‘ನಾಸಾ’ದಿಂದ ಮುಂದಿನ ವರ್ಷ ಚಂದ್ರನ ದಕ್ಷಿಣ ಧ್ರುವದಲ್ಲಿ ಯಾನ ಇಳಿಸುವರು !

ವಾಷಿಂಗ್ಟನ್ (ಅಮೇರಿಕಾ) – ಭಾರತದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ‘ಚಂದ್ರಯಾನ-3’ ಉಳಿಸಿದ ನಂತರ ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದಿಂದ ದಕ್ಷಿಣ ಧ್ರುವದ ಮೇಲೆ ಯಾನ ಇಳಿಸಲಿದೆ. 2024 ರ ಕೊನೆಯಲ್ಲಿ ಈ ಯಾನ ಕಳಿಸಲಿದೆ. ಈ ಯಾನದಿಂದ ಒಂದು ರೋವ್ಹರ್ ಹೊರಬಂದು ಚಂದ್ರನ ಅಧ್ಯಯನ ನಡೆಸಲಿದೆ. ನಾಸಾ ಇದರ ಮೂಲಕ ಚಂದ್ರನ ಮೇಲೆ ಮಂಜುಗಡ್ಡೆ ಪತ್ತೆ ಹಚ್ಚಲಿದೆ.

ಭಾರತದ ‘ಚಂದ್ರಯಾನ-1’ ಚಂದ್ರನ ಮೇಲೆ ನೀರು ಇರುವುದನ್ನು ಪತ್ತೆ ಹಚ್ಚಿತ್ತು. ಈ ನೀರು ಮಂಜುಗಡ್ಡೆಯ ಸ್ವರೂಪದಲ್ಲಿ ಇರುವುದು ಕಂಡುಬಂದಿತ್ತು. ಈ ಮಂಜುಗಡ್ಡೆ ಎಷ್ಟು ಪ್ರಮಾಣದಲ್ಲಿದೆ ಇದು ಸ್ಪಷ್ಟವಾಗಿಲ್ಲ. ಅದಕ್ಕಾಗಿ ಚಂದ್ರನ ಮೇಲೆ ಪ್ರತ್ಯಕ್ಷ ಇಳಿದು ಮಾಹಿತಿ ಪಡೆಯುವುದು ಅವಶ್ಯಕವಾಗಿದೆ.