ಖಲಿಸ್ತಾನಿ ಭಯೋತ್ಪಾದನೆ ಮುಗಿಸುವುದಕ್ಕೆ ಬ್ರಿಟನ್ ಭಾರತದ ಜೊತೆಗೆ ! – ಋಷಿ ಸುನಕ್

ಲಂಡನ್ – ಖಲಿಸ್ತಾನಿ ಭಯೋತ್ಪಾದನೆ ಮುಗಿಸುವುದಕ್ಕೆ ಬ್ರಿಟನ್ ಭಾರತ ಸರಕಾರದ ಜೊತೆಗೆ ಇದೆ, ಎಂದು ಬ್ರಿಟನ್ ನ ಪ್ರಧಾನಿ ಋಷಿ ಸುನಕ್ ಇವರು ಹೇಳಿದರು. ಖಲಿಸ್ತಾನಿಗಳು ಭಾರತದ ಲಂಡನನಲ್ಲಿನ ಉನ್ನತ ಆಯೋಗವನ್ನು ಗುರಿ ಮಾಡಿತ್ತು. ಇದರ ಬಗ್ಗೆ ಪ್ರಧಾನಿ ಋಷಿ ಸುನಕ್ ಇವರಿಗೆ ಕೇಳಿದಾಗ ಅವರು, ಹಿಂಸಾಚಾರ ಎದುರಿಸುವುದಕ್ಕೆ ಬ್ರಿಟಿಷ್ ಪೊಲೀಸರು ಸಂಪೂರ್ಣವಾಗಿ ಸಕ್ಷಮರಾಗಿದ್ದಾರೆ. ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಎದುರಿಸುವುದು, ಇದು ಸರಕಾರದ ಕರ್ತವ್ಯವಾಗಿತ್ತು ನಾನು ಇದನ್ನು ಗಂಭಿರವಾಗಿಯೇ ಪರಿಗಣಿಸಿದ್ದೇನೆ.

‘ಜಗತ್ತಿನೆದುರು ಎಲ್ಲಕ್ಕಿಂತ ದೊಡ್ಡ ಸವಾಲುಗಳನ್ನು ಎದುರಿಸಲು ನಾವು ಜಿ-20 ಯ ಅಧ್ಯಕ್ಷಸ್ಥಾನದ ಮಾಧ್ಯಮದಿಂದ ಭಾರತದ ಜೊತೆಗೆ ಒಟ್ಟಾಗಿ ಕಾರ್ಯ ಮಾಡುವೆವು. ೨೦೨೩ ಇದು ಭಾರತಕ್ಕಾಗಿ ಮಹತ್ವದ ವರ್ಷವಾಗಿದೆ, ಎಂದು ಕೂಡ ಅವರು ಹೇಳಿದರು.

ನಾನು ಹಿಂದೂ ಆಗಿರುವುದರ ಬಗ್ಗೆ ನನಗೆ ಅಭಿಮಾನ ! – ಋಷಿ ಸುನಕ್

ಋಷಿ ಸುನಕ ಇವರು ಒಂದು ವಿಶೇಷ ಸಂದರ್ಶನದಲ್ಲಿ, ‘ನನ್ನ ಪತ್ನಿ ಭಾರತಿಯಳಾಗಿದ್ದಾಳೆ ಮತ್ತು ಒಬ್ಬ ಅಭಿಮಾನಿ ಹಿಂದೂ ಎಂದು ಭಾರತದ ಜೊತೆಗೆ ಮತ್ತು ಭಾರತದಲ್ಲಿನ ಜನರ ಜೊತೆಗೆ ನನ್ನ ಒಳ್ಳೆಯ ಸಂಬಂಧ ಇದೆ. ನನ್ನ ಮೂಲ ಭಾರತೀಯತ್ವದ ಮತ್ತು ಭಾರತದ ಜೊತೆಗೆ ಇರುವ ನನ್ನ ಸಂಬಂಧದ ಬಗ್ಗೆ ನನಗೆ ಬಹಳ ಅಭಿಮಾನ ಇದೆ ಎಂದು ಹೇಳಿದರು.