ಬ್ರಿಟನ ಸರಕಾರ ಭದ್ರತೆಯ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲ ! – ವಿದೇಶಾಂಗ ಸಚಿವ ಎಸ್.ಜೈಶಂಕರ

ಖಲಿಸ್ತಾನಿಯರು ಲಂಡನ್ ನ ಭಾರತೀಯ ಹೈಕಮೀಷನ ಕಚೇರಿ ಧ್ವಂಸಗೊಳಿಸಿದ ಪ್ರಕರಣ

ವಿದೇಶಾಂಗ ಸಚಿವ ಎಸ್.ಜೈಶಂಕರ

ಬೆಂಗಳೂರು – ಲಂಡನ್ ನ ಭಾರತೀಯ ಹೈಕಮೀಷನ ಕಚೇರಿಗೆ ಖಲಿಸ್ತಾನಿಯರು ನುಗ್ಗಿ ಧ್ವಂಸಗೊಳಿಸಿ, ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸಿದ ಪ್ರಕರಣದ ಬಗ್ಗೆ ವಿದೇಶಾಂಗ ಸಚಿವ ಎಸ್. ಶಂಕರ ಇವರು ಬ್ರಿಟನ್ ಸರಕಾರಕ್ಕೆ ಹೊಣೆಗಾರರನ್ನಾಗಿ ಮಾಡಿದ್ದಾರೆ.ಅವರು, “ಬ್ರಿಟನ ಸರಕಾರ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಯಾವ ದೇಶದಲ್ಲಿ ರಾಯಭಾರ ಕಚೇರಿ ಅಥವಾ ಹೈ ಕಮೀಷನ್ ಕಚೇರಿ ಇದೆಯೋ, ಅಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಭದ್ರತೆಯನ್ನು ಒದಗಿಸುವ ಜವಾಬ್ದಾರಿ ಆ ದೇಶದ್ದಾಗಿರುತ್ತದೆ. ಹೈ ಕಮೀಷನ್ ಸುತ್ತಲಿನ ಪರಿಸರದ ಭದ್ರತೆಯ ಕಾಳಜಿಯನ್ನು ತೆಗೆದುಕೊಳ್ಳಬೇಕು; ಆದರೆ ಬ್ರಿಟಿಶ ಸರಕಾರ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ’ ಎಂದು ಬೆಂಗಳೂರಿನ ಯುವ ಸಂವಾದದಲ್ಲಿ ಮಾತನಾಡುತ್ತಿರುವಾಗ ವಿದೇಶಾಂಗ ಸಚಿವರು ಮೇಲಿನ ಹೇಳಿಕೆ ನೀಡಿದರು.

ಅವರು ತಮ್ಮ ಮಾತನ್ನು ಮುಂದುವರಿಸಿ, ಯಾವ ದಿನ ಖಲಿಸ್ತಾನಿಯರು ಹೈಕಮೀಷನ ಕಚೇರಿಯ ಎದುರಿಗೆ ಬಂದರೋ, ಆ ಸಮಯದಲ್ಲಿ ಹೈ ಕಮೀಷನ್ ಕಚೇರಿಗೆ ಪೂರೈಸಲಾಗಿದ್ದ ಭದ್ರತೆಯು ಉನ್ನತ ಶ್ರೇಣಿಯದ್ದಾಗಿರಲಿಲ್ಲ. ಅನೇಕ ದೇಶಗಳು ಹೈಕಮೀಷನ್ ಕಚೇರಿಗಳಿಗೆ ಭದ್ರತೆಯನ್ನು ಒದಗಿಸುವಲ್ಲಿ ನಿರ್ಲಕ್ಷ ತೋರಿಸುತ್ತಾರೆ. ಅವರು ತಮ್ಮ ಸ್ವಂತ ರಕ್ಷಣೆಯ ವಿಷಯದಲ್ಲಿ ಜಾಗರೂಕರಾಗಿರುತ್ತಾರೆ; ಆದರೆ ಇತರರ ರಕ್ಷಣೆಯ ವಿಷಯದಲ್ಲಿ ಅವರ ದೃಷ್ಟಿಕೋನ ಬೇರೆಯೇ ಆಗಿರುತ್ತದೆ. ಭದ್ರತೆಯ ವಿಷಯದಲ್ಲಿ ಇಂತಹ ಪಕ್ಷಪಾತದ ಧೋರಣೆಯನ್ನು ಸಹಿಸುವುದಿಲ್ಲವೆಂದು ಹೇಳಿದರು.

ಸಂಪಾದಕೀಯ ನಿಲುವು

ಬ್ರಿಟನ್‌ಗೆ ಈ ಪ್ರಕರಣದ ಬಗ್ಗೆ ಭಾರತವು ಛೀಮಾರಿ ಹಾಕುವುದರೊಂದಿಗೆ ಅದಕ್ಕೆ ತಿಳಿಯುವಂತಹ ಭಾಷೆಯಲ್ಲಿ ಪ್ರತ್ಯುತ್ತರ ನೀಡುವುದು ಆವಶ್ಯಕ !