ಸಂವಿಧಾನದಲ್ಲಿ ಬದಲಾವಣೆ ಮಾಡಿ ದೇಶಕ್ಕೆ ‘ಭಾರತ’ ಎಂದು ನಾಮಕರಣ ಮಾಡಿ ! – ಭಾಜಪದ ಶಾಸಕ ಹರನಾಥ ಸಿಂಹ ಯಾದವ

‘ಸಂವಿಧಾನದಲ್ಲಿ ಬದಲಾವಣೆ ಮಾಡುವಾಗ ‘ಭಾರತ’ ಹೆಸರಿನ ಜೊತೆಗೆ ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ’ ಎಂದು ಹಿಂದೂ ಮತ್ತು ಅವರ ಸಂಘಟನೆಗಳಿಂದ ಸಂಘಟಿತವಾಗಿ ಬೇಡಿಕೆ ಸಲ್ಲಿಸಬೇಕು. ಇದರಿಂದ ಸನಾತನ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಆಗುವುದಿಲ್ಲ !

ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ’ ಬರಹ !

‘ಇಂಡಿಯಾ’ ಹೆಸರು ಬ್ರಿಟಿಷರು ನೀಡಿದ್ದರಿಂದ ಅದು ಗುಲಾಮದ ಪ್ರತೀಕವಾಗಿದೆ. ಸ್ವಾತಂತ್ರ್ಯದ ನಂತರ ಅದನ್ನು ಬದಲಾಯಿಸಿ ಭಾರತದ ಅಧಿಕೃತ ಏಕೈಕ ಎಂದರೆ ‘ಭಾರತ’ ಎಂದು ಘೋಷಿಸುವುದು ಅಪೇಕ್ಷಿತವಾಗಿತ್ತು. ಈಗ ಸರಕಾರ ಇದನ್ನು ಬದಲಾಯಿಸಿ ‘ಭಾರತ’ ಎಂದು ಹೆಸರು ಇಡುವುದಿದ್ದರೆ, ಬ್ರಿಟಿಷರ ಹಾಡಿಹೊಗಳುವ ಕಾಂಗ್ರೆಸ್ಸಿಗೆ ಹೊಟ್ಟೆ ಉರಿ ಬರುವುದು ಸಹಜ !

ಭಾರತೀಯ ಕ್ರಿಕೆಟ್‌ ಪಟುಗಳ ಸಮವಸ್ತ್ರದ ಮೇಲೆ ‘ಭಾರತ’ ಬರೆಯಬೇಕು ! – ಮಾಜಿ ಕ್ರಿಕೆಟ್‌ ಪಟು ವೀರೇಂದ್ರ ಸೆಹವಾಗ ಇವರ ಬೇಡಿಕೆ

ಮಾಜಿ ಕ್ರಿಕೆಟ್‌ ಪಟು ವೀರೇಂದ್ರ ಸೆಹವಾಗ ಇವರು, ಭಾರತೀಯ ಕ್ರಿಕೇಟ್ ಪಟುಗಳ ಸಮವಸ್ತ್ರದ ಮೇಲೆ ‘ಭಾರತ’ ಬರೆಯಬೇಕೆಂದು ಟ್ವೀಟ್‌ ಮಾಡಿದ್ದಾರೆ. ಸೆಹವಾಗ ಇವರು, ‘ಟೀಮ ಇಂಡಿಯಾ’ ಬೇಡ ‘ಟೀಮ ಭಾರತ’ ಬೇಕು, ಭಾರತದ ಆಟಗಾರರ ‘ಟಿ-ಶರ್ಟ’ ಮೇಲೆ ‘ಭಾರತ’ ಎಂದು ಬರೆದಿರಬೇಕು

ಭಾರತದಿಂದ ಕಳೆದ 6 ವರ್ಷಗಳಲ್ಲಿ 80 ದೇಶಗಳಿಗೆ 16 ಸಾವಿರ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳ ಮಾರಾಟ !

ಒಂದು ದಶಕದ ಹಿಂದೆ, ವಿಶ್ವದ ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಅಗ್ರ 3 ಆಮದು ದೇಶಗಳಲ್ಲಿ ಭಾರತವು ಒಂದಾಗಿತ್ತು. ಕಳೆದ 6 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆ ಕ್ಷೇತ್ರದಲ್ಲಿ ಭಾರತದ ಚಿತ್ರಣವೇ ಬದಲಾಗಿದೆ.

ಇಸ್ರೋದಿಂದ ಪ್ರಜ್ಞಾನ್ ರೋವರ್ ಕಾರ್ಯ ಸ್ಥಗಿತ !

‘ಚಂದ್ರಯಾನ-3’ ರ ಪ್ರಜ್ಞಾನ್ ರೋವರ್ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಅದನ್ನು ಈಗ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ `ಪಾರ್ಕ’(ನಿಲುಗಡೆ) ಮಾಡಲಾಗಿದೆ ಮತ್ತು ಅದರ ‘ಸ್ಲೀಪ್ ಮೋಡ್’ (ಸ್ಥಗಿತಗೊಳಿಸುವಿಕೆ) ಸಕ್ರಿಯಗೊಳಿಸಲಾಗಿದ್ದು, ಅದರ ಉಪಕರಣಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಸಿಂಗಾಪುರದ ೯ ನೇಯ ರಾಷ್ಟ್ರಾಧ್ಯಕ್ಷರಾಗಿ ಭಾರತೀಯ ಸಂಜಾತೆ ಥರ್ಮನ ಷಣ್ಮುಗರತ್ನಂ ಆಯ್ಕೆ !

ಭಾರತೀಯ ಸಂಜಾತೆ ಥರ್ಮನ ಷಣ್ಮುಗರತ್ನಂ ಇವರು ಸಿಂಗಾಪುರದ ರಾಷ್ಟ್ರಾಧ್ಯಕ್ಷರಾದರು ! ರಾಷ್ಟ್ರಾಧ್ಯಕ್ಷರ ಸ್ಥಾನಕ್ಕಾಗಿ ನಡೆದಿರುವ ಚುನಾವಣೆಯಲ್ಲಿ ಅವರು ಚೀನಾ ಮೂಲದ ೨ ಅಭ್ಯರ್ಥಿಗಳನ್ನು ಸೋಲಿಸಿದರು. ಥರ್ಮನ ಇವರಿಗೆ ಶೇಕಡ ೭೦.೪, ಎನ್‌ಜಿ ಕೋಕ ಸಂಗ ಇವರಿಗೆ ಶೇಕಡ ೧೫.೭೨ ಹಾಗೂ ಟ್ಯಾನ್ ಕಿನ್ ಲಿಯಾನ್ ಇವರಿಗೆ ಶೇಕಡ ೧೩.೮೮ ರಷ್ಟು ಮತಗಳು ದೊರೆತಿವೆ.

ಗಿಲಗಿಟ ಬಾಲ್ಟಿಸ್ತಾನದಲ್ಲಿ ಪ್ರತಿಭಟನೆ : ಭಾರತದಲ್ಲಿ ವಿಲೀನಗೊಳಿಸಲು ಒತ್ತಾಯ

ಪಾಕಿಸ್ತಾನ ಆಕ್ರಮಿತ ಗಿಲಗಿಟ್ ಬಾಲ್ಟಿಸ್ತಾನದಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆಗಳು ನಡೆಸಲಾಗುತ್ತಿವೆ. ಪ್ರತಿಭಟನೆಯಲ್ಲಿ ಸಹಭಾಗಿಯಾಗಿರುವ ಜನರು ಭಾರತದಲ್ಲಿ ವಿಲೀನಗೊಳಿಸಲು ಆಗ್ರಹಿಸುತ್ತಿದ್ದಾರೆ.

ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಸಿಗದಿದ್ದರೆ, ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಕೊನೆಗೊಳ್ಳುತ್ತದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಭಾರತ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಐದನೇ ಅತಿದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ದೇಶವಾಗಿದೆ. ಇಂತಹ ಸಮಯದಲ್ಲಿ ಒಂದು ವೇಳೆ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ನೀಡದಿದ್ದರೆ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಕೊನೆಗೊಳ್ಳುತ್ತದೆ.

ಭಾರತವು ಜಪಾನ್‌ನೊಂದಿಗೆ ‘ಚಂದ್ರಯಾನ-4’ ಅಭಿಯಾನವನ್ನು ಪ್ರಾರಂಭಿಸಲಿದೆ !

‘ಚಂದ್ರಯಾನ-3’ ಅಭಿಯಾನ ಯಶಸ್ಸಿನ ನಂತರ, ಈಗ ಭಾರತವು ‘ಚಂದ್ರಯಾನ-4’ ಅಭಿಯಾನದ ಸಿದ್ಧತೆ ನಡೆಸುತ್ತಿದೆ. ಈ ಅಭಿಯಾನದಲ್ಲಿ ಭಾರತಕ್ಕೆ ಜಪಾನ್‌ನಿಂದಲೂ ಸಹಾಯ ಸಿಗಲಿದೆ. ‘ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ’ (JAXA) ಜಪಾನಿನ ಈ ಬಾಹ್ಯಕಾಶ ಸಂಶೋಧನೆಯು ಇಸ್ರೋ ದೊಂದಿಗೆ ಕೆಲಸ ಮಾಡಲಿದೆ.