ನಮಗೆ ಯುದ್ಧ ಬೇಡವಾಗಿದೆ ! – ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್

ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್ ಇವರಿಂದ ಕಾಶ್ಮೀರದ ಕುರಿತು ಹೇಳಿಕೆ !

ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್

ಇಸ್ಲಾಮಾಬಾದ (ಪಾಕಿಸ್ತಾನ) – ನಮಗೆ ಯುದ್ಧ ಬೇಡವಾಗಿದೆ, ನಾವು ಕಾಶ್ಮೀರದ ಪ್ರಶ್ನೆ ಶಾಂತಿಯುತವಾಗಿ ಪರಿಹರಿಸಬೇಕಿದೆ; ಆದರೆ ಶಾಂತಿ ಪ್ರಸ್ತಾಪಿತವಾಗದಿದ್ದರೆ, ಆಗ ಅದು ಭಾರತ, ಪಾಕಿಸ್ತಾನ ಮತ್ತು ಜಗತ್ತಿಗೆ ಚಿಂತೆಯ ವಿಷಯವಾಗಿರುವುದು, ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದರು. ‘ಕಾಶ್ಮೀರ ಪ್ರಶ್ನೆಯ ಬಗ್ಗೆ ಪರಿಹಾರ ಆಗದ ಹೊರತು ಭಾರತದ ಜೊತೆಗೆ ವ್ಯಾಪಾರ ಸಾಧ್ಯವಿಲ್ಲ’, ಎಂದು ಈ ಸಮಯದಲ್ಲಿ ಅವರು ಸ್ಪಷ್ಟಪಡಿಸಿದರು. ಆಗಸ್ಟ್ ೫, ೨೦೧೯ ರಲ್ಲಿ ಜಮ್ಮು-ಕಾಶ್ಮೀರದಿಂದ ಕಲಂ ೩೭೦ ತೆರವುಗೊಳಿಸಿದ ನಂತರ ಪಾಕಿಸ್ತಾನವು ಭಾರತದ ಜೊತೆಗೆ ವ್ಯಾಪಾರ ವಹಿವಾಟ ನಿಲ್ಲಿಸಿದೆ.

ಸಂಪಾದಕೀಯ ನಿಲಿವು

ಹೀಗೆ ಹೇಳುವ ಪಾಕಿಸ್ತಾನವು ಕಾಶ್ಮೀರದ ಕುರಿತು ಭಾರತದ ಜೊತೆಗೆ ೪ ಯುದ್ಧ ಮಾಡಿತು. ಆದ್ದರಿಂದ ಪಾಕಿಸ್ತಾನದ ಮೇಲೆ ಯಾರು ವಿಶ್ವಾಸ ಇಡುವುದಿಲ್ಲ ? ಪಾಕಿಸ್ತಾನ ಏನಾದರೂ ಯುದ್ಧ ಮಾಡಿದರೆ ಅದರ ಸಂಪೂರ್ಣ ವಿನಾಶ ಖಚಿತ, ಇದು ಕೂಡ ಅದಕ್ಕೆ ತಿಳಿದಿದೆ !