ಸರಕಾರದಿಂದ ವಿಚಾರಣೆಯ ಆದೇಶ
ಡಿಎಂಕೆ ರಾಜ್ಯದಲ್ಲಿ ಏನು ನಡೆಯುತ್ತಿದೆ ? ಸರಕಾರ ಹಿಂದೂ ವಿರೋಧಿ ಮತ್ತು ಕ್ರೈಸ್ತರ ಓಲೈಕೆಯ ನೀತಿ ಅನುಸರಿಸುತ್ತಿರುವುದರಿಂದ ಮತಾಂಧ ಕ್ರೈಸ್ತರ ದುರಹಂಕಾರ ಹೆಚ್ಚಾಗಿದೆ. ಇದನ್ನು ತಡೆಯಲು ತಮಿಳುನಾಡಿನಲ್ಲಿ ಪರಿಣಾಮಕಾರಿ ಹಿಂದೂ ಸಂಘಟನೆಯ ಆವಶ್ಯಕತೆಯಿದೆ !
ಕನ್ಯಾಕುಮಾರಿ (ತಮಿಳುನಾಡು) – ಇಲ್ಲಿಯ ಕನ್ನಟ್ಟುವಿಳೈ ಸರಕಾರಿ ಪ್ರೌಢಶಾಲೆಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿ ಮತಾಂತರಕ್ಕೆ ಯತ್ನಿಸಿದ ಶಿಕ್ಷಕಿಯ ವಿರುದ್ಧ ೬ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಪೋಷಕರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಾರೆ. ಈ ಘಟನೆಯ ಕುರಿತು ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ‘ಈ ವಿಚಾರಣೆಯ ವರದಿ ಶೀಘ್ರವೇ ಸಿಗಲಿದೆ; ಅಲ್ಲಿಯವರೆಗೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ’, ಎಂದು ತಮಿಳುನಾಡು ಶಿಕ್ಷಣ ಸಚಿವ ಅನಬಿಲ್ ಮಹೇಶ್ ತಿಳಿಸಿದ್ದಾರೆ. ವಿದ್ಯಾರ್ಥಿಯ ತಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದಾರೆ.
Tamil Nadu: Teacher in Kanyakumari allegedly forces student to convert to Christianity https://t.co/mHrCu6TahY
— Republic (@republic) April 13, 2022
೧. ‘ಈ ಶಾಲೆಯ ಶಿಕ್ಷಕಿ ಬೀಟ್ರೈಸ್ ಥಂಗಮ್ ಅವರು ಮಕ್ಕಳಿಗೆ ಹೊಲಿಗೆ ಕಲಿಸುತ್ತಾರೆ. ಅವರು ತರಗತಿಯಲ್ಲಿ ನಿರಂತರವಾಗಿ ಕ್ರೈಸ್ತ ಧರ್ಮದ ಗುಣಗಾನ ಮಾಡುತ್ತಿರುತ್ತಾರೆ ಹಾಗೂ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಟಿಪ್ಪಣೆ ನೀಡುತ್ತಿರುತ್ತಾರೆ’, ಎಂದು ವಿದ್ಯಾರ್ಥಿನಿಯು ತನ್ನ ಪೋಷಕರಿಗೆ ತಿಳಿಸಿದ್ದಳು. ಇದಾದ ಬಳಿಕ ಪೋಷಕರು ಒಂದು ಹಿಂದೂ ಸಂಘಟನೆಯ ಸದಸ್ಯರೊಂದಿಗೆ ಸೇರಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ನಡೆದ ವಿಷಯವನ್ನು ತಿಳಿಸಿದ್ದಾರೆ.
೨. ಶಾಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ಕರೆಸಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
೩. ವಿದ್ಯಾರ್ಥಿನಿಯ ಪೋಷಕರ ಪ್ರಕಾರ, ನಾವು ಪೊಲೀಸರಿಗೆ ದೂರು ನೀಡಲು ಬಯಸುವುದಿಲ್ಲ; ಆದರೆ ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.