೨೦೨೨ ರಲ್ಲಿ ಜ್ಞಾನವಾಪಿಯಲ್ಲಿನ ಶಿವಲಿಂಗದ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿದ ಪ್ರಕರಣ
ನವದೆಹಲಿ – ವಾರಾಣಸಿಯಲ್ಲಿನ ಜ್ಞಾನವಾಪಿಯಲ್ಲಿ ದೊರೆತಿರುವ ಶಿವಲಿಂಗದ ಕುರಿತು ಆಕ್ಷೇಪಾರ್ಯ ಪೋಸ್ಟ್ ಮಾಡಿದ್ದ ದೆಹಲಿ ವಿಶ್ವವಿದ್ಯಾಲಯದ ರತನ ಲಾಲ ಈ ಪ್ರಾಧ್ಯಾಪಕರಿಗೆ ಪೊಲೀಸರು ಬಂಧಿಸಿದ್ದರು. ಅದರ ನಂತರ ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿತ್ತು. ಅದನ್ನು ರದ್ದುಪಡಿಸುವ ಕುರಿತು ದೆಹಲಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ರತನ ಲಾಲ ಇವರ ಹೇಳಿಕೆಯಿಂದ ಸಾಮಾಜಿಕ ಸೌಹಾರ್ದತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಉಚ್ಚ ನ್ಯಾಯಾಲಯವು ಒಪ್ಪಿಕೊಂಡಿದೆ.
ನ್ಯಾಯಾಲಯವು, ರತನ ಲಾಲ ಇವರು ಮಂಡಿಸಿದ ಯುಕ್ತಿವಾದದಲ್ಲಿ ಸತ್ಯಾಂಶ ಇರಲಿಲ್ಲ ಅದರ ಆಧಾರದಲ್ಲಿ ಆರೋಪಿಯ ವಿರುದ್ಧದ ದೂರು ರದ್ದು ಪಡಿಸಲು ಸಾಧ್ಯವಿಲ್ಲ. ಪ್ರಾಥಮಿಕ ಹಂತದಲ್ಲಿ, ಪ್ರಾಧ್ಯಾಪಕ ರತನ ಲಾಲ ಇವರ ಉದ್ದೇಶ ಕೇವಲ ಒಂದು ಧರ್ಮದ ಭಾವನೆಗೆ ನೋವು ಉಂಟು ಮಾಡುವದಾಗಿತ್ತು ಎಂಬುದು ಕಂಡು ಬಂದಿತ್ತು. ಪ್ರಾಧ್ಯಾಪಕರ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಟಿಪ್ಪಣಿ ಮಾಡುವುದು ಶೋಭೆ ತರುವುದಿಲ್ಲ’, ಎಂದು ಹೇಳಿದೆ.
ಏನಿದು ಸಂಪೂರ್ಣ ಪ್ರಕರಣ ?
ರತನ ಲಾಲ ದೆಹಲಿ ವಿಶ್ವವಿದ್ಯಾಲಯದಲ್ಲಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಮೇ ೨೦೨೨ ರಲ್ಲಿ ಯಾವಾಗ ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳು ಶಿವಲಿಂಗ ಹುಡುಕುವುದರ ಕುರಿತು ಮಾತನಾಡುತ್ತಿದ್ದರು, ಆಗ ರತನ ಲಾಲ ಇವರು ಅವರ ಎಕ್ಸ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಒಂದು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಮೇ ೧೪, ೨೦೨೨ ರಂದು ಮಾಡಿರುವ ಈ ಪೋಸ್ಟ್ ನಲ್ಲಿ ಅವರು, ‘ಇದು ಏನಾದರೂ ಶಿವಲಿಂಗ ಇದ್ದರೆ, ಬಹುಶಃ ಭಗವಾನ್ ಶಿವನದು ಸುನ್ನತಿ ಆಗಿತ್ತು’, ಎಂದು ಬರೆದಿದ್ದರು. ರತನ ಲಾಲ ಇವರ ಪೋಸ್ಟ್ ಜೊತೆಗೆ ಒಂದು ಹಾಸ್ಯ ವ್ಯಂಗ್ಯ ಚಿತ್ರ ಕೂಡ ಜೋಡಿಸಿದ್ದರು. ಅದರ ನಂತರ ಅವರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಈಗ ಅವರು ದೂರು ರದ್ದತಿ ಕೋರಿ ಆಗ್ರಹಿಸಿದ್ದಾರೆ ಅದನ್ನು ತಿರಸ್ಕರಿಸಲಾಗಿದೆ.
ಸಂಪಾದಕೀಯ ನಿಲುವು೨ ವರ್ಷದಲ್ಲಿ ಈ ಪ್ರಾಧ್ಯಾಪಕರಿಗೆ ಶಿಕ್ಷೆ ಆಗುವುದು ಅಪೇಕ್ಷಿತ ಇರುವಾಗ ಇನ್ನೂ ಕೂಡ ಅವರು ಅಪರಾಧ ರದ್ದತಿ ಕೋರಿ ಆಗ್ರಹಿಸುತ್ತಾರೆ, ಇದು ನ್ಯಾಯ ವ್ಯವಸ್ಥೆಯ ಒಳ್ಳೆಯ ಲಕ್ಷಣವಲ್ಲ ! |