ಕೇರಳದಲ್ಲಿ ರಾ. ಸ್ವ. ಸಂಘದ ಸ್ವಯಂಸೇವಕನ ಕೊಲೆ

ಅದರ ಮೊದಲು ಪಿ.ಎಫ್.ಐ. ಕಾರ್ಯಕರ್ತನ ಕೊಲೆ

ಕೇರಳದಲ್ಲಿ ಕಾಯಿದೆ ಹಾಗೂ ಸುವ್ಯವಸ್ಥೆ ಹದಗೆಟ್ಟಿದ್ದರಿಂದ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಯೋಗ್ಯ !

ಪಾಲಕ್ಕಾಡ (ಕೇರಳ) – ಇಲ್ಲಿ ಏಪ್ರಿಲ ೧೬ ರಂದು ಶ್ರೀನಿವಾಸನ್ (ವಯಸ್ಸು ೪೫) ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿದರು. ಅವರು ತಮ್ಮ ಅಂಗಡಿಯಲ್ಲಿ ಕುಳಿತುಕೊಂಡಿರುವಾಗ ಅವರ ಮೇಲೆ ದಾಳಿ ನಡೆಸಲಾಯಿತು. ಈ ಘಟನೆ ನಡೆಯುವ ಕೆಲವು ಗಂಟೆಗಳ ಹಿಂದೆ ಒಂದು ಊರಿನಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಸುಬೈರ (ವಯಸ್ಸು ೪೩) ಎಂಬ ಕಾರ್ಯಕರ್ತನ ಕೊಲೆ ಮಾಡಲಾಯಿತು. ಅವನು ನಮಾಜ ಮುಗಿಸಿ ಮನೆಗೆ ಹಿಂದಿರುಗುತ್ತಿರುವಾಗ ಅವನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದರು. ಶ್ರೀನಿವಾಸನ್‌ರವರ ಕೊಲೆಯ ಹಿಂದೆ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ರಾಜಕೀಯ ಶಾಖೆಯಿರುವ ‘ಸೋಶಲ ಡೆಮೊಕ್ರಾಟಿಕ ಪಾರ್ಟಿ’ಯ ಕೈವಾಡವಿರುವುದಾಗಿ ಭಾಜಪವು ಆರೋಪಿಸಿದೆ.