Gyanvapi Case : ಜ್ಞಾನವಾಪಿ ಸಮೀಕ್ಷೆಯ ನಿರ್ಣಯ ನೀಡಿದ ನ್ಯಾಯಾಧೀಶರಿಗೆ ಮತ್ತೆ ಬೆದರಿಕೆ !

  • ನ್ಯಾಯಾಧೀಶರ ಭದ್ರತೆ ಹೆಚ್ಚಳ !

ವಾರಣಾಸಿ – ಜ್ಞಾನವಾಪಿಯಲ್ಲಿ ಸಮೀಕ್ಷೆ ನಿರ್ಧಾರ ಪ್ರಕಟಿಸಿದ ನ್ಯಾಯಾಧೀಶ ರವಿ ಕುಮಾರ ದಿವಾಕರ ಅವರಿಗೆ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿವೆ. ಕಳೆದ 20 ರಿಂದ 24 ದಿನಗಳಲ್ಲಿ 140 ‘ಕೋಡ್ ಸಂಖ್ಯೆ’ಗಳಿಂದ ಹಲವು ಬಾರಿ ಬೆದರಿಕೆ ಕರೆಗಳು ಬಂದಿವೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಈ ಬಗ್ಗೆ ನ್ಯಾಯಾಧೀಶರು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಈ ಪ್ರಕರಣವನ್ನು ‘ಸೈಬರ್ ಸೆಲ್’ನಿಂದ ತನಿಖೆ ನಡೆಸುತ್ತಿದೆ. ‘ಈ ಮಧ್ಯೆ ಯಾವುದೇ ಸಂಗತಿಗಳು ಬೆಳಕಿಗೆ ಬಂದರೂ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’, ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಘುಲೆ ತಿಳಿಸಿದ್ದಾರೆ.

1. ಜ್ಞಾನವಾಪಿ ಪ್ರಕರಣದ ತೀರ್ಪು ನೀಡಿ ಗಮನ ಸೆಳೆದ ರವಿ ಕುಮಾರ ದಿವಾಕರ್ ಪ್ರಸ್ತುತ ಬರೇಲಿಯ ‘ಫಾಸ್ಟ್ ಟ್ರ್ಯಾಕ್ ಕೋರ್ಟ್ 2’ ನಲ್ಲಿ ನ್ಯಾಯಾಧೀಶರಾಗಿದ್ದಾರೆ.

2. ಕೆಲವು ಸಮಯದ ಹಿಂದೆ, ಅವರು 2010 ರ ಗಲಭೆ ಪ್ರಕರಣದಲ್ಲಿ ಮೌಲಾನಾ ತೌಕೀರ್ ರಝಾ ಅವರನ್ನು ಪ್ರಮುಖ ಆರೋಪಿ ಎಂದು ಘೋಷಿಸಿದ್ದರು. ಈ ಕಾಲಾವಧಿಯಲ್ಲಿ ನ್ಯಾಯಾಧೀಶ ರವಿ ಕುಮಾರ ದಿವಾಕರ್ ಅವರಿಗೆ ವಿದೇಶದಿಂದ ಬೆದರಿಕೆ ಕರೆಗಳು ಬರಲಾರಂಭಿಸಿದವು.

3. ಈ ಬೆದರಿಕೆಯ ನಂತರ, ಆಡಳಿತವು ನ್ಯಾಯಾಧೀಶರ ಭದ್ರತೆಯನ್ನು ಇನ್ನೂ ಬಿಗಿಗೊಳಿಸಿದೆ.

ಸಂಪಾದಕೀಯ ನಿಲುವು

ನ್ಯಾಯಾಧೀಶರಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬರುವುದು, ಇದು ಆಡಳಿತಕ್ಕೆ ಲಜ್ಜಾಸ್ಪದ !