ಪರಮಾಣು ಅಸ್ತ್ರ ಹೊಂದ್ದಿದ್ದರೂ ‘ಜಿ-20’ ಸಭೆಗೆ ಆಹ್ವಾನ ಸಿಗದೇ ಇದ್ದರಿಂದ ನಾಚಿಕೆ ಅನಿಸುತ್ತದೆ ! – ಪಾಕಿಸ್ತಾನಿ ನಾಗರಿಕರು

ಭಾರತದಲ್ಲಿ ನಡೆಯುತ್ತಿರುವ ೨ ದಿನದ ‘ಜಿ-20’ ಸಭೆಗೆ ಜಗತ್ತಿನಾದ್ಯಂತ ೨೮ ದೇಶದ ಮುಖ್ಯಸ್ಥರು ಉಪಸ್ಥಿತರಿದ್ದಾರೆ. ಭಾರತದಿಂದ ಸುಯೋಹಿತವಾಗಿ ಈ ಸಭೆಯ ಆಯೋಜನೆ ಮಾಡಿರುವುದರಿಂದ ಅನೇಕ ದೇಶಗಳು ಶ್ಲಾಘಿಸುತ್ತಿದ್ದೂ ಭಾರತದ ನೆರೆಯ ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನದ ನಾಗರೀಕರು ಮಾತ್ರ ತಮ್ಮ ದೇಶವನ್ನೆ ಟೀಕಿಸುತ್ತಿದೆ.

ಗಿಲಗಿಟ-ಬಾಲ್ಟಿಸ್ತಾನದಲ್ಲಿ ಭಾರತದ ರಾಷ್ಟ್ರ ಧ್ವಜ ಹಾರಾಟ : ಜನರಿಂದ ಪಾಕಿಸ್ತಾನ ಮುರ್ದಾಬಾದ್ ಘೋಷಣೆ

ಗಿಲಗಿಟ-ಬಾಲ್ಟಿಸ್ತಾನದ ಜನರು ಈಗ ಪಾಕಿಸ್ತಾನದ ಜೊತೆಗೆ ಇರಲು ಸಾಧ್ಯವಿಲ್ಲ. ಕಳೆದ ಅನೇಕ ದಿನಗಳಿಂದ ಅವರು ಬೀದಿಗೆ ಇಳಿದು ಪಾಕಿಸ್ತಾನದ ಸರಕಾರವನ್ನು ನಿಷೇಧಿಸುತ್ತಿದ್ದಾರೆ. ಪ್ರತಿಭಟನಾಕಾರರು ‘ಪಾಕಿಸ್ತಾನ ಮುರ್ದಾಬಾದ’ ಎಂದು ಘೋಷಣೆ ನೀಡುತ್ತಿದ್ದು ಅನೇಕ ನಾಗರೀಕರು ತಮ್ಮ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ದೆಹಲಿಯಲ್ಲಿ ಇಂದಿನಿಂದ ‘ಜಿ-20’ ಸಭೆ !

ಸಪ್ಟೆಂಬರ್ ೯ ರಿಂದ ರಾಜಧಾನಿ ದೆಹಲಿಯಲ್ಲಿನ ‘ಭಾರತ ಮಂಡಪಂ’ ಈ ಭವ್ಯ ಸಭಾಂಗಣದಲ್ಲಿ ‘ಜಿ-20’ ಶೃಂಗಸಭೆ ಆರಂಭವಾಗುವುದು. ಎರಡು ದಿನದ ಈ ಸಭೆಗೆ 28 ದೇಶಗಳ ಪ್ರಮುಖರು ಮತ್ತು ಯುರೋಪಿಯನ್ ಯೂನಿಯನಿನ ಮುಖ್ಯಸ್ಥರು ಉಪಸ್ಥಿತರಿರುವರು. ಈ ವರ್ಷ ‘ಜಿ-20’ ಸಭೆಯ ಅಧ್ಯಕ್ಷ ಸ್ಥಾನ ಭಾರತ ಅಲಂಕರಿಸಿದೆ. ಈ ಸಭೆಗೆ ಬರುವ ಅತಿಥಿಗಳಿಗಾಗಿ ನಿಖರ ವ್ಯವಸ್ಥೆ ಮಾಡಲಾಗಿದೆ.

‘ನಾಸಾ’ದಿಂದ ಮುಂದಿನ ವರ್ಷ ಚಂದ್ರನ ದಕ್ಷಿಣ ಧ್ರುವದಲ್ಲಿ ಯಾನ ಇಳಿಸುವರು !

ಭಾರತದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ‘ಚಂದ್ರಯಾನ-3’ ಉಳಿಸಿದ ನಂತರ ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದಿಂದ ದಕ್ಷಿಣ ಧ್ರುವದ ಮೇಲೆ ಯಾನ ಇಳಿಸಲಿದೆ. 2024 ರ ಕೊನೆಯಲ್ಲಿ ಈ ಯಾನ ಕಳಿಸಲಿದೆ. ಈ ಯಾನದಿಂದ ಒಂದು ರೋವ್ಹರ್ ಹೊರಬಂದು ಚಂದ್ರನ ಅಧ್ಯಯನ ನಡೆಸಲಿದೆ.

ಭಾರತ ಬಾಹ್ಯಾಕಾಶದಲ್ಲಿ ವಿಶ್ವದ ಮೂರನೇ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ !

ಭಾರತ ಈಗ ಬಾಹ್ಯಾಕಾಶದಲ್ಲಿ ತನ್ನದೇ ಆದ `ಸ್ಪೇಸ್ ಸ್ಟೇಶನ’ ಅಂದರೆ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಿದೆ. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಮತ್ತು ಚೀನಾದ ‘ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ’ದ ನಂತರ ಭಾರತವು ವಿಶ್ವದ ಮೂರನೇ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ.

ಅಮೆರಿಕಾ, ಭಾರತ, ಸೌದಿ ಅರೇಬಿಯಾ ಮುಂತಾದ ದೇಶಗಳು ರೈಲಿನ ಮೂಲಕ ಪರಸ್ಪರ ಸಂಪರ್ಕಿಸುವ ಕುರಿತು ಚರ್ಚೆ !

ಅಮೇರಿಕಾ, ಭಾರತ, ಸೌದಿ ಅರೇಬಿಯಾ ಮತ್ತು ಇತರ ಕೆಲವು ದೇಶಗಳ ನಾಯಕರು ರೈಲ್ವೆ ಮಾರ್ಗ ಮತ್ತು ಬಂದರುಗಳ ಮೂಲಕ ಪರಸ್ಪರ ಸಂಪರ್ಕಿಸುವ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳ ಮೇಲೆ ಚರ್ಚಿಸಲಿದ್ದಾರೆ.

ಖಲಿಸ್ತಾನಿ ಭಯೋತ್ಪಾದನೆ ಮುಗಿಸುವುದಕ್ಕೆ ಬ್ರಿಟನ್ ಭಾರತದ ಜೊತೆಗೆ ! – ಋಷಿ ಸುನಕ್

ಹಿಂಸಾಚಾರ ಎದುರಿಸುವುದಕ್ಕೆ ಬ್ರಿಟಿಷ್ ಪೊಲೀಸರು ಸಂಪೂರ್ಣವಾಗಿ ಸಕ್ಷಮರಾಗಿದ್ದಾರೆ. ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಎದುರಿಸುವುದು, ಇದು ಸರಕಾರದ ಕರ್ತವ್ಯವಾಗಿತ್ತು ನಾನು ಇದನ್ನು ಗಂಭಿರವಾಗಿಯೇ ಪರಿಗಣಿಸಿದ್ದೇನೆ.

ಉದಯ ನಿಧಿ ಇವರ ಹೇಳಿಕೆಗೆ ಉತ್ತರ ನೀಡಿ ! – ಪ್ರಧಾನಮಂತ್ರಿ ಮೋದಿ

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ಪುತ್ರ ಮತ್ತು ಸಚಿವ ಉದಯನಿಧಿ ಇವರು ಸನಾತನ ಧರ್ಮ ಮುಗಿಸುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮೊಟ್ಟಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.

‘ದುರದೃಷ್ಟವಶಾತ್, ನಿಮ್ಮ ನೆರೆಯ ದೇಶ ಭಾರತ !'(ಅಂತೆ) – ನೇಪಾಳದ ಚೀನಿ ರಾಯಭಾರಿ

ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರದಲ್ಲಿದ್ದ ಕಾರಣ ನೇಪಾಳದಲ್ಲಿನ ಚೀನಾದ ಒಡನಾಟ ಬೆಳೆದಿದೆ. ನೇಪಾಳ ಮತ್ತು ಭಾರತದ ನಡುವಿನ ಅಂತರವನ್ನು ಹೆಚ್ಚಿಸುವ ಮೂಲಕ ನೇಪಾಳವನ್ನು ಚೀನಾ ತನ್ನ ಕಡೆ ವಾಲಿಸಲು ಸಂಚು ನಡೆಸಲಾಗುತ್ತಿದೆ. ಭಾರತವು ಸಮಯಕ್ಕೆ ಎಚ್ಚೆತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು !

ನಮಗೆ ಯುದ್ಧ ಬೇಡವಾಗಿದೆ ! – ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್

ನಮಗೆ ಯುದ್ಧ ಬೇಡವಾಗಿದೆ, ನಾವು ಕಾಶ್ಮೀರದ ಪ್ರಶ್ನೆ ಶಾಂತಿಯುತವಾಗಿ ಪರಿಹರಿಸಬೇಕಿದೆ; ಆದರೆ ಶಾಂತಿ ಪ್ರಸ್ತಾಪಿತವಾಗದಿದ್ದರೆ, ಆಗ ಅದು ಭಾರತ, ಪಾಕಿಸ್ತಾನ ಮತ್ತು ಜಗತ್ತಿಗೆ ಚಿಂತೆಯ ವಿಷಯವಾಗಿರುವುದು, ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದರು.