ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ, ಭಾರತ, ಸೌದಿ ಅರೇಬಿಯಾ ಮತ್ತು ಇತರ ಕೆಲವು ದೇಶಗಳ ನಾಯಕರು ರೈಲ್ವೆ ಮಾರ್ಗ ಮತ್ತು ಬಂದರುಗಳ ಮೂಲಕ ಪರಸ್ಪರ ಸಂಪರ್ಕಿಸುವ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳ ಮೇಲೆ ಚರ್ಚಿಸಲಿದ್ದಾರೆ. ಚೀನಾ `ಬೆಲ್ಟ ಅಂಡ್ ರೋಡ ವ್ಹಿಜನ್’ ಯೋಜನೆಯ ಮೂಲಕ ಇತರ ದೇಶಗಳು ಚೀನಾ ರಸ್ತೆ, ರೇಲ್ವೆ ಮುಂತಾದವುಗಳ ಮಾಧ್ಯಮದಿಂದ ಜೋಡಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆಗೆ ಸಮಾಂತರ ಯೋಜನೆಯನ್ನು ಜಾರಿಗೊಳಿಸಿ ವಿರೋಧಿಸಲು ಅಮೆರಿಕಾ ಮತ್ತು ಇತರ ದೇಶಗಳು ಪ್ರಯತ್ನಿಸುತ್ತವೆ. ಈ ಯೋಜನೆಯಡಿಯಲ್ಲಿ, ಅಮೇರಿಕಾ ಕೊಲ್ಲಿ ರಾಷ್ಟ್ರಗಳನ್ನು ರೈಲು ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದೆ.