ನಕಲಿ ಮತ್ತು ಕಳಪೆ ಔಷಧ ಉತ್ಪಾದನೆಯಿಂದಾಗಿ ೧೮ ಕಂಪನಿಗಳ ಲೈಸೆನ್ಸ್ ರದ್ದು !

ಇದರ ಅನುಮತಿ ರದ್ದುಪಡಿಸುವುದರ ಜೊತೆಗೆ ಕಳಪೆ ಗುಣಮಟ್ಟದ ಔಷಧಿ ಉತ್ಪಾದನೆ ಮಾಡುವವರನ್ನು ಜೈಲಿಗೆ ಅಟ್ಟಬೇಕು !

ನವ ದೆಹಲಿ – ಕೇಂದ್ರ ಸರಕಾರವು ನಕಲಿ ಮತ್ತು ಕಳಪೆ ಔಷಧಿ ಉತ್ಪಾದಿಸುವ ೧೮ ಕಂಪನಿಗಳ ಲೈಸೆನ್ಸ್ ರದ್ದುಪಡಿಸಿದ್ದಾರೆ. ಹಾಗೂ ಅವರಿಗೆ ಉತ್ಪಾದನೆಯನ್ನು ನಿಲ್ಲಿಸಲು ಹೇಳಿದ್ದಾರೆ. ‘ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ’ ದ ತಂಡದಿಂದ ೨೦ ರಾಜ್ಯಗಳಲ್ಲಿ ಅನಿರೀಕ್ಷಿತ ಪರಿಶೀಲನೆ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ೧೫ ದಿನಗಳಿಂದ ಈ ಪರಿಶೀಲನೆ ನಡೆಯುತ್ತಿದೆ. ಈ ಸಮಯದಲ್ಲಿ ಹಿಮಾಚಲ ಪ್ರದೇಶದಲ್ಲಿನ ೭೦, ಉತ್ತರಾಖಂಡದಲ್ಲಿನ ೪೫ ಮತ್ತು ಮಧ್ಯಪ್ರದೇಶದಲ್ಲಿನ ೨೩ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅನೇಕ ದೇಶಗಳಲ್ಲಿ ಭಾರತದ ಔಷಧಿಗಳಿಂದಾಗುವ ಸಾವು ಮತ್ತು ಅನಾರೋಗ್ಯದ ವಾರ್ತೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.