ಜ್ಞಾನವಾಪಿ ಸಮೀಕ್ಷೆಗೆ ಆದೇಶ ನೀಡಿದ ನ್ಯಾಯಾಧೀಶರ ಕೊಲೆ ಸಂಚು !

ನ್ಯಾಯಾಧೀಶರ ಭದ್ರತೆ ಹೆಚ್ಚಿಸಲು ಆಗ್ರಹ !

ವಾರಣಾಸಿ (ಉತ್ತರ ಪ್ರದೇಶ) – ವಾರಣಾಸಿಯ ಜ್ಞಾನವಾಪಿ ಸಮೀಕ್ಷೆಗೆ ಆದೇಶಿಸಿದ ನ್ಯಾಯಾಧೀಶ ರವಿಕುಮಾರ ದಿವಾಕರ ಅವರಿಗೆ ಇಸ್ಲಾಮಿಕ್ ಕಟ್ಟರವಾದಿಗಳಿಂದ ಬೆದರಿಕೆಗಳು ಬರುತ್ತಿವೆ. ಅವರ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ. ನ್ಯಾಯಾಧೀಶ ರವಿಕುಮಾರ ದಿವಾಕರ ಅವರ ಭದ್ರತೆ ಅಸಮರ್ಪಕವಾಗಿದ್ದು, ಭದ್ರತೆ ಹೆಚ್ಚಿಸಬೇಕಿದೆ ಎಂದು ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಹೇಳಿದೆ.

ರವಿಕುಮಾರ ದಿವಾಕರ ಅವರು ಬರೇಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದಾರೆ. 2022 ರಲ್ಲಿ, ಅವರು ಜ್ಞಾನವಾಪಿಯ ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಳ್ಳಲು ಭಾರತೀಯ ಪುರಾತತ್ವ ಸಮೀಕ್ಷೆಗೆ ಅನುಮತಿ ನೀಡಿದ್ದರು. ಕೆಲ ದಿನಗಳ ಹಿಂದೆ ಅದನಾನ್ ಖಾನ್ ಎಂಬ ಭಯೋತ್ಪಾದಕ ಬೆದರಿಕೆ ಹಾಕಿದ್ದ. ಇಸ್ಲಾಮಿಕ್ ಕಟ್ಟರವಾದಿಗಳು ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ ಎಂದು ‘ಎನ್.ಐ.ಎ.’ ಹೇಳಿದೆ. ಈ ಹಿನ್ನೆಲೆಯಲ್ಲಿ ‘ಎನ್‌.ಐ.ಎ.’ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿವೇಕಾನಂದ ಶರಣ್ ತ್ರಿಪಾಠಿ ಅವರು ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು ನ್ಯಾಯಾಧೀಶ ರವಿಕುಮಾರ ದಿವಾಕರ್ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಜೂನ್ 3, 2024 ರಂದು ಅದನಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆಗಳಿಂದ ಬೆದರಿಕೆ ಬರುತ್ತಿದೆ ಎಂದು ನ್ಯಾಯಾಧೀಶ ದಿವಾಕರ್ ಅವರು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು. ಅವರ ಕುಟುಂಬಗಳಿಗೂ ಜೀವ ಬೆದರಿಕೆ ಹಾಕಲಾಗಿದೆ.

ಸಂಪಾದಕೀಯ ನಿಲುವು

ಈ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಜಾಪ್ರಭುತ್ವ ಪ್ರೇಮಿಗಳು ಏಕೆ ಮೌನವಾಗಿದ್ದಾರೆ ? ಈಗ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’, ಎಂದು ಅವರಿಗೆ ಅನಿಸುವುದಿಲ್ಲವೇ ?