾದನು. ಆಗಿನಿಂದ ಅವನನ್ನು ಹುಡುಕಲಾಗುತ್ತಿದೆ.

3. ಇನ್ನೊಂದೆಡೆ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ ಬಗಚಿ ಇವರು ಭಾರತದ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತಾ, ಭಾರತೀಯ ರಾಯಭಾರ ಕಚೇರಿಯ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಸಂಬಂಧಿಸಿದ ದೇಶಗಳು ಕಠಿಣ ನಿಲುವನ್ನು ಕೈಗೊಂಡು ಆರೋಪಿಗಳ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಬೇಕು. ಕೇವಲ ಆಶ್ವಾಸನೆಗಳಿಂದ ಅಲ್ಲ, ಸೂಕ್ತ ಕ್ರಮ ಕೈಗೊಂಡರೆ ಮಾತ್ರ ನಮಗೆ ಸಮಾಧಾನವಾಗುವುದು ಎಂದು ಹೇಳಿದರು.

ಸಂಪಾದಕರ ನಿಲುವು

ಇಂತಹ ಭಾರತದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೇರಿಕಾ ಮೇಲೆ ಭಾರತ ಒತ್ತಡ ಹೇರಬೇಕು !