ಎಟಾ (ಉತ್ತರಪ್ರದೇಶ) ದಲ್ಲಿ ದರ್ಗಾದ ಪರಿಸರದಲ್ಲಿ ಶ್ರೀ ಹನುಮಾನ ಮತ್ತು ಶನಿದೇವರ ಮೂರ್ತಿಗಳು ಪತ್ತೆ

ದೇಶದಲ್ಲಿ ಸಾವಿರಾರೂ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿ, ದರ್ಗಾಗಳನ್ನು ನಿರ್ಮಿಸಿರುವುದರ ಇತಿಹಾಸವಿರುವದರಿಂದ ಇಂತಹ ಸ್ಥಳದಲ್ಲಿ ಉತ್ಖನನ ಮಾಡಿದರೆ ಇಂತಹ ವಿಗ್ರಹಗಳು ಸಿಗುತ್ತವೆ !

ಎಟಾ (ಉತ್ತರಪ್ರದೇಶ) – ಇಲ್ಲಿಯ ಜಲೆಸರ ಬಡೆಮಿಯಾಂ ದರ್ಗಾದಿಂದ ೧೦ ಮೀಟರ ದೂರದಲ್ಲಿ ಪೊಲೀಸ ಚೌಕಿ ಕಟ್ಟಲು ಉತ್ಖನನ ಮಾಡುತ್ತಿದ್ದಾಗ ಅಲ್ಲಿ ಶ್ರೀ ಹನುಮಾನ ಮತ್ತು ಶನಿದೇವರ ಮೂರ್ತಿಗಳು ಪತ್ತೆಯಾಗಿವೆ. ಸಧ್ಯ ಈ ಮೂರ್ತಿಗಳನ್ನು ಇಲ್ಲಿನ ವಿಶ್ರಾಂತಿ ಗೃಹದಲ್ಲಿ ಇರಿಸಲಾಗಿದೆ.

ಈ ಮಾಹಿತಿ ಪಡೆದ ನಂತರ ಸ್ಥಳೀಯ ಶಾಸಕ ಸಂಜೀವ ದಿವಾಕರರಲ್ಲಿ ತಲುಪಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ, “ಇಲ್ಲಿ ದರ್ಗಾ ಅಲ್ಲ ಮಂದಿರವಿತ್ತು ಮತ್ತು ಈಗ ಈ ಪರಿಸರದಲ್ಲಿ ದೇವಸ್ಥಾನ ಕಟ್ಟಿಸಿ ಇಲ್ಲಿ ಮೂರ್ತಿಗಳ ಸ್ಥಾಪನೆ ಮಾಡಲಾಗುವುದು.” ಎಂದು ಹೇಳಿದರು. ಸ್ಥಳೀಯ ಜನರು ‘ಇಲ್ಲಿ ಮೊದಲಿನಿಂದಲೂ ಶನಿದೇವರ ದೇವಸ್ಥಾನವಿತ್ತು’ ಹೀಗೆ ಹೇಳುತ್ತಿದ್ದರು.