Waiting for Shiva Book Launched : ಜ್ಞಾನವಾಪಿ ಶಿವಲಿಂಗ ಪಡೆಯುವದಕ್ಕಾಗಿ ನಾವು ೧ ಇಂಚು ಭೂಮಿಯನ್ನು ಕೂಡ ರಾಜಿ ಮಾಡಿಕೊಳ್ಳಲ್ಲ !

  • ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ ಅವರ ನೇರ ಹೇಳಿಕೆ !

  • ಸುಪ್ರಸಿದ್ಧ ಲೇಖಕ ವಿಕ್ರಮ ಸಂಪತ ಅವರ ‘ಪ್ರತೀಕ್ಷಾ ಶಿವಾಚಿ – ಕಾಶಿ ಜ್ಞಾನವಾಪಿಚ್ಯಾ ಸತ್ಯಾಚಾ ಶೋಧ’ ಮರಾಠಿ ಪುಸ್ತಕದ ಪ್ರಕಾಶನ !

ಎಡದಿಂದ ವೈದೇಹಿ ಜೋಶಿ, ಡಾ. ಪ್ರಾಚಿ ಜಾಂಬೆಕರ , ಸುಧೀರ ಜೋಗಳೇಕರ , ನ್ಯಾಯವಾದಿ ವಿಷ್ಣು ಶಂಕರ್ ಜೈನ, ವಿಕ್ರಂ ಸಂಪತ

ಮುಂಬಯಿ , ಮೇ ೧೯ (ವಾರ್ತೆ) – ಕಾಶಿಯಲ್ಲಿನ ಜ್ಞಾನವಾಪಿ ಶಿವಲಿಂಗವು ಹಿಂದುಗಳ ಆರಾಧ್ಯ ದೈವವಾಗಿದೆ. ಜ್ಞಾನವಾಪಿ ಶಿವಲಿಂಗವನ್ನು ನಾವು ಪುರುಷಾರ್ಥದಿಂದ ಪಡೆಯುವೆವು. ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಸಿಕ್ಕಿದೆ ಎಂದು ನಾವು ಜ್ಞಾನವಾಪಿ ಶಿವಲಿಂಗಕ್ಕಾಗಿ ರಾಜಿ ಮಾಡಿಕೊಳ್ಳಲಾರೆವು. ಕೇವಲ ಜ್ಞಾನವಾಪಿ ಶಿವಲಿಂಗ ಅಷ್ಟೇ ಅಲ್ಲ, ಎಲ್ಲೆಲ್ಲಿ ದೇವಸ್ಥಾನಗಳನ್ನು ನೆಲೆಸಮ ಮಾಡಿ ಮಸೀದಿಗಳನ್ನು ಕಟ್ಟಲಾಗಿದೆಯೋ ಆ ಎಲ್ಲಾ ದೇವಸ್ಥಾನಗಳು ನಾವು ಹಿಂಪಡೆಯುವೆವು. ತಲವಾರದ(ಕತ್ತಿಯ) ಗಿಂತಲೂ ಲೇಖನಿಯ ಬಲ ಹೆಚ್ಚಿರುತ್ತದೆ. ಜ್ಞಾನವಪಿ ಶಿವಲಿಂಗ ಪಡೆಯುವದಕ್ಕೆ ನಾವು ೧ ಇಂಚು ಭೂಮಿ ಕೂಡ ರಾಜಿ ಮಾಡಿಕೊಳ್ಳುವುದಿಲ್ಲ, ಎಂದು ಸಮಸ್ತ ಧರ್ಮಭಿಮಾನಿ ಹಿಂದುಗಳ ಮನಸ್ಸಿನ ಭಾವನೆಯಾಗಿದೆ ಎಂದು ಜ್ಞಾನವಾಪಿ ಶಿವಲಿಂಗಕ್ಕಾಗಿ ಹಿಂದುಗಳ ಪರವಾಗಿ ಹೋರಾಡುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ ಅವರು ಹೇಳಿದರು. ಪ್ರಸಿದ್ಧ ಹಿಂದುತ್ವನಿಷ್ಠ ಲೇಖಕ ವಿಕ್ರಂ ಸಂಪತ ಅವರ ‘ವೇಟಿಂಗ್ ಫಾರ್ ಶಿವ : ಅನ್ ಅರ್ಥಿಂಗ್ ದಿ ಟ್ರುಥ್ ಆಫ್ ಕಾಶಿಸ್ ಜ್ಞಾನವಾಪಿ’ ಈ ಇಂಗ್ಲೀಷ್ ಪುಸ್ತಕದ ಮರಾಠಿ ಅನುವಾದಿತ ಪುಸ್ತಕ ‘ಪ್ರತಿಕ್ಷಾ ಶಿವಾಚಿ: ಕಾಶಿ ಜ್ಞಾನವಾಪಿಚ್ಯಾ ಸತ್ಯಾಚಾ ಶೋಧ’ ಇದರ ಪ್ರಕಾಶನ ಕಾರ್ಯಕ್ರಮ ಮೇ ೧೮ ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಜೈನ ಅವರು ಮಾತನಾಡುತ್ತಿದ್ದರು. ದಾದರ (ಪೂರ್ವ) ದಲ್ಲಿನ ರಾಜ ಶಿವಾಜಿ ವಿದ್ಯಾ ಸಂಕುಲದಲ್ಲಿ ಈ ಕಾರ್ಯಕ್ರಮ ನೆರವೇರಿತು .

ಈ ಸಮಯದಲ್ಲಿ ವೇದಿಕೆಯಲ್ಲಿ ಪುಸ್ತಕದ ಲೇಖಕ ಶ್ರೀ. ವಿಕ್ರಮ ಸಂಪತ, ಪುಸ್ತಕದ ಮರಾಠಿ ಅನುವಾದ ಮಾಡಿದ ಡಾ. ಪ್ರಾಚೀ ಜಾಂಬೆಕರ್ ಮತ್ತು ಕು. ಮೈತ್ರೇಯಿ ಜೋಶಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತರು ಮತ್ತು ಲೇಖಕರಾದ ಶ್ರೀ. ಸುಧೀರ ಜೋಗುಳೇಕರ ಅವರು ಕಾರ್ಯಕ್ರಮದ ಅಧ್ಯಕ್ಷಸ್ಥಾನ ಅಲಂಕರಿಸಿದ್ದರು. ಡಾ. ಪ್ರಾಚೀ ಜಾಂಬೆಕರ ಅವರು ಶ್ರೀ. ವಿಕ್ರಮ ಸಂಪತ ಮತ್ತು ನ್ಯಾಯವಾದಿ ವಿಷ್ಣುಶಂಕರ್ ಜೈನ ಅವರ ಸಂದರ್ಶನ ನಡೆಸಿದರು. ನ್ಯಾಯವಾದಿ ಜೈನ ಅವರು ಮಾತನಾಡಿ, ಜ್ಞಾನವಾಪಿ ಶಿವಲಿಂಗವನ್ನು ನಾನು ಸ್ವತಃ ನೋಡಿದ್ದೇನೆ. ಆ ಶಿವಲಿಂಗವನ್ನು ಭಗ್ನಗೊಳಿಸಿ ಅದರ ಮೇಲೆ ಸಿಮೆಂಟಿನ ಅಡ್ಡ ಗೋಡೆ ಕಟ್ಟಿ ಅದಕ್ಕೆ ಕಾರಂಜಿಯ ರೂಪ ನೀಡಿದ್ದಾರೆ. ಆದರೆ ಶಿವಲಿಂಗ ಮತ್ತು ಅದರ ಮೇಲಿನ ಸಿಮೆಂಟಿನ ಕಟ್ಟಡ ಬೇರೆ-ಬೇರೆ ಕಾಣುತ್ತದೆ. ವೈಜ್ಞಾನಿಕ ಪರೀಕ್ಷೆ ನಡೆಸಿದ ನಂತರ ಈ ಸತ್ಯ ಬಹಿರಂಗವಾಗುವುದು. ಇದರ ಕುರಿತಾದ ಮೊಕದ್ದಮೆ ನ್ಯಾಯಾಲಯದಲ್ಲಿ ಬಾಕಿ ಇದೆ. ಕೆಲವು ಹಿಂದುಗಳು ಈ ಶಿವಲಿಂಗ ಭಗ್ನವಾಗಿರುವುದರಿಂದ ಅದರ ಪೂಜೆ ಮಾಡಲು ಸಾಧ್ಯವಿಲ್ಲ ಎಂದು ಕುತರ್ಕ ಮಾಡುತ್ತಿದ್ದಾರೆ. ಆದರೆ ಕಾಶಿಯಿಂದ ೫ ಮೈಲಿ ಕ್ಷೇತ್ರದಲ್ಲಿ ಭಗ್ನಗೊಂಡಿರುವ ಶಿವಲಿಂಗದ ಪೂಜೆ ಮಾಡಲು ಕೂಡ ಧರ್ಮಮಾನ್ಯತೆ ಇದೆ.

ಜ್ಞಾನವಾಪಿ ಶಿವಲಿಂಗದ ಕುರಿತು ನಮ್ಮ ಧಾರ್ಮಿಕ ಭಾವನೆಗಳಿವೆ. ಈ ಪ್ರಕರಣವು ನಮಗೆ ಭಕ್ತಿಯ ಮಾರ್ಗವಾಗಿದೆ. ನಾವು ಈ ಪ್ರಕರಣವನ್ನು ಶಿವನ ಬಗೆಗಿನ ಪವಿತ್ರ ಭಾವನೆಯೊಂದಿಗೆ ಹೋರಾಡುತ್ತಿದ್ದೇವೆ ಎಂದರು.

ಕಾಶಿ ವಿಶ್ವೇಶ್ವರನ ದೇವಸ್ಥಾನ ನೆಲೆಸಮ ಮಾಡಿರುವ ಸುಳ್ಳು ಕಥೆಗಳನ್ನು ಪ್ರಸ್ತುತ ಪಡಿಸಲಾಯಿತು ! – ಸುಪ್ರಸಿದ್ಧ ಲೇಖಕ ವಿಕ್ರಮ ಸಂಪತ

ಸುಪ್ರಸಿದ್ಧ ಲೇಖಕ ವಿಕ್ರಮ ಸಂಪತ

ಕಾಂಗ್ರೆಸ್ಸಿನ ಕಾಲದಲ್ಲಿ ಕಾಶಿ ವಿಶ್ವೇಶ್ವರ ದೇವಸ್ಥಾನ ನೆಲೆಸಮ ಮಾಡಿದ ಬಗ್ಗೆ ಸುಳ್ಳು ಕಥೆಗಳನ್ನು ಪ್ರಸ್ತುತ ಪಡಿಸಲಾಯಿತು. ರಾಜಪುತ ರಾಜನ ರಾಣಿಯರ ಮೇಲೆ ಕಾಶಿ ವಿಶ್ವೇಶ್ವರ ದೇವಸ್ಥಾನದ ಅರ್ಚಕರು ಬಲಾತ್ಕಾರ ಮಾಡಿರುವುದರಿಂದ ರಾಜಪುತ ರಾಜರ ಆಗ್ರಹದಿಂದ ಔರಂಗಜೇಬನು ದೇವಸ್ಥಾನ ನೆಲಸಮ ಮಾಡಿರುವ ಸುಳ್ಳು ಕಥೆಯನ್ನು ಸೃಷ್ಟಿಸಲಾಗಿತ್ತು. ಮೇಲಿಂದ ಮೇಲೆ ಅದೇ ಸುಳ್ಳು ಹೇಳಿದರೆ ಅದು ನಿಜ ಎಂದನಿಸುತ್ತದೆ.

ರಾಜಪುತರ ಹೇಳಿಕೆಯಿಂದ ಔರಂಗಜೇಬನು ಕಾಶಿ ವಿಶ್ವೇಶ್ವರನ ದೇವಸ್ಥಾನ ನೆಲೆಸಮ ಮಾಡಿದ್ದರೆ, ಸೋಮನಾಥ, ಮಥುರಾದಲ್ಲಿನ ದೇವಸ್ಥಾನಗಳನ್ನು ಯಾರ ಹೇಳಿಕೆಯ ಮೇಲೆ ನೆಲಸಮ ಮಾಡಲಾಯಿತು ? ಔರಂಗಜೇಬನು ಗೋರಿಯಿಂದ ಹೊರ ಬಂದು ಕಾಶಿ ವಿಶ್ವೇಶ್ವರನ ದೇವಸ್ಥಾನ ಏಕೆ ಧ್ವಂಸ ಮಾಡಿದ? ಇವರು ಏನೇ ಹೇಳಿದರೂ ಗೊಂದಲಗೊಂಡ ಹಿಂದುಗಳು ಅದರ ಮೇಲೆ ಎಂದೂ ವಿಶ್ವಾಸ ಇಡಲಾರರು. ಈ ಪುಸ್ತಕದ ಮಾಧ್ಯಮದಿಂದ ಕಾಶಿ ವಿಶ್ವೇಶ್ವರ ಮತ್ತು ಜ್ಞಾನವಾಪಿ ಶಿವಲಿಂಗ ಈ ವಿಷಯದ ಸತ್ಯ ಇತಿಹಾಸ ಎಲ್ಲರ ಮುಂದೆ ಬರುವುದು ಎಂದರು.