‘ನ್ಯಾಯಾಲಯ ಆಯುಕ್ತ’ರ ನೇಮಕಾತಿಯ ವಿರುದ್ಧ ಅಂಜುಮನ್ ಇಂತಜಾಮಿಯಾ ಕಮಿಟಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಂತಜಾಮಿಯಾ ಕಮಿಟಿಯು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯಲ್ಲಿ ನ್ಯಾಯಾಲಯದ ಆಯುಕ್ತರ ನೇಮಕಾತಿಯನ್ನು ವಿರೋಧಿಸಲಾಗಿತ್ತು.

ದೆಹಲಿಯಲ್ಲಿ ಭಾಜಪದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ

ರಾಜಧಾನಿ ದೆಹಲಿಯ ಮಯೂರ ವಿಹಾರ ಪರಿಸರದಲ್ಲಿ ಭಾಜಪದ ಜಿಲ್ಲಾ ಸಚಿವರಾದ ಜೀತೂ ಚೌಧರಿಯವರನ್ನು ಗುಂಡಾಗಳು ಗುಂಡಿಕ್ಕಿ ಕೊಲೆ ಮಾಡಿದುರ. ಜೀತೂ ಚೌಧರಿಯವರು ಮಯೂರ ವಿಹಾರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡಾಗಳು ಅವರ ಮೇಲೆ ಗುಂಡು ಹಾರಿಸಿದರು.

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರ ಅಸ್ಸಾಂ ಪೊಲೀಸರಿಂದ ಬಂಧನ

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರನ್ನು ಅಸ್ಸಾಮಿನ ಪೊಲೀಸರು ಏಪ್ರಿಲ್‌ ೨೦ರ ರಾತ್ರಿ ಇಲ್ಲಿಂದ ಬಂಧಿಸಿದಿದ್ದಾರೆ. ಅವರನ್ನು ಅಸ್ಸಾಮಿಗೆ ಕರೆದೊಯ್ಯಲಾಗುವುದು. ಮೇವಾಣಿಯವರ ವಿರುದ್ಧ ಅಸ್ಸಾಮಿನಲ್ಲಿ ಅನೇಕ ಅಪರಾಧಗಳು ದಾಖಲಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ.

ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ ಫೋನಿನಲ್ಲಿ ಜೋರಾಗಿ ಹಾಡು ಕೇಳುವುದು ಅಥವಾ ಮಾತನಾಡುವುದು ಅಪರಾಧ

ರೈಲ್ವೇಯ ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣಿಸುವಾಗ ಯಾವುದೇ ಪ್ರಯಾಣಿಕರು ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಜೋರಾಗಿ ಹಾಡು ಕೇಳುವಂತಿಲ್ಲ. ಇತರೆ ಪ್ರಯಾಣಿಕರಿಂದ ಅಂತಹ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಕೇರಳದಲ್ಲಿ ರಾ. ಸ್ವ. ಸಂಘದ ಸ್ವಯಂಸೇವಕನ ಕೊಲೆ

ಇಲ್ಲಿ ಏಪ್ರಿಲ ೧೬ ರಂದು ಶ್ರೀನಿವಾಸನ್ (ವಯಸ್ಸು ೪೫) ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿದರು. ಅವರು ತಮ್ಮ ಅಂಗಡಿಯಲ್ಲಿ ಕುಳಿತುಕೊಂಡಿರುವಾಗ ಅವರ ಮೇಲೆ ದಾಳಿ ನಡೆಸಲಾಯಿತು.

‘ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ !’ (ಅಂತೆ) – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಮಾಡುವುದನ್ನು ಮಾಡಿ ನಮ್ಮದೇ ಸರಿ ಅನ್ನುವ ನಿಲುವನ್ನು ಹೊಂದಿರುವ ಜಿಹಾದಿ ಮಾನಸಿಕತೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ! ಅನೇಕ ಜಿಹಾದಿ ದಾಳಿಗಳಲ್ಲಿ ತೊಡಗಿರುವ ಇಂತಹ ಪ್ರವೃತ್ತಿಗಳನ್ನು ಆಗಿಂದಾಗಲೇ ನಿಗ್ರಹಿಸುವುದು ಅಗತ್ಯವಿದೆ ! ಈಗಲಾದರೂ ಈ ಸಂಘಟನೆಯನ್ನು ಕೇಂದ್ರ ಸರಕಾರ ಶೀಘ್ರವೇ ನಿಷೇಧಿಸಬೇಕು, ಎಂದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ!

ಎಟಾ (ಉತ್ತರಪ್ರದೇಶ) ದಲ್ಲಿ ದರ್ಗಾದ ಪರಿಸರದಲ್ಲಿ ಶ್ರೀ ಹನುಮಾನ ಮತ್ತು ಶನಿದೇವರ ಮೂರ್ತಿಗಳು ಪತ್ತೆ

ಜಲೆಸರ ಬಡೆಮಿಯಾಂ ದರ್ಗಾದಿಂದ ೧೦ ಮೀಟರ ದೂರದಲ್ಲಿ ಪೊಲೀಸ ಚೌಕಿ ಕಟ್ಟಲು ಉತ್ಖನನ ಮಾಡುತ್ತಿದ್ದಾಗ ಅಲ್ಲಿ ಶ್ರೀ ಹನುಮಾನ ಮತ್ತು ಶನಿದೇವರ ಮೂರ್ತಿಗಳು ಪತ್ತೆಯಾಗಿವೆ. ಸಧ್ಯ ಈ ಮೂರ್ತಿಗಳನ್ನು ಇಲ್ಲಿನ ವಿಶ್ರಾಂತಿ ಗೃಹದಲ್ಲಿ ಇರಿಸಲಾಗಿದೆ.

ಬರೇಲಿ (ಉತ್ತರಪ್ರದೇಶ) ಇಲ್ಲಿ ಮತಾಂಧನು ಮೊಬೈಲನಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಹೇಳುವ ಹಾಡನ್ನು ಹಚ್ಚಿದ ಖೇದಕರ ಘಟನೆ !

ಮತಾಂಧ ಅಂಗಡಿಯವನು ಮೊಬೈಲ್‌ನಲ್ಲಿ ಹಾಡನ್ನು ಹಾಕಿ ಅದರಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಮಾಡುತ್ತಿರುವ ಒಂದು ವೀಡಿಯೊ ಪ್ರಸಾರ ವಾಗಿದೆ. ಈ ಪ್ರಕರಣದ ಕುರಿತು ಪೊಲೀಸರಲ್ಲಿ ದೂರು ನೀಡಲಾಗಿದೆ.

ಎಟಾ (ಉತ್ತರಪ್ರದೇಶ) ಇಲ್ಲಿ ಹಿಂದೂಗಳು ಅರ್ಪಣೆ ನೀಡುತ್ತಿದ್ದ ದರ್ಗಾದಲ್ಲಿ ೯೯ ಕೋಟಿ ರೂಪಾಯಿಯ ಅವ್ಯವಹಾರ !

ಜಿಲ್ಲೆಯ ಜಲೇಸರ್‌ನಲ್ಲಿರುವ ‘ಬಡೆ ಮಿಯಾ-ಛೋಟೆ ಮಿಯಾ’ ಹೆಸರಿನ ದರ್ಗಾದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ದರ್ಗಾದ ನಿರ್ವಹಣೆಯನ್ನು ಸರಕಾರಿ ಅಧಿಕಾರಿಗಳು ವಹಿಸಿಕೊಂಡಿದ್ದಾರೆ.

ಕನ್ಯಾಕುಮಾರಿಯಲ್ಲಿ ಶಾಲಾ ವಿದ್ಯಾರ್ಥಿಗಳ ಮತಾಂತರಕ್ಕೆ ಯತ್ನಿಸಿದ ಕ್ರೈಸ್ತ ಶಿಕ್ಷಕಿ ಅಮಾನತು

ಕನ್ನಟ್ಟುವಿಳೈ ಸರಕಾರಿ ಪ್ರೌಢಶಾಲೆಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿ ಮತಾಂತರಕ್ಕೆ ಯತ್ನಿಸಿದ ಶಿಕ್ಷಕಿಯ ವಿರುದ್ಧ ೬ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಪೋಷಕರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಾರೆ.