‘ದುರದೃಷ್ಟವಶಾತ್, ನಿಮ್ಮ ನೆರೆಯ ದೇಶ ಭಾರತ !'(ಅಂತೆ) – ನೇಪಾಳದ ಚೀನಿ ರಾಯಭಾರಿ

ನೇಪಾಳದ ಚೀನಿ ರಾಯಭಾರಿಗಳಿಂದ ಭಾರತಕ್ಕೆ ಟೀಕೆ

ಕಾಠ್ಮಂಡು (ನೇಪಾಳ) – ದುರದೃಷ್ಟವಶಾತ್ ನಿಮ್ಮ ನೆರೆಯಲ್ಲಿ ಭಾರತದಂತಹ ದೇಶ ಇದೆ; ಏಕೆಂದರೆ ಭಾರತ ಒಂದು ದೊಡ್ಡ ಮಾರುಕಟ್ಟೆಯಾಗಿದೆ. ಇದರ ಸಂಪೂರ್ಣ ಲಾಭ ಪಡೆಯಲು ನಿಮಗೆ ಅವಕಾಶವಿದೆ; ಆದರೆ ಅದೇ ಸಮಯದಲ್ಲಿ, ನೇಪಾಳ ಮತ್ತು ನೆರೆಯ ರಾಷ್ಟ್ರಗಳ ಬಗ್ಗೆ ಭಾರತದ ನೀತಿಯು ಹೆಚ್ಚು ಸ್ನೇಹಪರವಾಗಿಲ್ಲ ಮತ್ತು ಇದು ನೇಪಾಳಕ್ಕೆ ಪ್ರಯೋಜನಕಾರಿಯಲ್ಲ ಎಂದು ನೇಪಾಳದಲ್ಲಿನ ಚೀನಿ ರಾಯಭಾರಿ ಚೆನ್ ಸೋಗ್ ಅವರು ಖೇದಕರ ಹೇಳಿಕೆಯನ್ನು ನೀಡಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ನೇಪಾಳದ ಸಂಸತ್ತಿನ ಪ್ರತಿನಿಧಿ ಸಭೆಯ ಅಧ್ಯಕ್ಷ ದೇವರಾಜ್ ಘಿಮಿರೆ ಉಪಸ್ಥಿತರಿದ್ದರು.

1. ಸೊಂಗ್ ಇವರು, ಭಾರತ ಮತ್ತು ನೇಪಾಳದ ನಡುವಿನ ವಿದ್ಯುತ್ ವ್ಯಾಪಾರವೂ ಕಡಿಮೆಯಾಗಿದೆ, ಹಾಗೆಯೇ ನೇಪಾಳ ಕೃಷಿ ಆಮದುಗಾಗಿ ಭಾರತದ ಮೇಲೆ ಅವಲಂಬಿಸಿದೆ. ಅಂತಹ ಪರಿಸ್ಥಿತಿಯಲ್ಲಿ ನೇಪಾಳಕ್ಕೆ ಚೀನಾ ಹೆಚ್ಚು ಪಾಲುದಾರ ಎಂದು ಹೇಳಲು ಪ್ರಯತ್ನಿಸಿದರು.

2. ಚೀನಾದ ರಾಯಭಾರಿಗಳ ಈ ಹೇಳಿಕೆಗಳನ್ನು ನೇಪಾಳದ ಕೆಲವು ತಜ್ಞರು ಟೀಕಿಸಿದ್ದಾರೆ. ಅವರು ಪ್ರಧಾನ ಮಂತ್ರಿ ಪುಶ್ಪ ಕಮಲ ದಹಲ ಪ್ರಚಂಡ ಅವರಿಗೆ ರಾಯಭಾರಿಗಳನ್ನು ತಿಳಿಸಿ ಹೇಳುವಂತೆ ಕೋರಿದ್ದಾರೆ. “ಯಾವುದೇ ರಾಯಭಾರಿಗಳು ಅಂತಹ ಹೇಳಿಕೆಗಳನ್ನು ನೀಡುವುದು ಉಚಿತವಲ್ಲ” ಎಂದು ಅವರು ಹೇಳಿದರು.

ಸಂಪಾದಕೀಯ ನಿಲಿವು

ಭಾರತದ ಬಗ್ಗೆ ಅಂತಹ ಹೇಳಿಕೆ ನೀಡಿದ ನೇಪಾಳದ ಚೀನಿ ರಾಯಭಾರಿಗಳನ್ನು ತೀಕ್ಷ್ಣ ಭಾಷೆಯಲ್ಲಿ ಹೇಳುವುದು ಆವಶ್ಯಕವಾಗಿದೆ !

ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರದಲ್ಲಿದ್ದ ಕಾರಣ ನೇಪಾಳದಲ್ಲಿನ ಚೀನಾದ ಒಡನಾಟ ಬೆಳೆದಿದೆ. ನೇಪಾಳ ಮತ್ತು ಭಾರತದ ನಡುವಿನ ಅಂತರವನ್ನು ಹೆಚ್ಚಿಸುವ ಮೂಲಕ ನೇಪಾಳವನ್ನು ಚೀನಾ ತನ್ನ ಕಡೆ ವಾಲಿಸಲು ಸಂಚು ನಡೆಸಲಾಗುತ್ತಿದೆ. ಭಾರತವು ಸಮಯಕ್ಕೆ ಎಚ್ಚೆತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು !