Pakistan Threaten Indus Water Treaty Cancelled: ‘ನೀರು ನಿಲ್ಲಿಸಿದರೆ ನದಿಯಲ್ಲಿ ರಕ್ತ ಹರಿಯುತ್ತದೆ’!

ಭಾರತವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನದಿಂದ ಬೇಕಂತಲೇ ಹಫೀಜ್ ಸಯೀದ್‌ನ ಹಳೆಯ ವೀಡಿಯೊ ಮರು ಪ್ರಸಾರ

ಇಸ್ಲಾಮಾಬಾದ್ (ಪಾಕಿಸ್ತಾನ) – ನೀವು ಪಾಕಿಸ್ತಾನದ ನೀರನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತೀರಿ. ಕಾಶ್ಮೀರದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ ನೀವು ನೀರನ್ನು ತಡೆಯುತ್ತೀರಿ. ನೀವು ಪಾಕಿಸ್ತಾನವನ್ನು ನಾಶಮಾಡಲು ಬಯಸುತ್ತೀರಿ. ನೀವು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಹಾಳುಮಾಡಲು ಬಯಸುತ್ತೀರಿ.

ನೀವು ನೀರನ್ನು ನಿಲ್ಲಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸುತ್ತೇವೆ. ಈ ನದಿಗಳಲ್ಲಿ ಮತ್ತೆ ರಕ್ತ ಹರಿಯುತ್ತದೆ ಎಂದು ಬೆದರಿಕೆ ಹಾಕುವ ಭಯೋತ್ಪಾದಕ ಹಫೀಜ್ ಸಯೀದ್‌ನ ಹಳೆಯ ವೀಡಿಯೊವನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯು ಈಗ ಮತ್ತೆ ಉದ್ದೇಶಪೂರ್ವಕವಾಗಿ ಪ್ರಸಾರ ಮಾಡುತ್ತಿದೆ.

ಈ ವೀಡಿಯೊ ಮೂಲಕ ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ. ಭಾರತವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ ಪಾಕಿಸ್ತಾನ ಹೆದರಿದೆ ಮತ್ತು ಅದಕ್ಕಾಗಿಯೇ ಈ ಬೆದರಿಕೆ ನೀಡುತ್ತಿದೆ.

ಸಂಪಾದಕೀಯ ನಿಲುವು

ಈ ರಕ್ತ ಭಾರತೀಯರದ್ದಲ್ಲ, ಪಾಕಿಸ್ತಾನೀಯರದ್ದಾಗಿರುತ್ತದೆ ಎಂಬುದನ್ನು ಪಾಕಿಸ್ತಾನ ಈಗ ನೆನಪಿನಲ್ಲಿಡಬೇಕು!