ದೆಹಲಿಯಲ್ಲಿ ಇಂದಿನಿಂದ ‘ಜಿ-20’ ಸಭೆ !

ನವದೆಹಲಿ – ಇಲ್ಲಿ ಸಪ್ಟೆಂಬರ್ ೯ ರಿಂದ ರಾಜಧಾನಿ ದೆಹಲಿಯಲ್ಲಿನ ‘ಭಾರತ ಮಂಡಪಂ’ ಈ ಭವ್ಯ ಸಭಾಂಗಣದಲ್ಲಿ ‘ಜಿ-20’ ಶೃಂಗಸಭೆ ಆರಂಭವಾಗುವುದು. ಎರಡು ದಿನದ ಈ ಸಭೆಗೆ 28 ದೇಶಗಳ ಪ್ರಮುಖರು ಮತ್ತು ಯುರೋಪಿಯನ್ ಯೂನಿಯನಿನ ಮುಖ್ಯಸ್ಥರು ಉಪಸ್ಥಿತರಿರುವರು. ಈ ವರ್ಷ ‘ಜಿ-20’ ಸಭೆಯ ಅಧ್ಯಕ್ಷ ಸ್ಥಾನ ಭಾರತ ಅಲಂಕರಿಸಿದೆ. ಈ ಸಭೆಗೆ ಬರುವ ಅತಿಥಿಗಳಿಗಾಗಿ ನಿಖರ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಶಕ್ತಿಶಾಲಿ ದೇಶದ ಪ್ರಮುಖರು ಬರುವುದರಿಂದ ದೆಹಲಿಯಲ್ಲಿನ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ೫೦ ಸಾವಿರ ಸುರಕ್ಷಾ ಸಿಬ್ಬಂದಿಗಳ ನೇಮಕ ಮಾಡಲಾಗಿದೆ.

‘ಜಿ-20’ ಸಭೆ ಅಂದರೆ ಏನು ?

‘ಜಿ-20’ ಸದಸ್ಯ ದೇಶಗಳ ಸಮೂಹವಾಗಿದ್ದು ಅದು ಜಾಗತೀಕ ‘ಎಲ್ಲಾ ರಾಷ್ಟ್ರೀಯ ಉತ್ಪನ್ನ’ಗಳ ಅಂದರೆ ‘ಜಿಡಿಪಿ’ಯ ಅಂದಾಜು ಶೇಕಡಾ ೮೫ ರಷ್ಟು, ಜಾಗತೀಕ ವ್ಯಾಪಾರದ ಸಂದರ್ಭದಲ್ಲಿ ಶೇಕಡಾ ೭೫ ಕ್ಕಿಂತಲೂ ಹೆಚ್ಚಿನ ಮತ್ತು ಜಗತ್ತಿನ ಜನಸಂಖ್ಯೆಯ ಹೆಚ್ಚುಕಡಿಮೆ ಮೂರನೇ ಎರಡು ಭಾಗದಷ್ಟು ಪ್ರತಿನಿಧಿತ್ವ ಮಾಡುತ್ತದೆ. ‘ಜಿ-20’ ಸಭೆಯಲ್ಲಿ ಮುಖ್ಯವಾಗಿ ಭಯೋತ್ಪಾದನೆ, ಆರ್ಥಿಕ ಸಮಸ್ಯೆ ಜಾಗತಿಕ ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಇತರ ಮಹತ್ವದ ವಿಷಯಗಳು ಮೇಲೆ ಒತ್ತು ನೀಡಲಾಗುತ್ತದೆ.

ಜಿ-20 ಸಭೆಯಲ್ಲಿನ ದೇಶಗಳು !

‘ಜಿ-20’ ದೇಶಗಳ ಸಭೆಯಲ್ಲಿ ಅಮೆರಿಕಾ, ಅರ್ಜೆಂಟಿನ, ಆಸ್ಟ್ರೇಲಿಯಾ, ಬ್ರಾಸಿಲ್, ಮೆಕ್ಸಿಕೋ, ಕೆನಡಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ, ಇಟಲಿ, ತುರ್ಕಿ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಭಾರತ, ಚೀನಾ, ಜಪಾನ್, ಇಂಡೋನೇಷಿಯಾ, ಕೊರಿಯಾ ಗಣತಂತ್ರ ಮತ್ತು ಯುರೋಪಿಯನ್ ಯೂನಿಯನ್ ಇವುಗಳ ಸಮಾವೇಶವಿದೆ. ಈ ಸಭೆಯ ಅಧ್ಯಕ್ಷ ಆಗಿರುವ ಭಾರತವು ಇತರ ೯ ದೇಶಗಳಿಗೆ ಆಮಂತ್ರಿಸಿದೆ. ಇದರಲ್ಲಿ ಬಾಂಗ್ಲಾದೇಶ, ಮಾರಿಷಸ್, ನೈಜೇರಿಯ, ಓಮನ್ ಮುಂತಾದವುಗಳ ಸಮಾವೇಶವಿದೆ.

ಭಾರತದಲ್ಲಿನ ಸಭೆಗೆ ಉಪಸ್ಥಿತ ಇರುವ ರಾಷ್ಟ್ರ ಪ್ರಮುಖರು !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ, ಬ್ರಿಟನಿನ ಪ್ರಧಾನಮಂತ್ರಿ ಋಷಿ ಸೂನಕ್, ಜಪಾನಿನ ಪ್ರಧಾನ ಮಂತ್ರಿ ಫಿಮಿಯೋ ಕಿಶಿದೋ, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಜ್, ಜರ್ಮನ್ ಚಾನ್ಸಲರ್, ಫ್ರಾನ್ಸಿನ ರಾಷ್ಟ್ರಪತಿ ಇಮ್ಯನ್ಯಿಯೆಲ್ ಮೆಕ್ರಾನ್, ದಕ್ಷಿಣ ಆಫ್ರಿಕಾ ತುರ್ಕಿ ಮತ್ತು ಅರ್ಜೆಂಟಿನಾದ ರಾಷ್ಟ್ರಪತಿಗಳು ಭಾರತಕ್ಕೆ ಬರುವರು. ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ ಮತ್ತು ಚೀನಾದ ರಾಷ್ಟ್ರಪತಿ ಶೀ ಜೀನಪಿಂಗ್ ಇವರು ಕೆಲವು ಕಾರಣಗಳಿಂದ ಉಪಸ್ಥಿತ ಇರಲು ನಿರಾಕರಿಸಿದ್ದಾರೆ. ರಷ್ಯಾದ ವಿದೇಶಾಂಗ ಸಚಿವರು ಮತ್ತು ಚೀನಾದ ಪ್ರಧಾನಮಂತ್ರಿ ಈ ಸಭೆಯಲ್ಲಿ ಉಪಸ್ಥಿತ ಇರುವವರು.