ನವ ದೆಹಲಿ – ಭಾರತ ಈಗ ಬಾಹ್ಯಾಕಾಶದಲ್ಲಿ ತನ್ನದೇ ಆದ `ಸ್ಪೇಸ್ ಸ್ಟೇಶನ’ ಅಂದರೆ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಿದೆ. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಮತ್ತು ಚೀನಾದ ‘ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ’ದ ನಂತರ ಭಾರತವು ವಿಶ್ವದ ಮೂರನೇ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ. ‘ಗಗನಯಾನ’ ಯೋಜನೆ ಬಳಿಕ ಭಾರತ ಈ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಿದೆ. ಭಾರತವು ಗಗನಯಾನ ಯೋಜನೆಯಡಿಯಲ್ಲಿ ಚಂದ್ರನ ಮೇಲೆ ಮಾನವನನ್ನು ಕಳುಹಿಸಲಿದೆ.
अंतरिक्ष की महाशक्ति बनेगा भारत, ISRO बनाएगा आसमान में दुनिया का तीसरा स्पेस स्टेशन#ISRO | #SpaceStation | @ambarbajpai https://t.co/7KcVMKzcx9
— TV9 Bharatvarsh (@TV9Bharatvarsh) September 7, 2023
1. ಭಾರತ ನಿರ್ಮಿಸಲಿರುವ ಬಾಹ್ಯಾಕಾಶ ನಿಲ್ದಾಣ 20 ಟನ್ ತೂಕ ಇರಲಿದೆ, ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ದ ತೂಕ ಸುಮಾರು 450 ಟನ್ ಮತ್ತು ಚೀನಾದ ಬಾಹ್ಯಾಕಾಶ ನಿಲ್ದಾಣವು ಸುಮಾರು 80 ಟನ್ ತೂಕವಿದೆ. ಭಾರತದ ಬಾಹ್ಯಾಕಾಶ ನಿಲ್ದಾಣವು 4-5 ಗಗನಯಾತ್ರಿಗಳಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ನಿರ್ಮಿಸಲಾಗುವುದು. ಇದನ್ನು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಸ್ಥಾಪಿಸಲಾಗುವುದು. ಇದನ್ನು ‘ಲೋವರ್ ಅರ್ಥ್ ಆರ್ಬಿಟ್’ ಎಂದು ಕರೆಯುತ್ತಾರೆ. ಇದು ಸುಮಾರು 400 ಕಿ.ಮೀ ದೂರದಲ್ಲಿದೆ.
2. 2019 ರಲ್ಲಿ ಇಸ್ರೋ ಅಧ್ಯಕ್ಷ ಕೆ. ಸಿವನ್ ಇವರು ಭಾರತದ ಬಾಹ್ಯಾಕಾಶ ನಿಲ್ದಾಣದ ಘೋಷಣೆಯನ್ನು ಮಾಡಿದ್ದರು. ‘ಗಗನಯಾನ’ ಯೋಜನೆಯ ನಂತರ, ಭಾರತ 2030 ರ ವೇಳೆಗೆ ಈ ಕನಸನ್ನು ನನಸಾಗಿಸುತ್ತದೆ’ ಎಂದು ಹೇಳಲಾಗಿದೆ.
3. ಭಾರತವು ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಮೊದಲು ಅಮೇರಿಕಾ ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡಲಿದೆ. ಇದಕ್ಕಾಗಿ ‘ನಾಸಾ’ ಮತ್ತು ‘ಇಸ್ರೋ’ ನಡುವೆ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. 2024 ರಲ್ಲಿ, ಭಾರತದಿಂದ 2 ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲು ಸಾಧ್ಯವಾಗಲಿದೆ. ಇದಕ್ಕೂ ಮುನ್ನ ಅವರಿಗೆ ಅಮೇರಿಕೆಯ ಹೂಸ್ಟನ್ನಲ್ಲಿರುವ ‘ಜಾನ್ಸನ್ ಬಾಹ್ಯಾಕಾಶ ಕೇಂದ್ರ’ದಲ್ಲಿ ತರಬೇತಿ ನೀಡಲಾಗುವುದು.
ಬಾಹ್ಯಾಕಾಶ ನಿಲ್ದಾಣ ಎಂದರೇನು ?
ಬಾಹ್ಯಾಕಾಶ ನಿಲ್ದಾಣವು ಬಾಹ್ಯಾಕಾಶದ ಒಂದು ಸ್ಥಳವಾಗಿದ್ದು, ಇಲ್ಲಿ ವಿಜ್ಞಾನಿಗಳು ವಾಸಿಸುವ ಮತ್ತು ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸುವ ಸ್ಥಳವಾಗಿದೆ. ಈ ನಿಲ್ದಾಣವು ಭೂಮಿಯ ಕಕ್ಷೆಯಲ್ಲಿ ನಿರಂತರವಾಗಿ ಚಲಿಸುತ್ತಿರುತ್ತದೆ. ಸಾಮಾನ್ಯವಾಗಿ ಒಬ್ಬ ಗಗನಯಾತ್ರಿ ಇಲ್ಲಿ 6 ತಿಂಗಳು ವಾಸಿಸಬೇಕಾಗುತ್ತದೆ. ತದ ನಂತರ ಇನ್ನೊಂದು ತಂಡವನ್ನು ಕಳುಹಿಸಲಾಗುತ್ತದೆ ಮತ್ತು ಮೊದಲ ತಂಡವು ಹಿಂತಿರುಗುತ್ತದೆ. ಎಲ್ಲಾ ಸಮಯದಲ್ಲೂ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕನಿಷ್ಠ 7 ಗಗನಯಾತ್ರಿಗಳಿರುತ್ತಾರೆ, ಕೆಲವೊಮ್ಮೆ ಹೆಚ್ಚಾಗುತ್ತದೆ. ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 15 ದೇಶಗಳು ಜಂಟಿಯಾಗಿ ನಿರ್ಮಿಸಿವೆ. ಇದರಲ್ಲಿ ಅಮೇರಿಕೆಯ `ನಾಸಾ’, `ಯುರೋಪಿಯನ್ ಸ್ಪೇಸ ಏಜನ್ಸಿ’ ಕೆನಡಾದ `ಸ್ಪೇಸ ಏಜನ್ಸಿ’ ಜಪಾನಿನ `ಏರೋಸ್ಪೇಸ ಎಕ್ಸಪ್ಲೊರೇಶನ ಏಜನ್ಸಿ’ ಮತ್ತು ರಶಿಯಾದ ‘ರೋಸಕಾಸ್ಮೋಸ’ ಇವು ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಾಗಿವೆ.